ಇಸ್ಲಾಮಿನ ಕಾನೂನಿಗೆ ಗುಡ್ ಬೈ – ಸೌದಿ ಅರೇಬಿಯಾದ ಪ್ರಿನ್ಸ್ ಐತಿಹಾಸಿಕ ತೀರ್ಮಾನ

ಜಗತ್ತಿನ ಭೂಪಟದಲ್ಲಿ ಇಸ್ಲಾಮಿಕ್ ದೇಶವೆಂದೇ ಗುರುತಿಸಿಕೊಂಡ, ಮುಸಲ್ಮಾನರ ಪವಿತ್ರ ಜಾಗವಾದ ಮೆಕ್ಕಾ ಮದೀನಾ ಹೊಂದಿರುವ ಸೌದಿ ಅರೇಬಿಯಾದಲ್ಲಿ ಅಲ್ಲಿನ ರಾಜ ಕಟ್ಟುನಿಟ್ಟಿನ ಕಾನೂನು ಒಂದಕ್ಕೆ ಗುಡ್ ಬೈ ಹೇಳಿದ್ದಾರೆ. ಹೌದು, 72 ವರ್ಷಗಳಲ್ಲಿ ಮೊದಲ ಬಾರಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ ಹಾಗೂ ಈ‌ ನಿಯಮವು ಜನವರಿ 22, 2024 ರಿಂದಲೇ ಜಾರಿಗೆ ಬಂದಿದ್ದು, ಇದು ಸೌದಿ ಅರೇಬಿಯಾದಲ್ಲಿ ಕೈ ಗೊಂಡ ಐತಿಹಾಸಿಕ ನಿರ್ಣಯವೆಂದು ಬಿಂಬಿಸಲಾಗಿದೆ.

ಸೌದಿ ಅರೇಬಿಯಾ ಮತ್ತು ಇತರ ಮಧ್ಯಪ್ರಾಚ್ಯ ರಾಷ್ಟ್ರಗಳ ಹೆಚ್ಚಿನ ಆದಾಯ ತೈಲವನ್ನೇ ಅವಲಂಬಿಸಿದ್ದು, ಈಗ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಆರ್ಥಿಕತೆಯ ಮೂಲವನ್ನು ವೈವಿಧ್ಯಮಯ ಗೊಳಿಸಲು ಈ ನಿರ್ಣಯವನ್ನು ಕೈಗೊಳ್ಳಲಾಗಿದೆ‌. ಈ ನಿರ್ಧಾರವು ಸೌದಿ ಅರೇಬಿಯಾದ ‘ಮಿಷನ್ 2030’ ರ ಭಾಗವಾಗಿದೆ. ಸೌದಿ ಅರೇಬಿಯಾದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿರುವ ಜನಪ್ರಿಯತೆಯಿಂದ ತೈಲ ಬೇಡಿಕೆಯ ಜನಪ್ರಿಯತೆ ಕಡಿಮೆಯಾಗುವ ನಿರೀಕ್ಷೆ ಇರುವುದರಿಂದ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವುದು ಅನಿವಾರ್ಯವಾಗಿ ಈ ಕ್ರಮ ನಿರ್ಣಾಯಕವಾಗಿದೆ.

Prince of Saudi

ಮೊದಲ ಮದ್ಯದ ಅಂಗಡಿಯನ್ನು ರಿಯಾದ್‌ನಲ್ಲಿ ಇರುವ ರಾಜತಾಂತ್ರಿಕ ಕಟ್ಟಡದಲ್ಲಿ ತೆರಯುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸೌದಿ ಸಾಕ್ಷಿಯಾಗಿದೆ. ಇದು ಮುಸ್ಲಿಮೇತರ ವಿದೇಶಿ ರಾಜ ತಾಂತ್ರಿಕ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಲಭ್ಯವಿದ್ದು ಇದರಲ್ಲಿ ಗ್ರಾಹಕರು ‌ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬೇಕು ಹಾಗೂ ವಿದೇಶಾಂಗ ಸಚಿವಾಲಯದಿಂದ ಕ್ಲಿಯರೆನ್ಸ್ ಕೋಡ್‌ಗಳನ್ನು ಪಡೆಯುವುದಷ್ಟೇ ಅಲ್ಲದೇ ಖರೀದಿಗಳ ಮೇಲಿನ ಮಾಸಿಕ ಕೋಡಾಗಳಿಗೆ ಬದ್ಧರಾಗಿರಬೇಕು ಎಂದು ಹೇಳಲಾಗಿದೆ‌.

ಸೌದಿ ಅರೇಬಿಯಾ ದೇಶವು 1952ನೇ ಸಾಲಿನಿಂದಲೂ ಷರಿಯಾ ಕಾನೂನು ವ್ಯವಸ್ಥೆಗೆ ಒಳಪಟ್ಟಿದ್ದು ಅಂದಿನಿಂದಲೇ ಮದ್ಯವನ್ನು ಕಟ್ಟು ನಿಟ್ಟಾಗಿ ನಿಷೇಧಿಸಿತ್ತು. ಆದರೆ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಇತ್ತೀಚಿನ ನಿರ್ಧಾರಗಳಾದ ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು, ಸಿನೆಮಾ ಹಾಲ್‌ಗಳನ್ನು ತೆರೆಯಲು ಅನುಮತಿ ನೀಡುವುದು, ಸಂಗೀತ ಕಛೇರಿಗಳಿಗೆ ಅನುಮತಿ ನೀಡಿದ್ದು ಹಾಗೂ ಈಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ಸೌದಿಗೆ ಅಗತ್ಯವಿರುವ ಪ್ರಗತಿಪರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

You might also like
Leave A Reply

Your email address will not be published.