ಭಾರತದ ಮೊದಲ ಮಾನವ ಸಹಿತ ಗಗನಯಾನ : ಗಗನಯಾನಿಗಳ ಹೆಸರು ಪ್ರಕಟಿಸಿದ ಪಿಎಂ

40 ವರ್ಷಗಳ ಬಳಿಕ ಗಗನಯಾನಕ್ಕೆ ಹೋಗುತ್ತಿರುವ ಭಾರತೀಯರ ಗಗನಯಾನಿಗಳ ಹೆಸರುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.

ಈ ನಾಲ್ಕು ಜನ ಗಗನಯಾತ್ರಿಗಳು ಈಗ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಹೆಸರುಗಳು ಕ್ರಮವಾಗಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ.‌ ತಿರುವನಂತಪುರಂನ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಅವರಿಗೆ astronaut wings ನೀಡಿದ ಬಳಿಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಲ್ಕುಜನ ಹೀರೋಗಳಿಗೆ standing ovation ನೀಡುವಂತೆ ವೀಕ್ಷಕರಲ್ಲಿ ವಿನಂತಿಸಿಕೊಂಡರು.

ಮಾತನಾಡಿದ ಪ್ರಧಾನಮಂತ್ರಿಗಳು, ಇವು ಕೇವಲ ನಾಲ್ಕು ಹೆಸರುಗಳು ಅಥವಾ ನಾಲ್ಕು ಮನುಷ್ಯರು ಮಾತ್ರ ಅಲ್ಲ ಅವರು ನಾಲ್ಕು ಶಕ್ತಿಗಳು, ನೂರ ನಲವತ್ತು ಕೋಟಿ ಭಾರತೀಯರ ಕನಸು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲಿರುವವರು ಇವರು. ಈ ಸಮಯ ನಮ್ಮದು, ಇನ್ನೇನು ಕ್ಷಣಗಣನೆ ಆರಂಭವಾಗಿವೆ. ರಾಕೆಟ್ ಕೂಡಾ ನಮ್ಮದೆ ಎಂದು ಹುರಿದುಂಬಿಸಿದ್ದಾರೆ.

ಈ ಮೊದಲು ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು 1984 ಏಪ್ರಿಲ್ 3 ರಂದು Soyuz T – 11 ನಲ್ಲಿ Soviet Interkosmos ಪ್ರೋಗ್ರಾಂ‌ನ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು ಈ ತನಕ ಭಾರತೀಯ ಗಗನಯಾನಕ್ಕೆ ತೆರಳಿದ ಭಾರತೀಯ ನಾಗರೀಕ ಕೂಡಾ ಅವರೇ ಆಗಿದ್ದಾರೆ.‌

ಈ ಗಗನಯಾತ್ರಿಗಳನ್ನು 2020-21 ರಲ್ಲೇ ಸೆಲೆಕ್ಟ್ ಮಾಡಲಾಗಿದ್ದು ಅದಕ್ಕೆ ಬೇಕಾದ ತರಬೇತಿಗಳನ್ನು ಇಸ್ರೋ ಬೆಂಗಳೂರು ಘಟಕದಲ್ಲೂ ಪಡೆದಿದ್ದಾರೆ ಹಾಗೂ ಭಾರತೀಯ ವಾಯುಪಡೆಯ ಸಹಕಾರವೂ ಇವರ ತರಬೇತಿಗೆ ದೊರೆತಿದೆ. ಗಗನಯಾನವು ಇಸ್ರೋದ ಮೊದಲ ಮಾನವ ಸಹಿತ ಬಾಹ್ಯಾಕಾಶ ಪ್ರೋಗ್ರಾಂ ಆಗಿದ್ದು ಗಗನ ಯಾನಿಗಳನ್ನು ಭೂಮಿಯಿಂದ 400 ಕಿಲೋಮೀಟರ್ ದೂರ, ಮೂರು ದಿನಗಳ ಮಟ್ಟಿಗೆ ಕಳಿಸಲಾಗುತ್ತದೆ ಹಾಗೂ ಅವರ ಹಿಂತುರುಗುವಿಕೆಯ ಲ್ಯಾಂಡಿಂಗ್ ಹಿಂದೂ ಮಹಾಸಾಗರದಲ್ಲಿ ಆಗಲಿದೆ.

ಇಸ್ರೋದ ಈ ಮಿಷನ್ ಯಶಸ್ವಿಯಾಗಿ ನಡೆಯಲಿ‌ ಎಂದು ಹಾರೈಸೋಣ.

You might also like
Leave A Reply

Your email address will not be published.