2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.8 ರಷ್ಟು- ಎಸ್ ಆ್ಯಂಡ್ ಪಿ

ಜಾಗತಿಕ ರೇಟಿಂಗ್ ಸಂಸ್ಥೆಯಾದ ಎಸ್ ಆ್ಯಂಡ್ ಪಿ, 2024- 25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ (ಜಿಡಿಪಿ) ಬೆಳವಣಿಗೆಯನ್ನು ಪರಿಷ್ಕರಿಸಿದ್ದು ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ಕಳೆದ ನವೆಂಬರ್‌ ನಲ್ಲಿ ಬಿಡುಗಡೆಗೊಳಿಸಿದ್ದ ವರದಿಯಲ್ಲಿ ಶೇ. 6.4ರಷ್ಟು ಬೆಳವಣಿಗೆ ದಾಖಲಿಸಲಿದೆ. ಇನ್ನೂ 2023-24ನೇ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 7.6ರಷ್ಟು ದಾಖಲಾಗಲಿದೆ.

ಭಾರತ, ಇಂಡೊನೇಷ್ಯಾ, ಫಿಲಿಪ್ಪಿನ್ ಹಾಗೂ ವಿಯೆಟ್ನಾಂನ ಆರ್ಥಿಕತೆಯು ಉತ್ತಮ ಬೆಳವಣಿಗೆ ದಾಖಲಿಸಲಿವೆ ಎಂದು ಎಸ್ ಅಂಡ್ ಪಿ ಸಂಸ್ಥೆ ತಿಳಿಸಿದೆ.

You might also like
Leave A Reply

Your email address will not be published.