ಭಾರತದಲ್ಲಿ ಸಂಪತ್ತಿನ ಮರು ಹಂಚಿಕೆ ಕಾಯ್ದೆ – ನಿಮ್ಮ ಸಾವಿನ ನಂತರ ನಿಮ್ಮ ಕುಟುಂಬಕ್ಕೆ ಸಿಗುವ ಆಸ್ತಿ ಎಷ್ಟು ಗೊತ್ತೇ?

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿನ ಸಂಪತ್ತು ಪುನರ್ವಿತರಣೆ (ವೆಲ್ತ್ ರೀಡಿಸ್ಟ್ರಿಬ್ಯೂಷನ್) ಭರವಸೆಯ ವಿರುದ್ಧ ನಡೆಯುತ್ತಿರುವ ಆಕ್ರೋಶದ ನಡುವೆಯೇ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಚೇರ್ಮನ್ ಹಾಗೂ ರಾಹುಲ್ ಗಾಂಧಿಯವರ ಸಲಹೆಗಾರ ಸ್ಯಾಮ್ ಪಿತ್ರೋಡಾ ಭಾರತದಲ್ಲಿ ಅಮೇರಿಕಾದ ಹಾಗೇ ಪಿತ್ರಾರ್ಜಿತ ತೆರಿಗೆಯನ್ನು ತರಬೇಕು ಎಂದು ಸಲಹೆ ನೀಡಿದ್ದಾರೆ. ಪಿತ್ರೋಡಾ ಅವರು, ಉತ್ತರಾಧಿಕಾರದ ತೆರಿಗೆಯನ್ನು ವಿವರಿಸುವಾಗ, ಅಮೇರಿಕಾದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ 55% ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಹಾಗೂ ಉಳಿದದ್ದು ಕುಟುಂಬಕ್ಕೆ ಹೋಗುತ್ತದೆ ಕಾಂಗ್ರೆಸ್ ತನ್ನ ಸಂಪತ್ತಿನ ಮರುಹಂಚಿಕೆ ಭರವಸೆಯ ಅಡಿಯಲ್ಲಿ ಇದೇ ರೀತಿಯ ನೀತಿಯನ್ನು ತರಬಹುದು ಎಂದು ಸೂಚಿಸಿದ್ದಾರೆ.

ಈ ಕುರಿತು ಮಾತನಾಡುತ್ತಾ, ಅಮೇರಿಕಾದಲ್ಲಿ ಪಿತ್ರಾರ್ಜಿತ ತೆರಿಗೆಯಿದೆ, ಒಬ್ಬನು ನೂರು ಡಾಲರ್ ಮಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಅವನು ಸತ್ತಾಗ ಅವನು ತನ್ನ ಮಕ್ಕಳಿಗೆ ಕೇವಲ 45% ಅನ್ನು ಮಾತ್ರ ವರ್ಗಾಯಿಸಬಹುದು ಹಾಗೂ ಉಳಿದ 55% ಅನ್ನು ಸರ್ಕಾರವು ಪಡೆದುಕೊಳ್ಳುತ್ತದೆ. ಇದರ ಅರ್ಥ ಸಾರ್ವಜನಿಕರಿಗೆ ಆ ಆಸ್ತಿಯಲ್ಲಿ ಪಾಲು ಹೋಗುತ್ತದೆ. ಇದೇ ಸರಿಯಾಗಿದೆ ಆದರೆ ಭಾರತದಲ್ಲಿ ಈ ನ್ಯಾಯ ಇಲ್ಲ, ಯಾರಾದರೂ ಹತ್ತು ಶತಕೋಟಿ ಮೌಲ್ಯದ ವ್ಯಕ್ತಿ ಸತ್ತರೆ ಆತನ ಪೂರ್ತಿ ಆಸ್ತಿ ಆತನ ಮಕ್ಕಳಿಗೆ ಹೋಗುತ್ತದೆ ಹಾಗೂ ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ ಎಂದು ಹೇಳಿದರು.

ಇಂತಹ ವಿಷಯಗಳು ಸಾರ್ವಜನಿಕರು ಚರ್ಚಿಸಬೇಕಾದ ವಿಷಯಗಳಾಗಿವೆ. ಸಂಪತ್ತಿನ ಮರುಹಂಚಿಕೆಯ ಬಗ್ಗೆ ನಾವು ಮಾತನಾಡುವಾಗ, ಹೊಸ ಯೋಜನೆ‌ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ ಅದು ಜನರ ಹಿತಾಸಕ್ತಿಯಾಗಿದೆಯೇ ಹೊರತು ಶ್ರೀಮಂತರ ಹಿತಾಸಕ್ತಿಗಾಗಿ ಅಲ್ಲ ಎಂದರು.

Wealth Redistribution Act in India - Do you know how much property your family gets after your death?

ಯಾರು ಎಷ್ಟು ಸಂಪತ್ತನ್ನು ಹೊಂದಿದ್ದಾರೆ ಮತ್ತು ಅದನ್ನು ಮರು ಹಂಚಿಕೆ ಮಾಡಲು ಆರ್ಥಿಕ ಸಮೀಕ್ಷೆಯನ್ನು ಮಾಡುವ ಕಾಂಗ್ರೆಸ್‌ನ ಯೋಜನೆಗಳ ಮೇಲೆ ಆಕ್ರೋಶ ಸ್ಫೋಟ ಗೊಂಡಿತ್ತು ಅಲ್ಲದೇ, ಪ್ರಧಾನಮಂತ್ರಿಯವರು ಕೂಡಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು ಹಾಗೂ ಕಾಂಗ್ರೆಸ್ ಸಂಪತ್ತನ್ನು ನುಸುಳುಕೋರರಿಗೆ ಹಂಚಿಕೆ ಮಾಡ ಬಯಸುತ್ತದೆ ಎಂದು ಪ್ರತಿಪಾದಿಸುತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತೀಯರ ಚಿನ್ನ, ಬೆಳ್ಳಿ, ಮಂಗಳಸೂತ್ರ, ಆಸ್ತಿ ಇತ್ಯಾದಿ ಆಭರಣಗಳನ್ನು ಕಿತ್ತುಕೊಂಡು ಮರು ಹಂಚಿಕೆ ಮಾಡುತ್ತದೆ ಎಂದು ಎಚ್ಚರಿಸಿದ್ದರು.

ಇನ್ನು ಸ್ಯಾಮ್ ಪಿತ್ರೋಡಾ ಅವರು, ಮಧ್ಯಮ ವರ್ಗದ ಜನರಿಗೆ, ಸ್ವಾರ್ಥಿಗಳಾಗಬೇಡಿ ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳಿಗೆ ಹೆಚ್ಚಿನ ತೆರಿಗೆ ಪಾವತಿಸಲು ಸಿದ್ಧರಾಗಿರಿ ಎಂದು ಕೇಳುವ ಮೂಲಕ ಸುದ್ದಿಯಲ್ಲಿದ್ದರು.

You might also like
Leave A Reply

Your email address will not be published.