ಮಕ್ಕಳಿಗೆ ಆಂಜನೇಯ ಆದರ್ಶವಾಗಿರಲಿ, ಸಾಂತಾಕ್ಲಾಸ್ ಅಲ್ಲ : ಧೀರೇಂದ್ರ ಶಾಸ್ತ್ರೀ ಸ್ವಾಮಿ, ಭಾಗೇಶ್ವರ ಧಾಮ

ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಬಿಜೆಪಿಗಾಗಿ ಕೆಲವು ಸೀಟುಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಸುದ್ದಿಯಾಗಿದ್ದ ಭಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರೀ ಸ್ವಾಮಿ ಈಗ ಕ್ರಿಸ್ಮಸ್ ವೇಳೆ ಇನ್ನೊಮ್ಮೆ ಸುದ್ದಿಯಾಗಿದ್ದಾರೆ. ನಿನ್ನೆ ಮಾಧ್ಯಮದ ಮುಂದೆ ಮಾತನಾಡಿದ ಧೀರೇಂದ್ರ ಶಾಸ್ತ್ರೀಯವರು ಕ್ರಿಸ್ಮಸ್ ಮತ್ತು ಸಾಂತಾಕ್ಲಾಸ್ ಆಚರಣೆಗಳು ಭಾರತೀಯವಲ್ಲ. ಭಾರತೀಯರಿಗೂ ಇದಕ್ಕೂ ಸಂಬಂಧವೇ ಇಲ್ಲ. ಹಾಗಿದ್ದಾಗ ಭಾರತೀಯರು ಇದನ್ನು ಆಚರಿಸುವ ಅಗತ್ಯವೇನಿದೆ? ಹಿಂದೂ ತಂದೆತಾಯಿಗಳು ಮಕ್ಕಳನ್ನು ‌ ಸಾಂತಾಕ್ಲಾಸ್ ಆಚರಿಸಲು ಕಳಿಸುವ ಬದಲು ಹನುಮಾನ್ ಮಂದಿರಕ್ಕೆ ಕಳಿಸಿ ಎಂದಿದ್ದಾರೆ.

ಇದೇ ವೇಳೆಗೆ ಮಾತನಾಡುತ್ತಾ, ಹಿಂದೂ ತಂದೆತಾಯಂದಿರು ಮಕ್ಕಳಿಗೆ ರಾಣಿ ಲಕ್ಷ್ಮೀ ಬಾಯಿ, ಮೀರಾಬಾಯಿ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳನ್ನು ಹೇಳಬೇಕು. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಸಾಂತಾಕ್ಲಾಸ್ ವೇಷ ಹಾಕುವುದನ್ನೂ ವಿರೋಧಿಸಿದ ಇವರು, ವೇಷ ಹಾಕುವ ಮೊದಲು ತಂದೆ ತಾಯಂದಿರ ಅಪ್ಪಣೆ ಪಡೆದಿರಬೇಕು ಎಂದಿದ್ದರು. ಈ ಮೊದಲು ಡಿಸೆಂಬರ್ 14ಕ್ಕೆ ಮಧ್ಯ ಪ್ರದೇಶದ ಶಾಜಾಪುರ ಶಾಲೆಯು, ಮಕ್ಕಳು ಸಾಂತಾಕ್ಲಾಸ್ ಅಥವಾ ಕ್ರಿಸ್ಮಸ್ ಟ್ರೀ ಅಥವಾ ಕ್ರಿಸ್ಮಸ್ ಆಚರಣೆಗಳಲ್ಲಿ ಭಾಗವಹಿಸುವ ಮೊದಲು ಕಡ್ಡಾಯವಾಗಿ ತಂದೆತಾಯಿಗಳ ಒಪ್ಪಿಗೆ ಪಡೆದಿರಬೇಕು. ಒಂದು ವೇಳೆ ಒಪ್ಪಿಗೆ ಪಡೆಯದೇ ಆಚರಿಸಿದ್ದು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿತ್ತು.

You might also like
Leave A Reply

Your email address will not be published.