ಶಾಂತಿಯುತವಾಗಿ ನಡೆದ 2ನೇ ಹಂತದ ಮತದಾನ – ಈ ಪ್ರದೇಶಗಳಲ್ಲಿ ಮತದಾನ ಬಹಿಷ್ಕಾರ

ಎರಡನೇ ಹಂತದಲ್ಲಿ ಕರ್ನಾಟಕವೂ ಸೇರಿ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಕೇರಳ (20), ಕರ್ನಾಟಕ (14), ರಾಜಸ್ಥಾನ (13), ಉತ್ತರ ಪ್ರದೇಶ (8), ಮಧ್ಯಪ್ರದೇಶ (6), ಅಸ್ಸಾಂ (5), ಬಿಹಾರ (5), ಛತ್ತೀಸ್‌ಗಢ (3), ಪಶ್ಚಿಮ ಬಂಗಾಳ (3), ಮಹಾರಾಷ್ಟ್ರ (8), ತ್ರಿಪುರಾ (1), ಮಣಿಪುರ (1) ಮತ್ತು ಜಮ್ಮು-ಕಾಶ್ಮೀರದ ಒಂದು ಕ್ಷೇತ್ರಕ್ಕೆ ಮತದಾನ ನಡೆಯಿತು.

2ನೇ ಹಂತದಲ್ಲಿ ಬಿಜೆಪಿ 69, ಕಾಂಗ್ರೆಸ್‌ 68, ಬಿಎಸ್‌ಪಿ 74 ಕ್ಷೇತ್ರಗಳಿಗೆ ಸ್ಪರ್ಧಿಸಿವೆ. ಕಣದಲ್ಲಿರುವ ಒಟ್ಟು 1,202 ಅಭ್ಯರ್ಥಿಗಳ ಭವಿಷ್ಯ ಈಗ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಸುಭದ್ರವಾಗಿದೆ.

ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತ?

ಒಟ್ಟಾರೆ ಶೇ. 63ರಷ್ಟು ಮತದಾನವಾಗಿದೆ. ತ್ರಿಪುರಾದಲ್ಲಿ ಅತ್ಯಧಿಕ 78.53% ಮತದಾನವಾಗಿದೆ. ಇನ್ನುಳಿದಂತೆ ಮಣಿಪುರ (77.18%), ಛತ್ತೀಸ್‌ಗಢ (73.05%), ಪಶ್ಚಿಮ ಬಂಗಾಳ (71.84%), ಅಸ್ಸಾಂ (70.66%), ಕೇರಳ (71%), ಕರ್ನಾಟಕ (70%), ಉತ್ತರ ಪ್ರದೇಶ (54%), ಮಹಾರಾಷ್ಟ್ರ (54%), ಮಧ್ಯ ಪ್ರದೇಶ (56%), ರಾಜಸ್ಥಾನ (63%), ಬಿಹಾರ (55%) ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ 72% ಮತದಾನವಾಗಿದೆ.

ಏ. 19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ 88 ಕ್ಷೇತ್ರಗಳಿಗೆ ಮತದಾನವಾಗಿದ್ದು, ಇದರೊಂದಿಗೆ 190 ಕ್ಷೇತ್ರಗಳಿಗೆ ಚುನಾವಣೆ ಸಂಪನ್ನಗೊಂಡಿದೆ. ತಮಿಳುನಾಡು, ಕೇರಳ, ರಾಜಸ್ಥಾನ, ತ್ರಿಪುರಾ, ಮಣಿಪುರದ ಅಷ್ಟೂ ಕ್ಷೇತ್ರಗಳಿಗೆ ಚುನಾವಣೆ ಮುಗಿದಂತಾಗಿದೆ.

2nd phase of polling held peacefully - Polling boycott in these areas

ಕೇರಳದಲ್ಲಿ 6% ಇಳಿಕೆ

ಕೇರಳದ 20 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 71% ಮತದಾನವಾಗಿದೆ. 2019ರ ಚುನಾವಣೆಯಲ್ಲಿ 77.84% ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಮತದಾನ ಪ್ರಮಾಣದಲ್ಲಿ 10% ಇಳಿಕೆಯಾಗಿದ್ದು ಇದು ರಾಜಕೀಯ ಪಕ್ಷಗಳನ್ನು ಚಿಂತೆಗೀಡುಮಾಡಿದೆ.

ಮತದಾನ ಬಹಿಷ್ಕಾರ

”ಮೂಲಸೌಕರ್ಯ ಕಲ್ಪಿಸಿಲ್ಲ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿ ಜನರು ಮತದಾನ ಬಹಿಷ್ಕರಿಸಿದ ಘಟನೆ ಉತ್ತರ ಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್‌ವಾರಾ, ಮಹಾರಾಷ್ಟ್ರದ ಪರ್ಬನಿ, ಅಸ್ಸಾಂ ಸಿಲ್ಚಾರ್‌ನ ಕೆಲವು ಪ್ರದೇಶಗಳಲ್ಲಿ ನಡೆದಿದೆ.

ಸದ್ಯದಲ್ಲಿ ರಾಹುಲ್‌ ಗಾಂಧಿ, ಶಶಿ ತರೂರ್‌, ರಾಜೀವ್‌ ಚಂದ್ರಶೇಖರ್‌, ಹೇಮಾ ಮಾಲಿನಿ, ವೈಭವ್‌ ಗೆಹ್ಲೋಟ್‌, ಕೆ.ಸಿ. ವೇಣುಗೋಪಾಲ್‌, ಅರುಣ್‌ ಗೋವಿಲ್‌ ಕಣದಲ್ಲಿರುವ ಪ್ರಮುಖರು.

You might also like
Leave A Reply

Your email address will not be published.