ಹಾರ್ದಿಕ್ vs ರೋಹಿತ್ – ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್ ಪಾಂಡ್ಯ

ಈ ಬಾರಿಯ ಐಪಿಎಲ್‌ ಆವೃತ್ತಿ ಆರಂಭಕ್ಕೂ ಮುನ್ನವೇ ವಿವಾದಗಳಿಂದಲೇ ಪ್ರಸಿದ್ಧಿ ಪಡೆದಿತ್ತು. ಈ ಬಾರಿಯ ಬಿಡ್ಡಿಂಗ್’ನಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತಕ್ಕೆ ಸೇಲಾಗಿರುವುದು ಒಂದೆಡೆಯಾದರೆ, ಗುಜರಾತಿನ ವಿನ್ನಿಂಗ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಅವರ ತವರು ತಂಡ ಮುಂಬೈ ಇಂಡಿಯನ್ಸ್ ಆಂತರಿಕ ಟ್ರೇಡಿಂಗ್ ಮೂಲಕ ಖರೀದಿಸಿ, ಐದು ಬಾರಿಯ ಐಪಿಎಲ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ಕೂರಿಸಿದ್ದು ಬಹಳಷ್ಟು ವಿವಾದಕ್ಕೆ ಕಾರಣವಾಗಿತ್ತು.

ಈಗಾಗಲೇ ಸಿಕ್ಕಸಿಕ್ಕ ಸೋಷಿಯಲ್ ಮೀಡಿಯಾಗಳಲ್ಲಿ ಹಾರ್ದಿಕ್ ಪಾಂಡ್ಯರನ್ನು ಹಾಗೂ ಮುಂಬೈ ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಫ್ಯಾನ್ಸ್, ಮುಂಬೈ ಮತ್ತು ಹಾರ್ದಿಕ್ ಕೇವಲ ದುಡ್ಡಿಗಾಗಿ ಐಪಿಎಲ್ ನಡೆಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ಟೀಕೆಗಳ‌ ನಡುವೆಯೇ ಆರಂಭವಾದ ಐಪಿಎಲ್ ಪಂದ್ಯಗಳಲ್ಲಿ, ಮುಂಬೈ ತನ್ನ ಮೊದಲ ಪಂದ್ಯವನ್ನು ನಿನ್ನೆ ರವಿವಾರ, ಶುಭ್‌ ಮನ್ ಗಿಲ್‌ ನಾಯಕತ್ವದ ಗುಜರಾತ್ ಟೈಟನ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಹಾರ್ದಿಕ್‌‌‌ ಮತ್ತೊಮ್ಮೆ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೆ ನಡೆದಿದ್ದೇನು? ಇಲ್ಲಿದೆ ನೋಡಿ ವಿವರ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹಾರ್ದಿಕ್, ಮೊದಲ ಓವರ್ ತಾನೇ ಎಸೆದಿದ್ದರು. ಅದಲ್ಲದೇ ಪ್ರತಿ ಓವರ್‌ಗಳ ನಡುವೆಯೂ ಫೀಲ್ಡ್‌’ನಲ್ಲಿ ನಿರಂತರ ಬದಲಾವಣೆ ನಡೆಸಿದ್ದ ಹಾರ್ದಿಕ್, ರೋಹಿತ್ ಶರ್ಮಾರನ್ನು ಫೀಲ್ಡಿಂಗ್ ಗೆ ನಿಲ್ಲಿಸುವಲ್ಲಿ ನಡೆಸುತ್ತಿದ್ದ ಪ್ಲಾನ್ ಮಾತ್ರ ವಿಚಿತ್ರವಾಗಿಯೇ ಕಾಣಿಸುತ್ತಿತ್ತು.

ಎಲ್ಲಾ ಮ್ಯಾಚ್’ಗಳಲ್ಲೂ ಸ್ಲಿಪ್ ಹಾಗೂ ಫ್ರಂಟ್ ಸ್ಥಾನಗಳಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ರೋಹಿತ್ ಅವರನ್ನು ಲಾಂಗ್ ಆನ್, ಲಾಂಗ್ ಆಫ್, ಬೌಂಡರಿ, ಸ್ಲಿಪ್, ಲೆಗ್ ಸೈಡ್, ಮಿಡ್ ವಿಕೆಟ್ ಹೀಗೆ ಎಲ್ಲಾ ಸ್ಥಾನಗಳಿಗೂ ಬದಲಾಯಿಸುತ್ತಿದ್ದ ಹಾರ್ದಿಕ್, ಅನುಭವಿ ಹಾಗೂ ಹಿರಿಯ ಆಟಗಾರ ರೋಹಿತ್ ಅವರನ್ನು ಹೀನಾಯವಾಗಿ ನಡೆಸಿಕೊಂಡಂತೆ ಕಾಣುತ್ತಿತ್ತು.

