ರಾಮನಗರದಲ್ಲಿ ಶ್ರೀ ರಾಮ ಮಂದಿರ – ಶಾಸಕ ಇಕ್ಬಾಲ್ ಹುಸೇನ್

ಪ್ರಭು ಶ್ರೀ ರಾಮನು ಬಾಲರಾಮನ ರೂಪದಲ್ಲಿ ಅಯೋಧ್ಯೆಯಲ್ಲಿ ವಿರಾಜಮಾನಗೊಳ್ಳುತ್ತಿದ್ದಂತೆಯೇ ಎಲ್ಲರೊಳಗೆ ಅಡಗಿದ ರಾಮನ ಭಕ್ತಿ ಹೊರಬರುತ್ತಿದೆ. ನಿನ್ನೆ ಮೊನ್ನೆ ತನಕ ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದವರೆಲ್ಲ ಇಂದು ರಾಮಭಕ್ತರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನೇ ಅಲ್ಲವೇ ಕಲಿಗಾಲ ಎನ್ನುವುದು? ಮೊನ್ನೆ ಮೊನ್ನೆ ತಾನೇ ಫಾರುಕ್ ಅಬ್ದುಲ್ಲಾ ಅವರು ರಾಮ ನಾಮವನ್ನು ಭಜಿಸಿ ಸುದ್ದಿಯಲ್ಲಿದ್ದರು, ಇಂದು ಇರ್ಫಾನ್ ಹಬಿಬ್ ಅವರು ಔರಂಗಜೇಬನು ಕಾಶಿ ಮತ್ತು ಮಥುರದಲ್ಲಿರುವ ಮಂದಿರಗಳನ್ನು ಒಡೆದು ಮಸೀದಿ ಕಟ್ಟಿರುವುದು ಹೌದು ಎಂಬಂತೆ ಮಾತನಾಡುತ್ತಿದ್ದಾರೆ!! ಪ್ರಭು ಶ್ರೀ ರಾಮನ ಲೀಲೆ ಅಪಾರವಲ್ಲದೆ ಇನ್ನೇನು? ಕಾಂಗ್ರೆಸ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ನಲ್ಲಿ ಬಾಲರಾಮನ ವಿರುದ್ಧವಾಗಿ 24 ಜನ ವಕೀಲರನ್ನು ನೇಮಿಸಿತ್ತು. ಆದರೆ ಇಂದು ಕಾಂಗ್ರೆಸ್ ಶಾಸಕರು ರಾಮನ ಮಂದಿರ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ.

ಹೌದು, ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲು ತಯಾರಾದ ಮೂರು ವಿಗ್ರಹಗಳ ಪೈಕಿ ಉಳಿದ ಎರಡರಲ್ಲಿ ಕರ್ನಾಟಕದ ಗಣೇಶ್ ಭಟ್ ಅವರು ಕೆತ್ತಿರುವ ವಿಗ್ರಹವನ್ನು ರಾಮನಗರದಲ್ಲಿ ನಿರ್ಮಿಸಲಿರುವ ರಾಮ‌ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ತರಿಸಿಕೊಳ್ಳಲು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ಗೆ ಪತ್ರ ಬರೆಯುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಶಿಲ್ಪಿಗಳೊಂದಿಗೆ ಚರ್ಚಿಸಿರುವುದಾಗಿಯೂ ಕೂಡ ಹೇಳಿದ್ದಾರೆ.


An idol sculpted by Ganesh Bhatt of Karnataka

ಬಜೆಟ್ ನಲ್ಲಿ ಮಂದಿರಕ್ಕಾಗಿ ಹಣ ಮೀಸಲು ಇಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದವರು. ದೇವರಿಗಿಂತ ಯಾವುದೂ ದೊಡ್ಡದಿಲ್ಲ, ಬೆಟ್ಟದಲ್ಲಿ ಮಂದಿರಕ್ಕಾಗಿ ಜಾಗ ಗುರುತಿಸಲು ಸೂಚನೆ ನೀಡಿರುವುದಾಗಿ ಹೇಳಿದ ಅವರು ನಾವು ನಿಜವಾದ ರಾಮಭಕ್ತರು ಇಲ್ಲಿ ರಾಮೋತ್ಸವ ಮಾಡುವುದು ಖಚಿತ ಎಂದು ತಿಳಿಸಿದರು.

ಈಗಾಗಲೇ ಇರುವ ಪಟ್ಟಾಭಿರಾಮನ ದೇವಸ್ಥಾನ ಹಾಗೂ ಅದರ ಚಟುವಟಿಕೆಗಳಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಮಂದಿರದಿಂದಾಗಿ ಈಗಾಗಲೇ ಇರುವ ಪಟ್ಟಾಭಿರಾಮನ ಮಂದಿರಕ್ಕೆ ಹಾಗೂ ಅಲ್ಲಿ ನಡೆಯುವ ಉತ್ಸವ, ವಿವಿಧ ಪೂಜೆಗಳಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದರು.

You might also like
Leave A Reply

Your email address will not be published.