ಗಣರಾಜ್ಯೋತ್ಸವ ಪರೇಡ್ ನಲ್ಲೂ ಮೊಳಗಿದ ಜೈ ಶ್ರೀ ರಾಮ್

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾದದ್ದೆ ಆದದ್ದು, ಎಲ್ಲೆಲ್ಲೂ ರಾಮನೆ. ಬಾಲೆಯರ ಮನಸ್ಸು ಕದ್ದ ಕೃಷ್ಣ ಇದೀಗ ಬಾಲರಾಮನ ರೂಪದಲ್ಲಿ ಆಕರ್ಷಿತನಾಗುತ್ತಿದ್ದಾನೆ. ವಿಶ್ವದ ಗಮನ ಸೆಳೆದ ನಮ್ ರಾಮ ಇದೀಗ ದೆಹಲಿಯ ಕರ್ತವ್ಯ ಪಥದ ಗಣರಾಜ್ಯೋತ್ಸವ ಪರೇಡ್‍ನಲ್ಲೂ ದೇಶದ ಗಮನವನ್ನು ಮತ್ತೊಮ್ಮೆ ಸೆಳೆದಿದ್ದಾನೆ.

ಪರೇಡ್ ನಲ್ಲೂ ಮೊಳಗಿದ ಜೈ ಶ್ರೀ ರಾಮ್:

ಉತ್ತರ ಪ್ರದೇಶದಿಂದ ಕೈಯಲ್ಲಿ ಬಿಲ್ಲು ಬಾಣ ಹಿಡಿದ ಬಾಲಕ ರಾಮನ ಮೂರ್ತಿಯನ್ನು ಕರ್ತವ್ಯ ಪಥಕ್ಕೆಂದು ತರಲಾಗಿತ್ತು. ಸ್ತಬ್ಧಚಿತ್ರದಲ್ಲಿ ಬಾಲಕ ರಾಮನ ಸ್ತಬ್ದಚಿತ್ರವು ನೆರೆದಿದ್ದ ಜನರ ಗಮನವನ್ನು ಸೆಳೆದಿದ್ದಲ್ಲದೇ, ಮಂತ್ರಮುಗ್ದಗೊಳಿಸಿದ್ದಾನೆ. ಈ ಮೂಲಕ ಜನ ರಾಮನ ಮೇಲಿರಿಸಿದ ಭಕ್ತಿ ಕರ್ತವ್ಯ ಪಥದಲ್ಲೂ ಅನಾವರಣಗೊಂಡಿರುವುದು ವಿಶೇಷನೀಯ.

Uttar Pradesh tablo 2024

ಸ್ತಬ್ಧಚಿತ್ರದಲ್ಲಿ ಏನೆನೆಲ್ಲ ಇತ್ತು?

ಬಾಲರಾಮನೊಂದಿಗೆ ಉತ್ತರ ಪ್ರದೇಶದ ಮೆಟ್ರೋ ಕಾಮಗಾರಿ, ಸೇನೆಯ ವಿಮಾನವನ್ನು ಇರಿಸಲಾಗಿತ್ತು. ಸ್ತಬ್ಧಚಿತ್ರದ ಸುತ್ತ ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನ ಮನಮೋಹಕವಾಗಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತಿತ್ತು.

ಇನ್ನೂ ಪರೇಡ್‍ನಲ್ಲಿ ಡಿಆರ್ ಡಿಓ ಸ್ತಬ್ಧಚಿತ್ರ ಸೇರಿದಂತೆ ಚಂದ್ರಯಾನ-3, ಲಡಾಕ್‍ನಲ್ಲಿ ಭಾರತೀಯ ಸೇನೆ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಬಾಲ್ಯದ ಸ್ತಬ್ಧಚಿತ್ರ, ರಾಜಸ್ಥಾನದ ಮಹಿಳೆಯ ಕಲಾತ್ಮಕ ನೃತ್ಯ, ಛತ್ತೀಸ್‍ಗಢದ ಬಸ್ತಾರ್ ಮುರಿಯಾ ದರ್ಬಾರ್, ಒಡಿಶಾದ ವಿಕಾಸ್ ಭಾರತದ ಅಡಿ ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ, ಹರಿಯಾಣದ ಬಾಲಕಿಯರ ಶಿಕ್ಷಣಕ್ಕೆ ಬೆಂಬಲ ಸೂಚಿಸುವ ಸ್ತಬ್ಧಚಿತ್ರ ಸೇರಿದಂತೆ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಕೆಲಸ ನಡೆಯಿತು.

ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್ ಲಾಂಚರ್, ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್ ಸಿಸ್ಟಮ್, ಸರ್ವತ್ರ ಮೊಬೈಲ್ ಬ್ರಿಡ್ಜಿಂಗ್ ಸಿಸ್ಟಮ್, ಡ್ರೋನ್ ಜಾಮರ್ ಸಿಸ್ಟಮ್, ಪ್ರಚಂಡ, ರುದ್ರ ಹೆಲಿಕಾಪ್ಟರ್, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್ ಐಪಿ ಎಫ್ ಬ್ಯಾಂಡ್ ಪಥಸಂಚಲನ, ಬಿಎಸ್‍ಎಫ್ ಒಂಟೆ ರೆಜಿಮೆಂಟ್ ಪರೇಡ್ ನಡೆಸಿಕೊಡಲಾಯಿತು.

ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‍ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದವು.

You might also like
Leave A Reply

Your email address will not be published.