ರೈತರಿಗೆ ಸಿಹಿಸುದ್ದಿ : ಈ ವರ್ಷ ದೀರ್ಘಕಾಲದ ಮುಂಗಾರು, ಹೆಚ್ಚಿನ ಮಳೆ

ರಾಜ್ಯದಲ್ಲಿನ 2024ರ ದೀರ್ಘಾಕಾಲಿನ ಮುಂಗಾರು ಮಳೆ (ಜೂನ್-ಸೆಪ್ಟೆಂಬರ್) ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ನೀಡಿದ್ದು, ಇನ್ನೂ ಮುಂದೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ತುಸು ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2024ರ ಮುಂಗಾರು ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡಾ 5ರಷ್ಟು ವ್ಯತ್ಯಯದೊಂದಿಗೆ ಶೇಕಡಾ 106 ರಷ್ಟು ವಾಡಿಕೆಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಗೆ ದೇಶದ ದೀರ್ಘಾವಧಿ (1991-2020) ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂ.ಮೀ ನಷ್ಟಿದೆ.

ಮುಂಗಾರು ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು (ದೀರ್ಘಾವಧಿ ಸರಾಸರಿ ಶೇಕಡಾ 104-110ರಷ್ಟು) ಮಳೆಯಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ದೇಶದಾದ್ಯಂತ ಜೂನ್​ನಿಂದ ಸೆಪ್ಟೆಂಬರ್ ಮಳೆಯ ಐದು ವರ್ಗದ ಸಂಭವನೀಯತೆಯ ಮುನ್ಸೂಚನೆಗಳು ನೈಋತ್ಯ ಮಾನ್ಸೂನ್​ ಕಾಲೋಚಿತ ಮಳೆಯ ಹೆಚ್ಚಿನ ಸಂಭವನೀಯ (ಶೇಕಡಾ 61)ಸಾಮಾನ್ಯಕ್ಕಿಂತ ಹೆಚ್ಚು ಎಂದು ಸೂಚಿಸುತ್ತದೆ.

Good news for farmers: Prolonged monsoon this year, high rainfall

ಬಹು ಆಯಾಮದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಹಾಗೂ ಹವಾಮಾನ ಮಾದರಿಗಳ ಅನ್ವಯ ಪ್ರಸ್ತುತ ಎಲ್​​ ನಿನೊ ಪರಿಸ್ಥಿತಿ ಮತ್ತುಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಮಾನ್ಸೂನ್​​ ಋತುವಿನ ಆರಂಭಿಕ ಭಾಗ ಮತ್ತು ಲಾನಿನಾ ಪರಿಸ್ಥಿತಿಗಳು ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯಕ್ಕೆ ಮುಂಗಾರು ಜೂನ್​-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ- 2024ರ ಅನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್​​ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ, ಆಗಸ್ಟ್​ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್​ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ. ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾರ್ಷಿಕ ಮಳೆಯ ಶೇಕಾಡ 74 ಕೊಡುಗೆ ನೀಡುತ್ತದೆ. ಇದು 115.3 ಸೆಂ.ಮೀ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.

You might also like
Leave A Reply

Your email address will not be published.