ಮೆಟ್ರೋ ನೇರಳೆ ಮಾರ್ಗ ತಾತ್ಕಾಲಿಕ ಸ್ಥಗಿತ – ಪ್ರಯಾಣಿಕರ ಪರದಾಟ

ನೇರಳೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮೆಟ್ರೋ (Namma Metro) ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಒಂದೆಡೆಯಾದರೆ, ಆಟೋ-ಕ್ಯಾಬ್ ಮಾಲೀಕರಿಗೆ ಭರ್ಜರಿ ಲಾಭವಾಗುತ್ತಿದೆ.

ಎಂಜಿ ರೋಡ್ ನಿಂದ (MG Road) ಬೈಯಪ್ಪನಹಳ್ಳಿ (Baiyappanahalli) ಮಾರ್ಗ ಸಂಚಾರ ಬಂದ್ ಆಗಿದ್ದು, ಮೊದಲು ತಾಂತ್ರಿಕ ಸಮಸ್ಯೆ ಹಿನ್ನೆಲೆ ಎಂದು ಬಿಎಂಆರ್ ಸಿಎಲ್ ವಿಷಾದ ವ್ಯಕ್ತಪಡಿಸಿತ್ತು. ಜೊತೆಗೆ ಶೀಘ್ರವೇ ಬಗೆಹರಿಸುವ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿತ್ತು.

Metro purple line

ಆದರೆ, ಇದೀಗ ಮೆಟ್ರೋ ಪವರ್ ಡಿಸ್ಟ್ರಿಬ್ಯೂಷನ್ ನಲ್ಲಿ ಸಮಸ್ಯೆಯಾಗಿದ್ದು ಅದನ್ನ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಒಂದು ಗಂಟೆಯಿಂದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ಒಂದು ಗಂಟೆ ಹೆಚ್ಚಾಗುವ ಸಾಧ್ಯತೆಯಿದೆ. ಯಾವ ಕಾರಣಕ್ಕೆ ಈ ಸಮಸ್ಯೆ ಆಯ್ತು ಅಂತ ಇನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಎಂಆರ್ ಸಿಎಲ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸಧ್ಯಕ್ಕೆ ಹೋಯ್ಸಳ ಪೊಲೀಸರು ಪ್ರಯಾಣಿಕರಿಗೆ ಈ ಕುರಿತು ಅನೌನ್ಸ್ ಮೆಂಟ್ ಮಾಡುತ್ತಿದ್ದು, ಸಾರ್ವಜನಿಕರು ಸಮಯದ ಅಭಾವ ತಪ್ಪಿಸಲು ಆಟೋ, ಕ್ಯಾಬ್ ಗಳ ಮೂಲಕ ತಮ್ಮ ತಮ್ಮ ಮನೆಗೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಬರ್, ಓಲಾ ಸೇರಿದಂತೆ ಆಟೋ-ಕ್ಯಾಬ್ ಮಾಲೀಕರಿಗೂ ಲಾಭವಾಗುತ್ತಿದೆ.

You might also like
Leave A Reply

Your email address will not be published.