ನಾನು ಮಲಾಲಾ ಅಲ್ಲ ಎಂದಿದ್ದ ಪತ್ರಕರ್ತೆ ಯಾನರಿಗೆ ಏರ್‌ ಪೋರ್ಟ್‌ʼನಲ್ಲಿ ಅಗೌರವ – ಸತ್ಯ ಸಂಗತಿ ಇಲ್ಲಿದೆ

ಮೊನ್ನೆ ಮೊನ್ನೆಯಷ್ಟೇ ಬ್ರಿಟನ್ ಪಾರ್ಲಿಮೆಂಟಿನಲ್ಲಿ “I am not a Malala Yousafzai. I am not a Malala Yousafzai, because I will never have to run away from my home country, I am free, and I am safe in my country India, in my home in Kashmir which is part of India” ಎಂದು ಭಾಷಣ ಮಾಡಿ ಭಾರತೀಯ ಯುವಜನತೆಯ ಕಣ್ಣಿನಲ್ಲಿ ಹೀರೊ ಆಗಿ ಗುರುತಿಸಿಕೊಂಡಿದ್ದ ಕಾಶ್ಮೀರದ ಪತ್ರಕರ್ತೆ ಯಾನ ಮೀರ್ ಲಂಡನ್ ಇಂದ ವಾಪಾಸಾಗುವ ವೇಳೆ ನವ ದೆಹಲಿ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಜೊತೆ ವಾಗ್ವಾದಕ್ಮೆ ಇಳಿಯುವ ಮೂಲಕ ವಿವಾದದಿಂದ ಸುದ್ದಿಯಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದ ಯಾನ, ಲಂಡನ್‌ನಲ್ಲಿ ನನ್ನನ್ನು ಭಾರತೀಯ ಮಾಧ್ಯಮದ ಹೀರೋ ಎಂದು ಪರಿಗಣಿಸಿದರೆ ಭಾರತೀಯ ಏರ್ಪೋರ್ಟ್ ‌ನಲ್ಲಿ ಬ್ರಾಂಡ್ ಸ್ಮಗ್ಲರ್ ಎಂದು ಪರಿಗಣಿಸಿದಂತಿದೆ, ಮೇಡಂ ನಿಮ್ಮ ಬ್ಯಾಗದ ಸ್ಕ್ಯಾನ್ ಮಾಡಿ, ಓಪನ್‌ಮಾಡಿ, ನಿಮ್ಮ ಬ್ಯಾಗ್‌ನಲ್ಲಿ ಲೂಯಿಸ್ ವ್ಯಾಟ್ಟನ್ ಬ್ರಾಂಡ್‌ನ ಬ್ಯಾಗ್ ಯಾಕಿದೆ, ಎಂದೆಲ್ಲಾ ನೂರೆಂಟು ಪ್ರಶ್ನೆ ಮಾಡಿದರು ಎಂದು ಬರೆದುಕೊಂಡಿದ್ದರು. ಅವರ ಈ ಟ್ವೀಟ್ ‌ಗೆ ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಉತ್ತರ ನೀಡಿದ್ದು, ಯಾನ ಅವರು ತೀರಾ ಸಹಜವಾಗಿ ನಡೆಯಬೇಕಾಗಿದ್ದ ಪ್ರಕ್ರಿಯೆಗೆ ಆರಂಭದಿಂದಲೇ ಸಹಕರಿಸುವ ಬದಲು ಪ್ರತಿರೋಧ ಒಡ್ಡಿದರು,ಈ ಎಲ್ಲಾ ಪ್ರಕ್ರಿಯೆಗಳು ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೂ ಅನ್ವಯಿಸುತ್ತದೆ ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

ಯಾನ ಅವರು ತಮ್ಮ ಬ್ಯಾಗ್‌ಅನ್ನು ಸ್ಕ್ಯಾನರ್‌ಗೆ ಹಾಕಲು ಒಪ್ಪಲಿಲ್ಲ ಆ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಅವರ ಬ್ಯಾಗ್ ಅನ್ನು ಎತ್ತಿ ಸ್ಕ್ಯಾನರ್‌ನಲ್ಲಿ ಹಾಕುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ ಎಂದು ವಿಡಿಯೋ ತುಣುಕುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಯಾನ ಅವರ ಪಾರ್ಲಿಮೆಂಟ್ ಭಾಷಣಕ್ಕೆ ತಲೆತೂಗಿದ ಮಂದಿ ಯಾನ ಅವರು ಏರ್ಪೋರ್ಟ್ ನಲ್ಲಿ ವರ್ತಿಸಿದ ರೀತಿಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕಾನೂನಿಗೆ ಎಲ್ಲರೂ ಒಂದೇ ವಿಮಾನ ನಿಲ್ದಾಣದ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

You might also like
Leave A Reply

Your email address will not be published.