ಬೆಂಗಳೂರಲ್ಲಿ ಅಕ್ರಮ ಬೋರ್‌ʼವೆಲ್‌ ಕೊರೆತ : ಕಾನೂನು ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರಿನಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಉಷ್ಟಾಂಶ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಈ ಮಧ್ಯೆ ಕುಡಿಯುವ ನೀರಿನ ಅಭಾವ ಇರುವ ಹಿನ್ನೆಲೆ ಜಲಮಂಡಳಿ ನಾನಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಇದರ ಮಧ್ಯೆ ಅನುಮತಿ ಇಲ್ಲದೇ ಅನಧಿಕೃತವಾಗಿ ಬೋರ್ವೆಲ್ ಕೊರೆಯಬಾರದು ಎಂದು ಆದೇಶ ಮಾಡಿದ್ದರೂ ಸಹ ನಗರದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 20 ಅಕ್ರಮ ಬೋರ್’ವೆಲ್ ಗಳು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಆದೇಶವನ್ನೂ ಲೆಕ್ಕಿಸದೆ ಬೆಂಗಳೂರಿನ ದಕ್ಷಿಣ ವಲಯ, ಪೂರ್ವ ವಲಯ ಕೆಆರ್ಪುರಂ ಮತ್ತು ಮಹಾದೇವಪುರ ವಲಯದಲ್ಲಿ 20 ಬೋರವೆಲ್’ಗಳನ್ನು ಅನಧಿಕೃತವಾಗಿ ಕೊರೆದಿರುವುದು ಪತ್ತೆಯಾಗಿದೆ. ಕೆಆರ್ ಪುರಂನ ವಿಭೂತಿಪುರದಲ್ಲಿ ಅನಧಿಕೃವಾಗಿ ಬೋರ್’ವೆಲ್ ಕೊರೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸುಮಾರು 20 ಅಕ್ರಮ ಬೋರ್’ವೆಲ್ ಪತ್ತೆಯಾಗಿದ್ದು, ಕೊರೆಸಿದವರ ವಿರುದ್ಧ ಜಲಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

ನಗರದಲ್ಲಿ ಅನಧಿಕೃತವಾಗಿ ಬೋರ್ವೆಲ್ ಕೊರೆದಿರೋದು ಕಂಡು ಬಂದರೆ ಸಾರ್ವಜನಿಕರು ಜಲಮಂಡಳಿಗೆ ದೂರು ಕೊಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು, 1619 ಸಂಖ್ಯೆಗೆ ಕರೆ ಮಾಡುವಂತೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮನವಿ ಮಾಡಿದ್ದಾರೆ.

You might also like
Leave A Reply

Your email address will not be published.