ಬೇಸಿಗೆಯ ಧಗೆಯಲ್ಲಿ ಏರಿದ ತರಕಾರಿ ಬೆಲೆ – ಯಾವ ತರಕಾರಿಗೆ ಎಷ್ಟು ಬೆಲೆ ನೋಡಿ

ಪ್ರತಿನಿತ್ಯ ಸಾಂಬಾರು, ತಿಂಡಿಗೆ ಅಗತ್ಯವಾಗಿ ಬೇಕಿರುವ ತರಕಾರಿಗಳನ್ನು ಗ್ರಾಹಕರು ಖರೀದಿ ಮಾಡುತ್ತಿರುವಾಗ ಬೆಲೆ ಏರಿಕೆ ಕೇಳಿ ಸಪ್ಪೆ ಮೋರೆ ಹಾಕುವ ಸ್ಥಿತಿ ಸಂತೆ ಹಾಗೂ ಮಾರ್ಕೆಟ್‌ʼಗಳಲ್ಲಿ ನಿರ್ಮಾಣವಾಗಿದೆ.

ಬಿಸಿಲಿನ ಝಳದಿಂದ ಹಲವು ತರಕಾರಿ ಬೆಳೆಗಳಲ್ಲಿ ಹೂವು ಉದುರಿ, ಇಳುವರಿಗೆ ಸ್ವಲ್ಪ ಹೊಡೆತ ಬಿದ್ದಿದೆ. ಜಾತ್ರೆ, ಊರ ಹಬ್ಬಗಳು ನಡೆಯುತ್ತಿರುವುದರಿಂದ ಅನ್ನ ದಾಸೋಹಗಳು ಹೆಚ್ಚಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ, ಪೂರೈಕೆಯಲ್ಲಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಹೆಚ್ಚಾಗಿ ಅತಿವೃಷ್ಟಿಯಾಗಿ ಸೂರ್ಯನ ತಾಪ ಕಡಿಮೆಯಾಗಿ ಜಿಲ್ಲೆಯ ತರಕಾರಿ ಬೆಲೆ ಅಧಿಕ ತೇವಾಂಶದ ಕಾರಣದಿಂದ ಕೊಳೆತು ಇಳುವರಿ ಬಾರದೆ ತರಕಾರಿ ಬೆಲೆ ಏರಿತ್ತು. ಆದರೆ ಈ ವರ್ಷ ಬೇಸಿಗೆ ಹಾಗೂ ಬರ ಆವರಿಸಿರುವುದರಿಂದ ತಾಲೂಕು ಮಾತ್ರವಲ್ಲದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಿಗಿದೆ. ತರಕಾರಿ, ತೋಟಗಾರಿಕೆ ಬೆಳೆ ಉತ್ಪಾದನೆ ಕುಸಿದಿದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತ ಸಂಘಗಳು ಭವಿಷ್ಯ ನುಡಿಯುತ್ತಿವೆ.

ರಾಮನಗರ ಜಿಲ್ಲೆಗೆ ಅತಿ ಹೆಚ್ಚಾಗಿ ತರಕಾರಿಗಳು ಬೆಂಗಳೂರಿನ ಯಶವಂತಪುರ ಮಾರುಕಟ್ಟೆ, ಮಾಗಡಿ ಹಾಗೂ ಕುಣಿಗಲ್‌ ಭಾಗಕ್ಕೆ ತುಮಕೂರು ಮಾರುಕಟ್ಟೆಯಿಂದ ಸರಬರಾಜಾಗುತ್ತದೆ. ಆದರೆ ಬೆಂಗಳೂರು, ತುಮಕೂರಿನ ಬೃಹತ್‌ ಮಾರುಕಟ್ಟೆಗಳಲ್ಲೇ ತರಕಾರಿ ಬೆಲೆ ದುಪ್ಪಟ್ಟಾಗಿರುವುದರಿಂದ ಹೆಚ್ಚಿನ ಬೆಲೆ ಕೊಟ್ಟು ಗ್ರಾಹಕರು ತರಕಾರಿ ಮಾಡುತ್ತಿಲ್ಲ. ಹೀಗಾಗಿ ಸ್ಥಳೀಯ ತರಕಾರಿ ಮಾರಾಟಗಾರರು ಬೃಹತ್‌ ಮಾರುಕಟ್ಟೆಗಳಿಂದ ತರಕಾರಿ ಖರೀದಿಸದೆ ಮಳೆಯಾಗುವ ತನಕ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಜಿಲ್ಲೆಯ ಬೆಳೆಗಳಿಗೂ ನೀರಿನ ಬರ:

ಇತ್ತ ಜಿಲ್ಲೆಯಲ್ಲಿ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ನೆಟ್ಟಿದ್ದ ತರಕಾರಿ ಬೆಳೆ ನೀರಿನ ಕೊರತೆಯಿಂದ ಸಾಕಷ್ಟು ಇಳುವರಿ ಕಮ್ಮಿಯಾಗಿದೆ. ಕೊಳವೆಬಾವಿಯನ್ನೇ ನೆಚ್ಚಿಕೊಂಡು ಸಿಂಹಪಾಲು ತರಕಾರಿ ಬೆಳೆ ಇಡುತ್ತಿರುವ ರೈತರು, ಸಕಾಲಕ್ಕೆ ಮಳೆಯಾಗದೆ ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಕಮ್ಮಿಯಾಗಿ ತರಕಾರಿ ಬೆಳೆ ಕಳೆಗುಂದಿವೆ.

