ಸಿಂಹಗಳಿಗೆ ಅಕ್ಬರ್‌, ಸೀತಾ ಎಂದು ನಾಮಕರಣ ಮಾಡಿದ್ದ ಅರಣ್ಯಾಧಿಕಾರಿ ಅಮಾನತು : ಛೀಮಾರಿ ಹಾಕಿದ ಹೈಕೋರ್ಟ್

ತ್ರಿಪುರಾದ ಮೃಗಾಲಯದಲ್ಲಿ ಎರಡು ಸಿಂಹಗಳಿಗೆ ಅಕ್ಬರ್ ಮತ್ತು ಸೀತಾ ಎಂದು ಹೆಸರಿಟ್ಟದ್ದಕ್ಕೆ ಈ ಹೆಸರುಗಳು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿಶ್ವ ಹಿಂದೂ ಪರಿಷತ್ ಕಲ್ಕತ್ತಾ ಹೈಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿದ ನಂತರ ಎಚ್ಚೆತ್ತಾ ತ್ರಿಪುರಾ ಸರ್ಕಾರವು ಶನಿವಾರ (ಫೆಬ್ರವರಿ 24) ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಪರಿಸರ ಪ್ರವಾಸೋದ್ಯಮ) ಪ್ರಬಿನ್ ಲಾಲ್ ಅಗರವಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ‌.

ಮೂಲಗಳ ಪ್ರಕಾರ ಫೆಬ್ರವರಿ 12 ರಂದು, ಪ್ರಾಣಿಗಳ ವಿನಿಮಯ ಉಪಕ್ರಮದ ಭಾಗವಾಗಿ ತ್ರಿಪುರಾದ ಸೆಪಹಿಜಾಲಾ ಮೃಗಾಲಯದಿಂದ ಪಶ್ಚಿಮ ಬಂಗಾಳದ ಸಿಲಿಗುರಿಯ ವೈಲ್ಡ್ ಅನಿಮಲ್ಸ್ ಪಾರ್ಕ್‌ಗೆ ಎರಡು ಸಿಂಹಗಳನ್ನು (ಒಂದು ಗಂಡು ಮತ್ತು ಒಂದು ಹೆಣ್ಣು) ಸಾಗಿಸಲಾಯಿತು. ಆಗ ತ್ರಿಪುರಾದ ಉನ್ನತ ವನ್ಯಜೀವಿ ವಿಭಾಗದ ವಾರ್ಡನ್ ಆಗಿದ್ದದ್ದು 1994 ನೇ ಬ್ಯಾಚ್‌ನ ಐಎಫ್ಎಸ್ ಅಧಿಕಾರಿ ಅಗರ್ವಾಲ್ ಅವರು ಹಾಗೂ ರವಾನೆ ನೋಂದಣಿಯಲ್ಲಿ ಅಲ್ಲಿನ ಅಧಿಕಾರಿಗಳು ಸಿಂಹಗಳ ಹೆಸರನ್ನು ಅಕ್ಬರ್ ಎಂದು ಸೀತಾ ಎಂದು ನಮೂದಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಆಕ್ರೋಶವನ್ನು ಕೆರಳಿಸಿದ್ದಲ್ಲದೇ ವಿಎಚ್‌ಪಿ ಘಟಕವು ಇದನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಜೋಡಿಯ ಹೆಸರನ್ನು ಬದಲಾಯಿಸುವಂತೆ ಹೈಕೋರ್ಟ್ ತೀರ್ಪು ನೀಡಿದೆ.

ಇನ್ನು ಇದನ್ನು ಪ್ರತಿಪಾದಿಸಿದ ನ್ಯಾಯಾಲಯವು ದೇಶದ ದೊಡ್ಡ ಸಮುದಾಯವು ಸೀತೆಯನ್ನು ತಾಯಿಯಂತೆ ಕಾಣುತ್ತದೆ ಹಾಗೂ ಅಕ್ಬರ್ ಓರ್ವ ದಕ್ಷ ರಾಜ ಈ ಹೆಸರುಗಳನ್ನು ಸಾಕು ಪ್ರಾಣಿಗಳಿಗೆ ಹೇಗೆ ಇಡುವ ಆಲೋಚನೆ ಮಾಡಿದಿರಿ, ನಮ್ಮಲ್ಲಿ ಯಾರಾದರೂ ಒಬ್ಬರು ಅಲ್ಲಿನ ಅಧಿಕಾರಿಗಳಾಗಿದ್ದರೂ ನಾವು ಈ ಹೆಸರುಗಳನ್ನು ಇಡುತ್ತಿರಲಿಲ್ಲ ಎಂದು ಬಂಗಾಳದ ಹೈಕೋರ್ಟ್ ತ್ರಿಪುರಾದ ಅಧಿಕಾರಿಗಳಿಗೆ ಛಾಟಿ ಬೀಸಿದೆ. ಇದಕ್ಕೆ ಉತ್ತರಿಸಿದ ಅಧಿಕಾರಿ ಅಗರ್ವಾಲ್ ತನ್ನ ಗಮನಕ್ಕೆ ಬಾರದೇ ಅಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಹೀಗೆ ಹೆಸರಿಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳ ಎಡವಟ್ಟಿಗೆ ಅಗರ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ‌.

You might also like
Leave A Reply

Your email address will not be published.