ಅಯ್ಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ? ಯಾರನ್ನು ಆಹ್ವಾನಿಸಲಾಗಿದೆ?

ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಉದ್ಘಾಟನೆಗೆ ಕ್ಷಣಗಣನೆ ಉಳಿದಿದ್ದು, ಅಯೋಧ್ಯೆ ನಗರವು ಸಿಂಗಾರಗೊಳ್ಳುತ್ತಿದೆ. ಕೋಟ್ಯಾಂತರ ಹಿಂದುಗಳ ಕನಸು ನನಸಾಗುವಿಕೆಗೆ ದಿನಗಣನೆ ಉಳಿದಿದೆ.

ಭವ್ಯ ರಾಮಮಂದಿರಕ್ಕೆ ದೇಶಾದ್ಯಂತ ಹಾಗೂ ವಿದೇಶಗಳಿಂದ ನಾನಾ ರೀತಿಯ ಉಡುಗೊರೆಗಳು ಬರುತ್ತಿರುವುದು ಸಂತಸಕರ. ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಗಳಿಂದ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಹಾಗಾದರೆ ಭವ್ಯ ರಾಮಮಂದಿರ ಉದ್ಘಾಟನೆಯಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ? ಹೀಗಾಗಲೇ ಯಾರನ್ನೆಲ್ಲ ಕರೆಯಲಾಗಿದೆ ಎಂಬುದನ್ನು ನಾವಿಲ್ಲಿ ನೋಡೋಣ!

ಧಾರ್ಮಿಕ ಮುಖಂಡರು:
ಪ್ರಾಣ ಪ್ರತಿಷ್ಠಾಪನೆಗೆ 4 ಸಾವಿರ ಸಂತರೊಂದಿಗೆ ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಹಾಗೂ ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಹೀಗಾಗಲೇ ಆಹ್ವಾನಿಸಲಾಗಿದೆ.

ಸನ್ಯಾಸಿ ಮತ್ತು ಬೈರಾಗಿಗಳ 13 ಅಖಾಡಗಳ 6 ದರ್ಶನಾಚಾರ್ಯರು, ಸ್ವಾಮಿ ವಾಸುದೇವಾನಂದ ಸರಸ್ವತಿ ಜ್ಯೋತಿರ್ಮಠದ ಶಂಕರಾಚಾರ್ಯ, ಗೋವರ್ಧನ ಪೀಠದ ಶಂಕರಾಚಾರ್ಯ, ಶಾರದಾ ಪೀಠದ ಶಂಕರಾಚಾರ್ಯ, ಶೃಂಗೇರಿ ಪೀಠದ ಶಂಕರಾಚಾರ್ಯರನ್ನು ಆಹ್ವಾನಿಸಲಾಗಿದೆ.

ಮತ್ತು ಆಚಾರ್ಯ ಮಹಾಮಂಡಲೇಶ್ವರ ವಿಶೋಕನಂದ ಭಾರತಿ ಮಹಾರಾಜ್, ಸಿಖ್ಖರ ಮಹಂತ್ ಜ್ಞಾನದೇವ್ ಸಿಂಗ್, ಅವಧೇಶಾನಂದ ಗಿರಿ, ಕಾರ್ಯಾಸಿನಿ ಜಗದ್ಗುರು ಗುರುಶರಣಾನಂದ ಜಿ ಮಹಾರಾಜ್, ಬಾಬಾ ರಾಮದೇವ್, ಗಿಯಾನಿ ಇಕ್ಬಾಲ್ ಸಿಂಗ್ ಪಾಟ್ನಾ ಸಾಹಿಬ್, ರಾಮಭದ್ರಾಚಾರ್ಯ, ರಾಮಾನುಜಾಚಾರ್ಯ, ಬೌದ್ಧ ಧರ್ಮಗುರು ರಾಹುಲ್ ಬೋಧಿ ಜಿ ಮಹಾರಾಜ್, ಆನಂದಮಯಿ ಮಾ, ದಲೈಲಾಮಾ, ರವೀಂದ್ರ ಜೈನ್, ವಿದ್ಯಾ ಭಾಸ್ಕರ್ ಅವರನ್ನು ಆಹ್ವಾನಿಸಲಾಗಿದೆ.

ಸ್ವಾಮಿನಾರಾಯಣ ಸಂಪ್ರದಾಯ, ಆರ್ಟ್ ಆಫ್ ಲಿವಿಂಗ್, ಗಾಯತ್ರಿ ಪರಿವಾರ ಸಮೇತ 2200 ಗೃಹಸ್ಥರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ.

