ಜಗದೀಶ್ ಶೆಟ್ಟರ್ ಘರ್ ವಾಪ್ಸಿ ನಮಗೆಲ್ಲರಿಗೂ ಸಂತೋಷ – ಪ್ರಲ್ಹಾದ್ ಜೋಶಿ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ. ಅದರಲ್ಲೂ ತಮ್ಮ ಮನೆಗೆ ರಾಮ ಬಂದಿದ್ದಾನೆಂಬ ಸಂತಸದಲ್ಲಿ ಜನರಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ ಶೆಟ್ಟರ್, ಇದೀಗ ಮತ್ತೆ ಬಿಜೆಪಿಗೆ ಮರುಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ‌ ಪ್ರಶ್ನೆಗೆ ಇಂದು ಸಚಿವರು ಪ್ರತಿಕ್ರಿಯಿಸಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಜಗದೀಶ ಶೆಟ್ಟರ್ ಮನೆಗೆ ವಾಪಸ್ಸು ಬರುವುದರ ಕುರಿತು ನನಗೆ ತಿಳಿಸಿದ್ರು. ಆದರೆ ನನಗೆ ದೊಡ್ಡವರ ಜೊತೆ ಅಂದು ಮೀಟಿಂಗ್ ಇದ್ದ ಕಾರಣ ಸೇರ್ಪಡೆ ವೇಳೆ ಹೋಗೋಕೆ ಆಗಿರಲಿಲ್ಲ. ಇದೀಗ ಶೆಟ್ಟರ್ ಮರುಸೇರ್ಪಡೆಗೊಂಡಿದ್ದು ಪಕ್ಷಕ್ಕೆ ಬಲ ಬಂದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ‌ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ತಿಳಿಸಿದರು.

Jagdish Shettar

ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾಗಿರುವುದ್ದಕ್ಕೆ ನನ್ನಿಂದ ಯಾವುದೇ ವಿರೋಧ ಇಲ್ಲ. ಇದ್ದಿದ್ರೆ ನಾನು ನಿಮಗೆ ಹೇಳುತ್ತಿದ್ದೆ. ಆರು ತಿಂಗಳ ಹಿಂದೆ ಅವರು ವಾಪಸ್ ಬರೋದಾಗಿ‌ ಹೇಳಿದ್ದೆ. ಇದೀಗ ನನ್ನ ಹೇಳಿಕೆಯಂತೆ ಶೆಟ್ಟರ್ ಪುನಃ ಪಕ್ಷಕ್ಕೆ ಮರಳಿರುವುದು ಸಂತೋಷವಾಗಿದೆ.

ಇನ್ನೂ ಶೆಟ್ಟರ್ ಪಕ್ಷಕ್ಕೆ ಬರುವ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿ ಇದ್ದೆ ಹೀಗಾಗಿ ನನಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅಂದು ಅರವಿಂದ ಬೆಲ್ಲದ್ ನನ್ನ ಜೊತೆ ಇರಲಿಲ್ಲ. ಆದರೆ ಅದರ ಹಿಂದಿನ ದಿನ ಮಾತ್ರ ಬೆಲ್ಲದ್ ನನ್ನ ಜೊತೆ ಇದ್ರು ಎಂದರು.

ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ:

ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತವಿದೆ. ಅವರು ಬಂದರೂ ಸ್ವಾಗತ ಕೋರುತ್ತೇವೆ. ಇದೇ ವೇಳೆ ಧಾರವಾಡ ಲೋಕಸಭಾ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಜೋಶಿ ಬಿಟ್ರೆ ಇನ್ಯಾರು ಎನ್ನುವ ಮೂಲಕ ನಾನೇ ಅಭ್ಯರ್ಥಿ ಎಂದರು. ಧಾರವಾಡ ಲೋಕಸಭಾ ಟಿಕೆಟ್ ವಿಚಾರ ಪ್ರಶ್ನಿದಾಗ ಅರವಿಂದ್ ಬೆಲ್ಲದ್ ಸಹ ‘ಅವರೇ ರೀ ಅವರನ್ನ ಬಿಟ್ಟು ಯಾರಿಲ್ಲ ಯಾವ ಚರ್ಚೆನೂ ಇಲ್ಲ’ ಎಂದರು.

Pralhad Joshi

ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಘೋಷಣೆ ವಿಚಾರವಾಗಿ ನಾನು ಏನೂ ಮಾತಾಡುವುದಿಲ್ಲ.

ಗಾಲಿ ಜನಾರ್ದನ ರೆಡ್ಡಿ ಕೂಡ ತಮ್ಮ ಗೂಡು ಸೇರಲಿದ್ದಾರೆ:

Janardana Reddy

ಜಗದೀಶ ಶೆಟ್ಟರ್ ರೀತಿ ಗಂಗಾವತಿ ಶಾಸಕ ಕೆಆರ್‌ಪಿಪಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನರೆಡ್ಡಿ ಕೂಡ ಒರಿಜಿನಲ್ ಬಿಜೆಪಿ ಕಾರ್ಯಕರ್ತ. ಅವರು ಸಹ ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿಗೆ ಬರಬಹುದು.ಅವರಿಗೆ ಕಾಂಗ್ರೆಸ್‌ ನೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಆದ್ದರಿಂದ ಅವರೂ ಬಿಜೆಪಿಗೆ ಸೇರಬಹುದು ಎನ್ನುವ ಮೂಲಕ ಜನಾರ್ದನರೆಡ್ಡಿಯವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುಳಿವು ಕೊಟ್ಟರು.

You might also like
Leave A Reply

Your email address will not be published.