ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸುವ ಛಲ ಬೇಕು

ಸಾಧಿಸುವ ಛಲ ನಮ್ಮನ್ನು ಎಂತಹ ಹಂತಕ್ಕೂ ಕರೆದೊಯ್ಯುತ್ತದೆ ಎಂಬುದಕ್ಕೆ ಧಾರವಾಡದ ಯುವತಿ ಸಾಕ್ಷಿ. ವಿದ್ಯಾಕಾಶಿ ಧಾರವಾಡದ ಬೈಕ್ ರೈಡರ್ ಆದ ಈಕೆ ತನ್ನ 18ನೇ ವಯಸ್ಸಿಗೆ ಉತ್ತರ ಕಾಶ್ಮೀರಕ್ಕೆ ಒಬ್ಬಂಟಿಯಾಗಿ ಹೋಗುವ ಮೂಲಕ ಹೊಸ ದಾಖಲೆ ಬರೆದಿದ್ದಾಳೆ. ಅಷ್ಟಕ್ಕೂ ಆ ದಾಖಲೆ ಆದ್ರು ಏನು?

ನಗರದ ಆರ್.ಎನ್ ಶೆಟ್ಟಿ ಕ್ರೀಡಾಂಗಣ ಬಳಿಯ ನಿವಾಸಿ ಪ್ರತೀಕ್ಷಾ ಹರವಿಶಟ್ಟರ್ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ರೈಡಿಂಗ್ ಹವ್ಯಾಸವಿರುವ ಪ್ರತೀಕ್ಷಾ ಸೋಲೋ ಬೈಕ್ ರೈಡಿಂಗ್ ಮೂಲಕ ಉತ್ತರ ಕಾಶ್ಮೀರಕ್ಕೆ ಹೋಗಿಬಂದಿದ್ದಾಳೆ. ಸುಮಾರು 6 ಸಾವಿರ ಕಿಲೋ ಮೀಟರ್ ದೂರದ ರಸ್ತೆ ಕ್ರಮಿಸಿ ಬಂದಿರುವ ಪ್ರತೀಕ್ಷಾ 10 ದಿನಗಳಲ್ಲಿ ಈ ಸಾಧನೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ 9 ದಿನಗಳಲ್ಲೇ ತಮ್ಮ ಗುರಿ ಸಾಧಿಸಿದ್ದಾರೆ. ದಾರಿಯುದ್ದಕ್ಕೂ ಜನರು ಸಹಕಾರ ಕೊಟ್ಟರು ಎನ್ನುತ್ತಾರೆ ಪ್ರತೀಕ್ಷಾ.

ಬೈಕ್ ರೈಡರ್ ಪ್ರತೀಕ್ಷಾಗೆ ಇಲ್ಲಿಂದ ಕಾಶ್ಮೀರದವರೆಗೆ ಹೋಗಲು ಸಹಾಯ ಆಗಿದ್ದು ಜಿಪಿಎಸ್ ಲೊಕೇಷನ್. ನಡುರಸ್ತೆಯಲ್ಲಿ ದಾರಿ ಗೊಂದಲವಾದಾಗ ಸಹೋದರಿ ಕೋಮಲ್ ಜಿಪಿಎಸ್ ಮೂಲಕ ಸಹಾಯ ಮಾಡಿದ್ದಾರೆ. ದಾಖಲೆ ಮಾಡಲೆಂದೇ ಈ ರೈಡ್ ಮಾಡಿದ್ದು ಎನ್ನಲಾಗಿದೆ.

Prateeksha Haravishettar

ತನ್ನ‌ ಅಕ್ಕನ ದಾಖಲೆಯನ್ನೇ ಮುರಿದ ಪ್ರತಿಕ್ಷಾ:

ಈ ಹಿಂದೆ 21 ವರ್ಷದ ಕೇರಳ ಯುವತಿ ಕಾಶ್ಮೀರದವರೆಗೆ ಒಬ್ಬಂಟಿ ಹೋಗಿರುವ ದಾಖಲೆ ಇದೆ. ಇದಾದ ನಂತರ ಪ್ರತೀಕ್ಷಾಳ ಸಹೋದರಿ ಕೋಮಲ್ 19 ವರ್ಷದವಳಿದ್ದಾಗ ಕಾಶ್ಮೀರಕ್ಕೆ ಹೋಗಿದ್ದರು. ಈಗ 18 ವರ್ಷದ ಪ್ರತೀಕ್ಷಾ ಅಕ್ಕನ ದಾಖಲೆಯನ್ನೂ ಮುರಿದಿದ್ದಾರೆ. ಪ್ರತೀಕ್ಷಾ ಸಾಧನೆಗೆ ಅಕ್ಕ ಕೋಮಲ್ ಹಾಡಿಹೊಗಳಿದ್ದಾರೆ.

ಸದ್ಯ ನಮ್ಮ ರಾಜ್ಯದ ಹೆಮ್ಮೆಯ ಯುವತಿ ಒಬ್ಬಂಟಿಯಾಗಿ ಕಾಶ್ಮೀರ ಲಾಲ್ ಚೌಕಗೆ ಒಬ್ಬಂಟಿಯಾಗಿ ಹೋಗಿಬಂದು ಹೊಸ ದಾಖಲೆ ಬರೆದಿದ್ದಾಳೆ. ಇವರ ಈ ಸಾಧನೆ ಜನರು ಕೊಂಡಾಡಿದರಷ್ಟೇ ಸಾಲದು. ದಾಖಲೆ ಪುಸ್ತಕದಲ್ಲೂ ದಾಖಲಾಗಬೇಕಿದೆ ಎನ್ನುತ್ತಾರೆ ನೆಟ್ಟಿಗರು. ನೀವೇನಂತೀರಾ?

 

Prateeksha Haravishettar

You might also like
Leave A Reply

Your email address will not be published.