ಉಡುಗೊರೆ ಬೇಡ ಮೋದಿಗೆ ಮತ ಹಾಕಿ : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಪರ ಪ್ರಚಾರ

ಪ್ರತಿಯೊಬ್ಬರು ಕೂಡ ತಮ್ಮ ಮದುವೆಯ ಕುರಿತು ನಾನಾ ಬಗೆಯಲ್ಲಿ ಕನಸು ಕಾಣುವುದರೊಂದಿಗೆ, ಮದುವೆ ಮಂಟಪ, ಆಮಂತ್ರಣ ಪತ್ರಿಕೆ ಹೇಗಿರಬೇಕು? ಫೋಟೋ ಶೂಟ್’ಗೆ ಯಾವ ಪ್ಲೇಸ್ ಗೆ ಹೋಗ್ಬೇಕು? ಹನಿಮೂನ್ ಹೀಗೆ ನಾನಾ ವಿಚಾರಗಳ ಕುರಿತು ಯೋಚಿಸಿರುತ್ತಾರೆ. ಹಾಗೆಯೇ ತಮ್ಮ ಮದುವೆಯ ಬಗ್ಗೆ ನಾಲ್ಕು ಜನರು ಮಾತನಾಡಿಕೊಳ್ಳಲಿ ಎಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ತನ್ನ ಮಗನ ಮದುವೆಯ ಕಾರ್ಡ್’ನಲ್ಲಿ ಮೋದಿ ಪರ ಪ್ರಚಾರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ತೆಲಂಗಣದ ಸಂಗಾರೆಡ್ಡಿ ಜಿಲ್ಲೆಯ ವರನ ತಂದೆ ನಂದಿಕಾಂತಿ ನರಸಿಂಹಲು ಮತ್ತು ತಾಯಿ ನಂದಿಕಾಂತಿ ನಿರ್ಮಲಾ ಅವರು ಆಮಂತ್ರಣ ಪತ್ರಿಕೆಯಲ್ಲಿ ‘ಉಡುಗೊರೆ ಬೇಡ, ಅದರ ಬದಲಿಗೆ ಮೋದಿಗೆ ಮತ ಹಾಕಿ’ ಎಂದು ಮನವಿ ಮಾಡಿಕೊಳ್ಳುವ ಮೂಲಕ ಸದ್ಯ ಎಲ್ಲೆಡೆ ಸುದ್ದಿಯಾಗಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 4ರಂದು ಸಂಗರೆಡ್ಡಿ ಜಿಲ್ಲೆಯ ಅರುಟ್ಲಾ ಎಂಬ ಗ್ರಾಮದಲ್ಲಿ ಮದುವೆ ನಡೆಯಲಿದೆ.

ಸಾಮಾಜಿಕ ಜಾಲತಾಣಗಳಲ್ಲಂತೂ ವೈರಲ್ ಆಗಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರದೊಂದಿಗೆ ‘ನರೇಂದ್ರ ಮೋದಿಗೆ ಮತ ನೀಡುವುದು ನೀವು ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ’ ಎಂದು ಬರೆಯುವ ಮೂಲಕ ಮೋದಿ ಮೇಲಿನ ವಿಶೇಷ ಅಭಿಮಾನವನ್ನು ತೋರಿಸಿದ್ದಾರೆ.

Vote for Modi: Pro-Modi campaign in wedding invitations

ಈ ಬಗ್ಗೆ ವರನ ತಂದೆ ನಂದಿಕಾಂತಿ ನರಸಿಂಹಲು ಅವರು ಪ್ರತಿಕ್ರಿಯಿಸಿದ್ದು, ‘ಮೊದಲು ಕುಟುಂಬಸ್ಥರ ಬಳಿ ಇಂತಹದ್ದೊಂದು ಪ್ರಸ್ತಾಪವನ್ನು ಇಟ್ಟೆನು. ನರೇಂದ್ರ ಮೋದಿ ಪರವಾಗಿ ಪ್ರಚಾರ ಮಾಡಲು, ಆಮಂತ್ರಣ ಪತ್ರಿಕೆ ಮೂಲಕವೂ ಜನರ ಮನವೊಲಿಸಲು ನನ್ನ ಕುಟುಂಬಸ್ಥರು ಕೂಡ ಒಪ್ಪಿಗೆ ನೀಡಿದ್ದರಿಂದ ಮೋದಿ ಅವರಿಗೆ ಮತ ನೀಡಿ ಎಂಬುದಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ದೇಶದ ಪ್ರಧಾನಿ ಮೋದಿಯವರಿಗೆ ಗೌರವ ಸೂಚಿಸಲು ಈ ರೀತಿಯ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

You might also like
Leave A Reply

Your email address will not be published.