ವಿಶೇಷ ಕ್ಷಣಗಳಿಗೆ ಸಾಕ್ಷಿಯಾದ ಟೆಸ್ಟ್ ಕ್ರಿಕೆಟ್ – ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ತವರಲ್ಲೇ ಸೋಲು!

ದೀರ್ಘ ಮಾದರಿಯ ಟೆಸ್ಟ್ ಕ್ರಿಕೆಟ್ ಬೋರಿಂಗ್ ಎಂದವರಿಗೆ ಈಗಿನ ಟೆಸ್ಟ್ ಕ್ರಿಕೆಟ್ ಹೊಸ ರೋಮಾಂಚನವನ್ನೇ ನೀಡುತ್ತಿದೆ. ಅದರ ನಡುವೆ ಟೆಸ್ಟ್ ಕ್ರಿಕೆಟ್ ಇವತ್ತು ಎರಡು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ.

ವೆಸ್ಟ್ ಇಂಡೀಸ್ ಪರ ಏಳು ವಿಕೆಟ್ ಕಿತ್ತು ಮಿಂಚಿದ ದಾಖಲೆಗೆ ಕಾರಣರಾದ ಶಮರ್ ಜೋಸೆಫ್

ಆಸ್ಟ್ರೇಲಿಯಾ ತಂಡವನ್ನು ಗಬ್ಬಾದಲ್ಲಿ ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ ಮ‌ಣಿಸಿದ್ದು ಇಂದಿಗೂ ಇತಿಹಾಸವಾಗಿದ್ದು ಗೊತ್ತೇ ಇದೆ. ಈ ನಡುವೆ ಆಸ್ಟ್ರೇಲಿಯಾದ ಎದುರು ಪ್ರತಿಬಾರಿಯೂ ಮುಗ್ಗರಿಸುತ್ತಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡ, ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ತನ್ನ ಸಂಪೂರ್ಣ ಬಲ ಕಳೆದುಕೊಂಡಿತ್ತು. ಇದೀಗ ಕ್ರೆಗ್ ಬ್ರಾತ್ ವೈಟ್ ನಾಯಕತ್ವದ ಯುವ ಪಡೆ, ಕಾಂಗರೂಗಳಿಗೆ ಅವರ ನೆಲದಲ್ಲೇ ರೋಚಕ ಹಣಾಹಣಿಯಲ್ಲಿ ಸೋಲುಣಿಸಿದೆ.

Shamar Joseph

ಮೂವತ್ತು ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಕೆರಿಬಿಯನ್ನರ ಗೆಲುವು

ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್ನುಗಳಿಗೆ ಆಲೌಟಾದ ವೆಸ್ಟ್ ಇಂಡೀಸ್ ತಂಡವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವೇಗದ ಬೌಲರ್‌ಗಳ ಬಿಗು ದಾಳಿಗೆ ಬೆದರಿ ಕೇವಲ 289 ರನ್ನುಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡರೂ, ಆಲೌಟ್ ಒಪ್ಪಿಕೊಳ್ಳದೆ ಡಿಕ್ಲೇರ್ ನೀಡಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ 197 ರನ್ನುಗಳಿಗೆ ವೆಸ್ಟ್ ಇಂಡೀಸ್ ಅನ್ನು ಕಟ್ಟಿಹಾಕಿ‌ 215 ರನ್ನುಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ, ಯುವ ಬೌಲರ್ ಶಮರ್ ಜೋಸೆಫ್ ದಾಳಿಗೆ ಧೂಳೀಪಟಗೊಂಡು, ಸ್ಟೀವನ್ ಸ್ಮಿತ್ ಅವರ ಏಕಾಂಗಿ ಹೋರಾಟದ ನಡುವೆಯೂ 207 ರನ್ನುಗಳಿಗೆ ಆಲೌಟಾಗಿ, ಎಂಟು ರನ್ನುಗಳ ಅಂತರದಿಂದ ಸೋಲುಂಡಿತು. ಈ ಮೂಲಕ ಆಸ್ಟ್ರೇಲಿಯಾವನ್ನು ಅದರ ತವರು ನೆಲದಲ್ಲೇ, ಅದರಲ್ಲೂ ಗಬ್ಬಾದಂತಹ ಪಿಚ್ ನಲ್ಲಿ ಸೋಲಿಸುವ ಮೂಲಕ ಮೂವತ್ತು ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕೀರ್ತಿಗೆ ವೆಸ್ಟ್ ಇಂಡೀಸ್ ತಂಡ ಪಾತ್ರವಾಗಿದೆ.

