ಆರೇಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ – ಸ್ವಂತ ಮಗಳಿಂದಲೇ ಆರೋಪ

ಈಗಾಗಲೇ 33 ವರ್ಷದ ಮಗಳಿದ್ದರು ಮಗಳಿಗಿಂತ ಮೂರು ವರ್ಷ ಕಿರಿಯ ಅಂದರೆ 30 ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗ ಹೊರಟ ಪಾದ್ರಿಯ ಮೇಲೆ ಸ್ವಂತ ಮಗಳೇ ದೂರು ನೀಡಲು ಮುಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.‌ ಅಲ್ಲದೇ ತನ್ನ ತಂದೆ ಚರ್ಚ್‌ಗೆ ಬರುವ ಆರೇಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದಾವಣಗೆರೆ ಜಯನಗರದ ಚರ್ಚ್‌ನ ಪಾದ್ರಿ ಪಿ. ರಾಜಶೇಖರನ್ ವಿರುದ್ಧ ಅವರ ಪುತ್ರಿ 33 ವರ್ಷದ ಡೈಸಿಪ್ರಿಯಾ ಗಂಭೀರ ಆರೋಪ ಮಾಡಿದ್ದಾರೆ.

ಚರ್ಚ್‌ಗೆ ಬರುವ ಮಹಿಳೆಯರು ತನ್ನ ಬಳಿ ಸಂಕಷ್ಟ ಹೇಳಿ ಕೊಂಡಿದ್ದು ಈಗ ವಯಸ್ಸಿನಲ್ಲಿ ಬಾರೀ ಅಂತರ ಇರುವ ಯುವತಿಯನ್ನು ಮದುವೆಯಾಗ ಹೊರಟಿರುವ ತಂದೆಯ ನಡೆಯನ್ನು ಡೈಸಿ ಪ್ರಿಯಾ ಖಂಡಿಸಿದ್ದಾರೆ. ಡೈಸಿಪ್ರಿಯಾ ಜೊತೆಗೆ ಕ್ರಿಶ್ಚಿಯನ್ ಸಮುದಾಯದ ಪಾಸ್ಟರ್ ಅಸೋಸಿಯೇಷನ್, ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಮತ್ತು ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ವೆಲಪೆರ್ ಅಸೋಸಿಯೇಷನ್ ಬೆಂಬಲ ನೀಡಿದೆ.

ತಂದೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೇಳು ಮಹಿಳೆಯರ ಪೈಕಿ ಓರ್ವ ಶಿಕ್ಷಕಿಯೂ ಸೇರಿದ್ದು ಆ ಶಿಕ್ಷಕಿಯ ಸರ್ವೀಸ್ ರಿಜಿಸ್ಟರ್ ‌ನಲ್ಲಿ ನಾಮಿನಿ ಆಗಿ ರಾಜಶೇಖರ್ ಹೆಸರು ಇರುವ ದಾಖಲೆ ಬಿಡುಗಡೆ ಮಾಡಿದ್ದಾರೆ.

ಪಾದ್ರಿ ರಾಜಶೇಖರ್ ವಿರುದ್ಧ ಈ ಹಿಂದೆ ದಲಿತ ಮಹಿಳೆಗೆ ಆಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಮದುವೆಯಾಗುತ್ತಿದ್ದಾನೆ ಎಂದು ಬಂಜಾರ ಸಮಾಜವು ಆರೋಪ ಮಾಡಿತ್ತು. ‌ಈಗ ಮಗಳು ಡೈಸಿ ಪ್ರಿಯಾ ಜೊತೆ ಉಳಿದ ಕ್ರಿಶ್ಚಿಯನ್ ಸಂಘಟನೆಗಳು ಕೂಡಾ ಪಾದ್ರಿ ವಿರುದ್ಧ ದೂರು ಕೊಡಲು ಮುಂದಾಗಿವೆ.

You might also like
Leave A Reply

Your email address will not be published.