ಮೇ ತಿಂಗಳಲ್ಲಿ ಹೆಚ್ಚಿನ ಮಳೆಯಾದರೆ ತರಕಾರಿ ಬೆಲೆ ತಗ್ಗಲಿದೆ, ಇಲ್ಲವಾದರೆ ತರಕಾರಿ ಅಭಾವ ಸೃಷ್ಟಿಯಾಗಿ ಹೆಚ್ಚಾಗಿ ಹೊರೆ ಜಿಲ್ಲೆಗಳಿಂದ ತರಕಾರಿ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ನಷ್ಟ ಮಾಡಿವೆ:

ಮೆಣಸಿನಕಾಯಿ, ಟೊಮೇಟೊ, ಬೀನ್ಸ್‌, ಬದನೆಕಾಯಿ ಮತ್ತಿತರ ಸೂಕ್ಷ್ಮ ಬೆಳೆಗಳಾಗಿವೆ. ನೀರು ಕಡಿಮೆಯಾದರೆ ಭೂಮಿ ಒಣಗಿದಂತಾಗಿ, ಬೆಳೆ ಸೊರಗುತ್ತದೆ. ಇದರಿಂದ ಹೂವು, ಕಾಯಿಗಳು ಉದುರಲಾರಂಭಿಸುತ್ತವೆ. ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಲ್ಲಿ ತರಕಾರಿ ಬೆಳೆ ರೈತರಿಗೆ ನಷ್ಟ ಉಂಟು ಮಾಡಿವೆ.

Vegetable prices rise in summer heat - see how much each vegetable costs

ಪೂರೈಕೆ ಕಡಿಮೆ:

ಹುರುಳಿಕಾಯಿ, ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಕೆಲವು ತರಕಾರಿ ದರದಲ್ಲಿ ಏರಿಕೆಯಾಗಿದೆ. ಬೇಸಿಗೆಯಲ್ಲಿ ಬೆಳೆಗೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.

ಗುಡ್ಡೆ ತರಕಾರಿಯತ್ತ ಮೊರೆ:

ಸಾಮಾನ್ಯವಾಗಿ ಸಂತೆಗಳಲ್ಲಿ, ರಸ್ತೆ ಬದಿಗಳಲ್ಲಿ ಸಣ್ಣ ಸಣ್ಣ ತಟ್ಟೆಗಳಲ್ಲಿ ತರಕಾರಿ ಇಟ್ಟು ಒಂದು ಗುಡ್ಡೆಗೆ 10 ರೂ.ನಂತೆ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಆ ತರಕಾರಿ ಗುಡ್ಡೆ ಒಂದಕ್ಕೆ 25-35 ರೂ. ನೀಡಬೇಕಿದೆ. ಹೆಚ್ಚು ಬೆಲೆ ತೆತ್ತು ಕೆಜಿ ಲೆಕ್ಕದಲ್ಲಿ ಖರೀದಿಸಲು ಹಿಂಜರಿಯುವ ಗ್ರಾಹಕರು, ಗುಡ್ಡೆ ತರಕಾರಿಗೆ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ಸೊಪ್ಪಿನ ಬೆಲೆಯೂ ಹೆಚ್ಚಳವಾಗಿ, ಪ್ರತಿ ಕಟ್ಟಿಗೆ 10-30 ರೂ. ನೀಡಬೇಕಾಗಿದೆ.

ಇದೀಗ ಕಳೆದ 1 ವಾರದಿಂದೀಚೆಗೆ ರಾಜ್ಯದ ಹಲವೆಡೆ ಮಳೆ ಬಿದ್ದ ಪರಿಣಾಮ ಮುಂದಿನ ದಿನಗಳಲ್ಲಿ ತರಕಾರಿ ಬೆಳೆ ಚೇತರಿಸಿಕೊಳ್ಳಬಹುದು. ಹೀಗಿದ್ದರೂ ಬೇಸಿಗೆ ಮುಗಿಯುವವರೆಗೆ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಇನ್ನೂ ಕೆಲವು ದಿನ ಮಳೆ ಬಿದ್ದರೆ ಸೊಪ್ಪಿನ ದರಗಳಲ್ಲಿ ಸ್ವಲ್ಪ ಏರಿಕೆಯಾಗಲಿದೆ.

ಹಾಪ್‌ಕಾಮ್ಸ್‌ನಲ್ಲಿ ಸೊಪ್ಪು, ತರಕಾರಿ ದರ

1) ಶುಂಠಿ 200 ರೂ.
2) ಹಸಿ ಬಟಾಣಿ 240 ರೂ.
3) ಬೀನ್ಸ್‌ 165 ರೂ.
4) ಬದನೆಕಾಯಿ (ಬಿಳಿ) 60 ರೂ.
5) ಬದನಕಾಯಿ (ಗುಂಡು) 60 ರೂ.
6) ಬೀಟ್‌ರೂಟ್‌ 55 ರೂ.
7) ಹಾಗಲಕಾಯಿ 42 ರೂ.
8) ಆಲೂಗೆಡ್ಡೆ 45 ರೂ.
9) ದಪ್ಪಮೆಣಸಿನಕಾಯಿ 80 ರೂ.
10) ಹಸಿಮೆಣಸಿನಕಾಯಿ 65 ರೂ.
11) ನುಗ್ಗೇಕಾಯಿ 75 ರೂ.
12) ಈರುಳ್ಳಿ ಮಧ್ಯಮ 30 ರೂ.
13) ಸಾಂಬಾರ್‌ ಈರುಳಿ 68 ರೂ.
14) ಮೂಲಂಗಿ 60 ರೂ.
15) ನವಿಲು ಕೋಸು 70 ರೂ.
16) ಬೆಂಡೆಕಾಯಿ 60 ರೂ.
17) ಈರೇಕಾಯಿ 70 ರೂ.
18) ಕೊತ್ತಂಬರಿ ಸೊಪ್ಪು 20 ರೂ.

You might also like
Leave A Reply

Your email address will not be published.