ಟ್ವಿಟ್ಟರ್‌ (ಎಕ್ಸ್)‌ ಬಳಕೆದಾರರಿಗೆ ಬಿಗ್‌ ಶಾಕ್‌ : ವಾರ್ಷಿಕ 82 ರೂ. ಶುಲ್ಕ ಪಾವತಿ ಕಡ್ಡಾಯ

‘ಎಕ್ಸ್’ ಅಥವಾ ಟ್ವಿಟ್ಟರ್ ನಲ್ಲಿ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. ಏನದು ಬಿಗ್ ಟ್ವಿಸ್ಟ್? ಇದರಿಂದ ಬಳಕೆದಾರರ ಮೇಲೆ ಬೀರುವ ಪರಿಣಾಮ ಏನು? ಮತ್ತಷ್ಟು ಮಾಹಿತಿಗಾಗಿ ಈ ಸುದ್ದಿ ಓದಿ.

ಹೌದು! ಎಲಾನ್ ಮಸ್ಕ್ ಎಕ್ಸ್ ಖಾತೆಯಲ್ಲಿ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದ್ದು, ಅದರ ಬಳಕೆದಾರರು ಏನಾದರೂ ಪೋಸ್ಟ್ ಬರೆಯಲು, ಯಾರಿಗಾದರೂ ರಿಪ್ಲೈ ನೀಡಲು ಅಥವಾ ಯಾವುದೇ ಒಂದು ಪೋಸ್ಟ್ ಗೆ ಲೈಕ್ ನೀಡಲು ಬಯಸಿದ್ರೆ ಹಣ ಪಾವತಿಸಲೇಬೇಕು ಎಂದು ತಿಳಿಸಿದ್ದಾರೆ.

ಇದರೊಂದಿಗೆ ಮತ್ತೊಂದು ಟ್ವಿಸ್ಟ್ ಅಂದ್ರೆ, ಹೀಗೆ ಹಣ ಪಾವತಿಸಿ ಬಳಸಬಹುದಾದ ಈ ವ್ಯವಸ್ಥೆ ಹೊಸ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆಯಂತೆ. ಎಕ್ಸ್ ನಲ್ಲಿ ಸ್ಪಾಮ್ ಹಾಗೂ ಬುಟ್ಸ್ ದೊಡ್ಡ ಸವಾಲಾಗಿದ್ದು, ಇದರ ಬೆಳವಣಿಗೆಯನ್ನು ನಿಯಂತ್ರಿಸಲು ಪ್ಲಾಟ್ ಫಾರ್ಮ್ ಗೆ ಹೊಸದಾಗಿ ಸೇರ್ಪಡೆಗೊಳ್ಳೋರಿಗೆ ಶುಲ್ಕ ವಿಧಿಸೋದು ಅನಿವಾರ್ಯವಾಗಿದೆ ಎಂದು ಸ್ವತಃ ಎಲಾನ್ ಮಸ್ಕ್ ಅವರೇ ಖುದ್ದಾಗಿ ತಿಳಿಸಿದ್ದಾರೆ.

ಇನ್ನು ಪ್ರತಿಯೊಬ್ಬರೂ ಎಕ್ಸ್ ಅನ್ನು ಉಚಿತವಾಗಿ ಫಾಲೋ ಹಾಗೂ ಬ್ರೌಸ್ ಮಾಡಬಹುದು. ಆದರೆ, ಹೊಸದಾಗಿ ಯಾರಾದ್ರೂ ‘ಎಕ್ಸ್ ‘ಗೆ ಸೇರ್ಪಡೆಯಾಗಲು ಬಯಸಿದ್ರೆ ಆಗ ಅವರಿಗೆ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೊಸ ಬಳಕೆದಾರರು ‘ಎಕ್ಸ್’ ಪ್ಲಾಟ್ ಫಾರ್ಮ್ ನಲ್ಲಿ ಪೋಸ್ಟ್ , ಲೈಕ್, ಬುಕ್ ಮಾರ್ಕ್ ಹಾಗೂ ರಿಪ್ಲೈ ಮಾಡುವ ಮುನ್ನ ಸಣ್ಣ ಮೊತ್ತದ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಸ್ಪಾಮ್ ತಗ್ಗಿಸಲು ಹಾಗೂ ಪ್ರತಿಯೊಬ್ಬರಿಗೂ ಉತ್ತಮ ಅನುಭವ ನೀಡುವ ಉದ್ದೇಶವನ್ನು ಹೊಂದಿದೆ. ಆದರೆ, ನೀವು ಈಗಲೂ ಕೂಡ ಉಚಿತವಾಗಿ ಎಕ್ಸ್ ಖಾತೆಗಳನ್ನು ಫಾಲೋ ಮಾಡಬಹುದು, ಹಾಗೆಯೇ ಬ್ರೌಸ್ ಸಹ ಮಾಡಬಹುದು’ ಎಂದು ಮಸ್ಕ್ ತಿಳಿಸಿದ್ದಾರೆ. ಅಲ್ಲದೆ, ಈ ಹೊಸ ನಿಯಮ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ದೃಢಪಡಿಸಿದ್ದಾರೆ.

ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಜಾರಿಗೆ ತರಲು ಈಗಾಗಲೇ ಮಸ್ಕ್ ಯೋಜನೆ ರೂಪಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಫೀಚರ್ಸ್ ಗಳಿಗೆ ಶುಲ್ಕ ವಿಧಿಸೋದು ಕೂಡ ಸೇರಿದೆ. ಈ ಹಿಂದೆ ಪ್ರತಿ ಎಕ್ಸ್ ಬಳಕೆದಾರರಿಗೆ ಅವರ ಉದ್ಯಮವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಶುಲ್ಕ ವಿಧಿಸುವ ಬಗ್ಗೆ ಮಸ್ಕ್ ಪ್ರಸ್ತಾಪಿಸಿದ್ದರು. ಆದರೆ, ಮೂಲ ಫೀಚರ್ ಗಳಿಗೂ ಹಣ ಪಾವತಿಸಿ ಬಳಸುವ ಯೋಚನೆ ಎಕ್ಸ್ ನ ಬಹುತೇಕ ಬಳಕೆದಾರರಿಗೆ ಇಷ್ಟವಾಗಿರಲಿಲ್ಲ.

Big shock for Twitter (X) users: Rs 82 per annum. Fee payment is mandator

ಮಸ್ಕ್ ಇಂಥ ನಿರ್ಧಾರದಿಂದ ಎಸ್ಕ್ ಬಳಕೆದಾರರ ಸಂಖ್ಯೆ ತಗ್ಗುವುದಿಲ್ಲವೆ?

ಈ ಹಿಂದೆ ಕೂಡ ಮಸ್ಕ್ ಅವರ ಎಕ್ಸ್ ಸೇವೆ ಬಳಕೆಗೆ ಶುಲ್ಕ ವಿಧಿಸುವ ಯೋಚನೆ ಬಳಕೆದಾರರಿಗೆ ಇಷ್ಟವಾಗಿಲ್ಲ ಎಂದ ಮೇಲೆ ಈಗ ಜಾರಿಗೆ ತರಲು ನಿರ್ಧರಿಸಿರುವ ಹೊಸ ನಿಯಮ ಕೂಡ ಹೊಸ ಎಕ್ಸ್ ಬಳಕೆದಾರರ ಸಂಖ್ಯೆಯನ್ನು ತಗ್ಗಿಸುವ ಸಾಧ್ಯತೆಯೂ ಇದೆ. ಹೀಗಿರುವಾಗ ಮಸ್ಕ್ ಪ್ಲಾಟ್ ಫಾರ್ಮ್ ನ ಒಟ್ಟಾರೆ ಬಳಕೆದಾರರ ಬೆಳವಣಿಗೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುವುದು ಕೂಡ ಸಹಜ.

ಆದರೆ, ಇದಕ್ಕು ಕೂಡ ಮಸ್ಕ್ ಸ್ಪಷ್ಟನೆ ನೀಡಿದ್ದಾರೆ. ‘ಬುಟ್ಸ್ ಹಾಗೂ ಸ್ಪಾಮ್ ತಡೆಗೆ ಹೊಸ ಬಳಕೆದಾರರಿಗೆ ಸಣ್ಣ ಮೊತ್ತದ ಶುಲ್ಕ ವಿಧಿಸೋದೊಂದೆ ಈಗ ಉಳಿದಿರುವ ಏಕೈಕ ಮಾರ್ಗವಾಗಿದೆ’ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ನಕಲಿ ಬುಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದಾಗಿ ಕೆಲವು ಉತ್ತಮ ಹ್ಯಾಂಡಲ್ಸ್ ಪ್ಲಾಟ್ ಫಾರ್ಮ್ ನ ನಿಜವಾದ ಬಳಕೆದಾರರಿಗೆ ಸಿಗುತ್ತಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ. ವಾರ್ಷಿಕ ಶುಲ್ಕ ಎಷ್ಟಿರಲಿದೆ ಎಂಬುದು ನಮಗೆ ಈ ತನಕ ಗೊತ್ತಿಲ್ಲ. ಆದರೆ, ಎಕ್ಸ್ ಈ ಆಯ್ಕೆಯನ್ನು ಆಯ್ದ ಮಾರುಕಟ್ಟೆಯಲ್ಲಿ ಈಗಾಗಲೇ ಪರೀಕ್ಷಿಸಿದೆ. ಅಲ್ಲಿ ಹೊಸ ಬಳಕೆದಾರರಿಗೆ ಇಡೀ ವರ್ಷಕ್ಕೆ $1 (ಅಂದಾಜು 82 ರೂ.) ಶುಲ್ಕ ವಿಧಿಸಲಾಗಿದೆ. ಅಲ್ಲದೆ, ಅಲ್ಲಿನ ಬಳಕೆದಾರರಿಗೆ ಇದೊಂದೇ ಮಾರ್ಗ ಉಳಿದಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ, ಎಕ್ಸ್ ಈಗಾಗಲೇ ತನ್ನ ಪ್ರೀಮಿಯಂ ಚಂದಾದಾರಿಕೆಯನ್ನು ವಿವಿಧ ಟೈರ್ ಗಳಲ್ಲಿ ನೀಡಿದೆ.

You might also like
Leave A Reply

Your email address will not be published.