ಉತ್ತರಾಖಂಡದ ಎಲ್ಲೆಡೆ ಕಾಡ್ಗಿಚ್ಚಿಗೆ ವಾಯುಸೇನೆ ಹೈರಾಣು – ನಿರಂತರ ಕಾಡ್ಗಿಚ್ಚಿಗೆ ಕಾರಣವೇನು?

ನವೆಂಬರ್ 1 ರಿಂದ ಈವರೆಗೆ ಒಟ್ಟು ಬರೋಬ್ಬರಿ 575 ಬಾರಿ ಉತ್ತರಾಖಂಡ್ʼನ ಕಾಡುಗಳು ಕಾಡ್ಗಿಚ್ಚಿಗೆ ತುತ್ತಾಗಿದ್ದು, ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಗಳು ಅಲ್ಲೇ ಬೀಡುಬಿಡುವಂತಹ ಪರಿಸ್ಥಿತಿ‌ ನಿರ್ಮಾಣವಾಗಿದೆ. ಅಷ್ಟಕ್ಕೂ ನಡೆಯುತ್ತಿರುವುದೇನು? ಇಲ್ಲಿದೆ ನೋಡಿ ಕಂಪ್ಲೀಟ್‌ ಸ್ಟೋರಿ.

ಉತ್ತರಾಖಂಡ್ ನ ನೈನಿತಾಲ್‌ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ವಾಯುಸೇನೆಯ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಕಾಡುಪ್ರದೇಶಗಳಲ್ಲಿ ಬೆಂಕಿ‌ ಕಾ‌ಣಿಸಿಕೊಳ್ಳುತ್ತಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ.

ನಿನ್ನೆ ಹಬ್ಬಿದ ಕಾಡ್ಗಿಚ್ಚು ಉತ್ತರಾಖಂಡದ ಹೈಕೋರ್ಟ್ ಕಾಂಪೌಂಡ್ ಸಮೀಪಕ್ಕೂ ವ್ಯಾಪಿಸಿದ್ದು, ವಾಯುದಳ ಹಾಗೂ ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ‍ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ನೈನಿತಾಲ್ ನಗರಪಾಲಿಕೆ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಆನಂದ್, ನೈನಿತಾಲ್ ನ ಬಹುತೇಕ ಪ್ರದೇಶಗಳಿಗೆ ಈ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ವಾಯುಸೇನೆಯ ನಿಲ್ದಾಣದ ಸಮೀಪ ಯಾವುದೇ ಅನಾಹುತ ನಡೆಯದಂತೆ ತಡೆಯಲು ಹಾಗೂ ಕಾಡ್ಗಿಚ್ಚು ಸಂಪೂರ್ಣವಾಗಿ ನಂದಿಸಲು ಹೆಲಿಕಾಪ್ಟರ್’ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ‌ ಎಂದಿದ್ದಾರೆ.

Forest Fires in Uttarakhand - What is the reason for the persistent forest fires?

ಇನ್ನು ಈ ಕುರಿತು ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ, ತಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಈ ಕುರಿತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಹಾಗೂ ಮುಂದಿನ ಆದೇಶದವರೆಗೆ ನೈನಿತಾಲ್ ಸರೋವರದಲ್ಲಿ ಬೋಟಿಂಗ್ ನಡೆಸದಂತೆ ನಿರ್ಭಂಧಿಸಲಾಗಿದೆ.

ಭೀಮತಾಲ್ ಸರೋವರದಿಂದ ನೀರನ್ನು ಹೆಲಿಕಾಪ್ಟರ್ ಗಳ ಮೂಲಕ ಸಾಗಿಸಿ, ಕಾಡ್ಗಿಚ್ಚು ನಂದಿಸಲಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕುಮಾಂವ್ ಪ್ರದೇಶದಲ್ಲಿ ಒಟ್ಟು 26 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರದೇಶಗಳಿಗೆ 40 ಹೆಚ್ಚುವರಿ ಅರಣ್ಯ ಸಿಬ್ಬಂದಿಗಳನ್ನು ಇಲಾಖೆ ನಿಯೋಜಿಸಿದೆ.

ಜಖೋಲಿ ಹಾಗೂ ರುದ್ರಪ್ರಯಾಗ್ ಪ್ರದೇಶಗಳಲ್ಲಿ ಕಾಡ್ಗಿಚ್ಚಿಗೆ ಕಾರಣರಾದ ಮೂವರು ಆರೋಪಿಗಳನ್ನು ಜೈಲಿಗಟ್ಟಲಾಗಿದ್ದು, ಈ ಎಲ್ಲಾ ಪ್ರಕರಣಗಳ ಹಿಂದೆ ಕಾಡ್ಗಿಚ್ಚು ಹೊತ್ತಿಕೊಂಡಿರುವುದು ಆಕಸ್ಮಿಕವೇ ಅಥವಾ ಉದ್ದೇಶಪೂರಿತವೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.

ಏನೇ ಇರಲಿ, ಅತ್ಯಂತ ಸ್ವಚ್ಛ ಸುಂದರ ಪ್ರಕೃತಿಗೆ ಹೆಸರಾದ ಉತ್ತರಾಖಂಡ, ಕಾಡ್ಗಿಚ್ಚಿನ ದಾಹಕ್ಕೆ ಪದೇ ಪದೇ ತುತ್ತಾಗುತ್ತಿರುವುದು ಆತಂಕಕಾರಿ ಹಾಗೂ ಈ ಕುರಿತು ಸರ್ಕಾರಗಳು ಹಾಗೂ ಸೇನೆ ಸಮಗ್ರವಾಗಿ ತ್ವರಿತ ನಿರ್ಧಾರ ಕೈಗೊಳ್ಳಬೇಕಿದೆ.

You might also like
Leave A Reply

Your email address will not be published.