ಜ್ಞಾನವಾಪಿ ಹಿಂದೂಗಳಿಗೆ ಮತ್ತೆ ಜಯ – ಹಿಂದೂಗಳಿಗೆ ಪೂಜೆ ಅನುಮತಿ ತಡೆಗೆ ಕೋರಿದ್ದ ಅರ್ಜಿ ವಜಾ

ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ ಮತ್ತೆ ಜಯ ಸಿಕ್ಕಿದೆ. ಅಯ್ಯೋ ಇದರಲ್ಲೇನೂ ಜಯ ಸಿಕ್ಕಿದೆ ಅಂತೀರ? ಈ ವರದಿ ಓದಿ.

ವ್ಯಾಸ್ ತೆಹ್ಖಾನಾದಲ್ಲಿ ಹಿಂದೂಗಳು ಪೂಜೆ ಮಾಡುವ ವಿಚಾರದಲ್ಲಿ ಅಲಹಾಬಾದ್ ಕೋರ್ಟ್ ವಜಾಗೊಳಿಸಿದೆ. ಇದರಲ್ಲಿ ಜಯ ಹೇಗೆ ಸಿಗುತ್ತೆ? ಅಂತ ಅನ್ಕೊಬೇಡಿ. ರಾಮಮಂದಿರವನ್ನೇ ಬಿಟ್ಟಿಲ್ಲ, ಇನ್ನೂ ಜ್ಞಾನವಾಪಿ ಸಂಕೀರ್ಣದಲ್ಲಿರೋ ವ್ಯಾಸ್ ತೆಹ್ಖಾನಾ ನ ಬಿಡ್ತೀವಾ?

gyanvapi

ಹೌದು, ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯಿಸಿ, ಅಲಹಾಬಾದ್ ಹೈಕೋರ್ಟ್ ಅಂಜುಮನ್ ಇಂಟೆಜಾಮಿಯಾ ಅವರ ಆದೇಶದ ಮೊದಲ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜನವರಿ 17 ಮತ್ತು 31 ರಂದು ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ವಿಷಯ ಏನೆಂದರೆ ಜ್ಞಾನವಾಪಿ ಕಾಂಪ್ಲೆಕ್ಸ್ನ ‘ವ್ಯಾಸ್ ತೆಹ್ಖಾನಾ’ದಲ್ಲಿ ನಡೆಯುತ್ತಿರುವ ಪೂಜೆ ಮುಂದುವರಿಯುತ್ತದೆ ಎಂದರು. ಇನ್ನೇನೂ ನಮ್ ವಕೀಲರೆಂದರೆ ಸುಮ್ನೆನಾ.

You might also like
Leave A Reply

Your email address will not be published.