ಟಾಟಾ, ಅಂಬಾನಿ, ಅದಾನಿಗೂ ಆಹ್ವಾನ


ಲಾರ್ಸೆನ್ ಟೂಬ್ರೊ ಮುಖ್ಯಸ್ಥರ ಜೊತೆ, ರತನ್ ಟಾಟಾ ಅವರ ಉತ್ತರಾಧಿಕಾರಿ ಚಂದ್ರಶೇಖರನ್, ಅಂಬಾನಿ ಮತ್ತು ಅದಾನಿಯರಿಗೂ ಆಹ್ವಾನಿಸಲಾಗಿದೆ.

ಸಿನಿಮಾ, ಕ್ರೀಡೆಯ ಗಣ್ಯರು:

ಕನ್ನಡ ಚಲನಚಿತ್ರ ನಟ ಯಶ್, ರಿಶಬ್ ಶೆಟ್ಟಿ, ತಮಿಳು ಚಲನಚಿತ್ರ ನಟ ರಜನಿಕಾಂತ್, ಧನುಶ್, ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್, ಗಾಯಕ ಗುರುದಾಸ್ ಮನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಜಿರಂಜೀವಿ, ಸಂಜಯ್ ಲೀಲಾ ಭನಸಾಲಿ, ಮೋಹನ್ ಲಾಲ್, ನಟಿ ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಅಜಯ್ ದೇವ್ ಗನ್, ಟೈಗರ್ ಶ್ರೋಫ್, ಆಯುಷ್ಮಾನ್ ಕೂರಾನ, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ ನಿತೀಶ್ ಭಾರದ್ವಾಜ್, ಚಲನಚಿತ್ರ ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿ ಸೇರಿದಂತೆ ಮತ್ತಷ್ಟು ಕಲಾವಿದರನ್ನು ಆಹ್ವಾನಿಸಿದ್ದಾರೆ.

ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋ SAC ನಿರ್ದೇಶಕ ನಿಲೇಶ್ ದೇಸಾಯಿ, ರಾಮ ಲಲ್ಲಾ ಸೇರಿದಂತೆ ದೇವಸ್ಥಾನದ ಕೆತ್ತನೆ ಮಾಡಿದ ಶಿಲ್ಪಿಗಳನ್ನು ಆಹ್ವಾನಿಸಲಾಗಿದೆ.

ಮಾಜಿ ಪ್ರಧಾನಿ ದೇವೇಗೌಡರಿಗೂ ಆಹ್ವಾನ:

ರಾಮ್ ಲಲ್ಲಾ ಪಟ್ಟಾಭಿಷೇಕ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ನೃಪೇಂದ್ರ ಮಿಶ್ರಾ, ವಿಎಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹಾಗೂ ಸಂಘದ ರಾಮ್ ಲಾಲ್ ತಂಡ ಆಹ್ವಾನಿಸಿದೆ. ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂಡಾ ಆಹ್ವಾನಿಸಲಾಗಿದೆ. ಆರ್ಎಸ್ಎಸ್ ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ರಾಮಲಾಲ್ ಹಾಗೂ ಇತರರು ಜೆಪಿ ನಗರದ ನಿವಾಸಕ್ಕೆ ಭೇಟಿ ಕೊಟ್ಟು ಆಹ್ವಾನ ನೀಡಿದರು.

ಪ್ರಾಣ ತ್ಯಾಗ ಮಾಡಿದ ಕುಟುಂಬಗಳಿಗೆ ಆಹ್ವಾನ:

ರಾಮ ಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮಭಕ್ತರ ಕುಟುಂಬದ ಸದಸ್ಯರು, ಕೈಗಾರಿಕಾ ಲೋಕದ ಮುಖ್ಯಸ್ಥರು, ತಿರುಪತಿ, ವೈಷ್ಣೋದೇವಿ, ಕಾಶಿ ವಿಶ್ವನಾಥ ದೇಗುಲ ಪ್ರಮುಖರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ.

 


25 ಆರ್ಎಸ್ಎಸ್ ಕಾರ್ಯಕರ್ತರು, 100 ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸಿಆರ್ಪಿಎಫ್ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ.

ಯಾರೆಲ್ಲ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ:
ಇವರನ್ನು ಹೊರತುಪಡಿಸಿ ವಿಜ್ಞಾನಿಗಳು, ಮಾಧ್ಯಮ ಸಂಸ್ಥೆಗಳ ಮಾಲೀಕರು, ಬರಹಗಾರರು, ಸಾಹಿತಿಗಳು, ರಂಗಭೂಮಿ ಮತ್ತು ಚಲನಚಿತ್ರದವರು, ಕವಿಗಳು, ಕ್ರೀಡೆ ಕಲಾವಿದರು, ರಾಜಕಾರಣಿಗಳು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಅನೇಕ ಗಣ್ಯರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕೆಲವರನ್ನು ಈಗಾಗಲೇ ಆಹ್ವಾನಿಸಲಾಗಿದೆ.

You might also like
Leave A Reply

Your email address will not be published.