A victory for the Caribbean on Australian soil

ಇತ್ತ ಹೈದರಾಬಾದ್‌ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್-ಭಾರತದ ನಡುವಿನ ಟೆಸ್ಟ್ ಕ್ರಿಕೆಟ್ ಹಣಾಹಣಿಯಲ್ಲಿ, ಸ್ಪಿನ್ನರ್’ಗಳ ನೆರವಿನಿಂದ ಇಂಗ್ಲೆಂಡ್ ತಂಡವು ಭಾರತಕ್ಕೆ ತವರಿನಲ್ಲೇ ಸೋಲುಣಿಸಿ ಮುಖಭಂಗವಾಗುವಂತೆ ಮಾಡಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಬೆನ್ ಸ್ಟೋಕ್ಸ್ ನಾಯಕತ್ವದ ಬೇಜ್’ಬಾಲ್ ತಂತ್ರದಿಂದ ಕೂಡಿದ ಇಂಗ್ಲೆಂಡ್ ತಂಡವನ್ನು‌ ಮಣಿಸುತ್ತದೆ ಎಂದು ಕಾದವರಿಗೆ, ಇಂಗ್ಲೆಂಡ್ ಸ್ಪಿನ್ನರ್’ಗಳು ಶಾಕ್‌ ನೀಡಿದ್ದಾರೆ.

ಟರ್ನಿಂಗ್ ಪಿಚ್ ನಲ್ಲಿ ಬ್ಯಾಟ್ ಮಾಡಿದ ಎರಡೂ ತಂಡಗಳು ಬೃಹತ್ ಮೊತ್ತವನ್ನು ಪೇರಿಸುವಲ್ಲಿ ವಿಫಲವಾದರೂ, ಬ್ಯಾಟಿಂಗ್ ಕ್ಷಮತೆಯನ್ನು ಪರೀಕ್ಷಿಸಿದಂತಿತ್ತು.

ಬೌಲಿಂಗ್’ನಲ್ಲಿ ಮಿಂಚಿದ ಜೋ ರೂಟ್ – ಹಾರ್ಟ್ಲಿ

ಮೊದಲ ಇನ್ನಿಂಗ್ಸ್‌ನಲ್ಲಿ 246 ಮೊತ್ತಕ್ಕೆ ಆಲೌಟಾದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಆಲೀ ಪೋಪ್ ಚಚ್ಚಿದ 196 ರನ್ ನೆರವಿನಿಂದ 420 ರನ್ ಪೇರಿಸಿತ್ತು.
ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ 436 ರನ್ನು ಪೇರಿಸಿದ್ದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ ಮತ್ತು ಆಲ್ರೌಂಡರ್’ಗಳ ವೈಫಲ್ಯತೆಯೊಂದಿಗೆ ಕೇವಲ 202 ರನ್ನುಗಳಿಗೆ‌ ಆಲೌಟಾಗಿ ಆಂಗ್ಲರ ತಂಡದೆದುರು ಮುಖಭಂಗ ಅನುಭವಿಸಿದೆ. ಇಡೀ ಪಂದ್ಯದಲ್ಲಿ ಪಾರ್ಟ್ ಟೈಮ್‌ ಸ್ಪಿನ್ನರ್ ಜೋ ರೂಟ್ ಪ್ರಮುಖ ವಿಕೆಟ್‍ಗಳನ್ನು ಕಿತ್ತರೆ, ಯುವ ಸ್ಪಿನ್ನರ್ ಟಾಮ್ ಹಾರ್ಟ್ಲಿ ಭಾರತಕ್ಕೆ ಆಘಾತ ನೀಡುವಂತೆ ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಕಬಳಿಸಿ ಮಿಂಚಿದರು.

Joe Root who shined in bowling' - Hartley

ಏನೇ ಇರಲಿ, ಬೋರಿಂಗ್ ಎನ್ನಲಾಗುತ್ತಿದ್ದ ಟೆಸ್ಟ್ ಕ್ರಿಕೆಟ್ ಮಾದರಿ, ಇದೀಗ ಮತ್ತೆ ಕುತೂಹಲಕಾರಿ ಫಲಿತಾಂಶಗಳನ್ನು ಪಡೆಯುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಹೊಸ ಹುರುಪು ನೀಡುತ್ತಿರುವುದಂತೂ ಸತ್ಯ.

You might also like
Leave A Reply

Your email address will not be published.