ವಿಕೆ ಹಾಗೂ ಡಿಕೆ ಅಬ್ಬರ : RCB ಗೆಲುವಿನ ಮಧ್ಯೆ ಕುಟುಂಬಕ್ಕೆ ಕೊಹ್ಲಿ ವಿಡಿಯೋ ಕರೆ

ಐಪಿಎಲ್ ಟಿ20 ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಗೆಲ್ಲಲು 177 ರನ್’ಗಳ ಕಠಿಣ ಗುರಿಯನ್ನು ಪಡೆದ್ದಿದ್ದ ಆರ್.ಸಿ.ಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 178 ರನ್ ಹೊಡೆದು ಮೊದಲ ಜಯ ದಾಖಲಿಸಿತು.

ಪಂದ್ಯ ಗೆದ್ದ ಬೆನ್ನಲ್ಲೇ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ತನ್ನ ಫ್ಯಾಮಿಲಿ ಸದಸ್ಯರಿಗೆ ವೀಡಿಯೋ ಕರೆ ಮಾಡಿ ಮಾತನಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಪಂದ್ಯದಲ್ಲಿ ಆರ್.ಸಿ.ಬಿ ಬ್ಯಾಟರ್ ಕೊಹ್ಲಿ 77 ರನ್ ಅಂದರೆ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್, ಮಹಿಪಾಲ್ ಅವರ ಸಿಕ್ಸರ್ ಬೌಂಡರಿ ನೆರವಿನಿಂದ ಆರ್.ಸಿ.ಬಿ (RCB) ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಕೊಹ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನವೂ ತಂಡದ ಗೆಲುವಿಗೆ ನೆರವಾಯಿತು.

You might also like
Leave A Reply

Your email address will not be published.