Hardik vs Rohit - Hardik Pandya is the target of cricket lovers

ಅದಲ್ಲದೇ, ಕೊನೆಯ ಓವರ್’ಗಳ ಸಮಯದಲ್ಲಿ 30 ಯಾರ್ಡ್​ ಸರ್ಕಲ್’ನಿಂದ ಲಾಂಗ್ ಆನ್​ನತ್ತ ರೋಹಿತ್’ರನ್ನು ಕಳುಹಿಸಿದರು. ಲಾಂಗ್​’ಆನ್​ ನಲ್ಲಿ ಫೀಲ್ಡಿಂಗ್ ಮಾಡುವಂತೆ ರೋಹಿತ್ ಗೆ ಕೈತೋರಿಸಿ ಹಾರ್ದಿಕ್ ಹೇಳಿದಾಗ, ಒಂದೊಮ್ಮೆ ವಿಚಲಿತರಾದ ರೋಹಿತ್ ‘ನಾನಾ?’ ಎಂದು ಕೈಸನ್ನೆಯ ಮೂಲಕ ಕೇಳಿದ್ದರು. ಯೆಸ್ ನೀನೇ, ಬೌಂಡರಿ ಲೈನ್​’ನಲ್ಲಿ ನಿಲ್ಲು ಎಂದು ಎಂದು ಹಾರ್ದಿಕ್ ಪಾಂಡ್ಯ ಕೈಸನ್ನೆ ಮಾಡಿ ರೋಹಿತ್ ಗೆ ಹೇಳಿದ್ದಂತೂ, ಹಿರಿಯ ಆಟಗಾರ, ಅದರಲ್ಲೂ ಭಾರತದ ಕ್ಯಾಪ್ಟನ್ ಅನ್ನು ಹೀನಾಯವಾಗಿ ನಡೆಸಿಕೊಂಡಂತಿತ್ತು.

ಹಾರ್ದಿಕ್ ನ ಈ ನಡೆ ಕೇವಲ ರೋಹಿತ್ ಫ್ಯಾನ್ಸ್ ಅಷ್ಟೇ ಅಲ್ಲದೇ, ಎಲ್ಲಾ ಫ್ರಾಂಚೈಸಿಗಳ ಫ್ಯಾನ್ಸ್’ಗಳ ಟೀಕೆಗೆ ಗುರಿಯಾಗಿದೆ. ಅದರಲ್ಲೂ ವಿಶೇಷವಾಗಿ ಅತ್ಯಂತ ಲಾಯಲ್ ಫ್ಯಾನ್ಸ್ ಎನಿಸಿರುವ ಆರ್.ಸಿ.ಬಿ‌ ಫ್ಯಾನ್ಸ್ ಕೂಡ ರೋಹಿತ್ ಪರವಾಗಿ ಹಾರ್ದಿಕ್‌ ನಡೆಯನ್ನು ಟೀಕಿಸುತ್ತಿದ್ದು, ಹಾರ್ದಿಕ್ ಪಾಂಡ್ಯ ತಮ್ಮದೇ ನಡೆಗಳಿಂದ ಹೆಸರು ಕೆಡಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.

ಈ ಪಂದ್ಯವನ್ನು ಮುಂಬೈ ಸೋತಿದ್ದು, ಮಾಡಿದ್ದುಣ್ಣೋ‌ ಮಹಾರಾಯ ಎಂದು ಮುಂಬೈ ತಂಡವನ್ನು ಟೀಕಿಸಿ ಫ್ಯಾನ್ಸ್ ಹೇಳುತ್ತಿದ್ದಾರೆ. ಅದಲ್ಲದೇ, ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯರಿಗೆ ರೋಹಿತ್ ಶರ್ಮಾ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದ್ದು, ಈ ಬೆಳವಣಿಗೆಗಳು ಅವರ ನಡುವಿನ ಸಂಬಂಧ ಹಳಸುತ್ತಿದೆಯೇ ಎನಿಸುವಂತೆ ಕಾಣುತ್ತಿದೆ‌.

You might also like
Leave A Reply

Your email address will not be published.