ಹಾಲಿನ ದರ ಕೂಡಲೇ ಹೆಚ್ಚಿಸಿ – ಮನ್ಮುಲ್ ಒಕ್ಕೂಟಕ್ಕೆ ರೈತ ಸಂಘದ ಎಚ್ಚರಿಕೆ

ಬರಗಾಲದ ನಡುವೆಯೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್) ಹಾಲು ಉತ್ಪಾದಕರಿಗೆ ಪ್ರತಿ ಲೀಟರ್’ಗೆ 33.50 ರೂ. ಇದ್ದ ಬೆಲೆಯಲ್ಲಿ ದಿಢೀರ್ 1.50 ರೂ. ಕಡಿತಗೊಳಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೈನುಗಾರಿಕೆಯನ್ನೇ ನಂಬಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ರೈತರಿಗೆ ಏಕಾಏಕಿ ಬೆಲೆಯಲ್ಲಿ ಇಳಿತ ಮಾಡಿರುವುದರಿಂದ ಕಂಗಾಲಾಗಿದ್ದಾರೆ. ಏಕೆಂದರೆ, ಡಿಸೆಂಬರ್ 1 ರಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು (ಕೆ.ಎಮ್.ಎಫ್) ಪಶು ಆಹಾರದ ಬೆಲೆಯನ್ನು ಚೀಲಕ್ಕೆ 50 ರೂಪಾಯಿ ಏರಿಕೆ ಮಾಡಿ ಪರಿಷ್ಕೃತ ದರವನ್ನು ಜಾರಿ ಮಾಡಿತ್ತು. ಇದೀಗ ಮನ್ಮುಲ್ ಒಕ್ಕಟವೂ ಪ್ರತಿ ಲೀಟರ್ ಹಾಲಿಗೆ 1.50 ರೂ. ಇಳಿಕೆ ಮಾಡಿದೆ.

ಒಂದೆಡೆ ಪಶು ಆಹಾರದ ಬೆಲೆ ಏರಿಕೆಯಾಗಿದ್ದು, ಮತ್ತೊಂದೆಡೆ ಹಾಲಿನ ಬೆಲೆ ಇಳಿಕೆ ಮಾಡಿರುವುದರಿಂದ ರೈತರ ಸಂಘವು ಕಿಡಿಕಾರಿದೆ. ಕೂಡಲೇ ಹಾಲಿನ ದರವನ್ನು ಹೆಚ್ಚಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

You might also like
Leave A Reply

Your email address will not be published.