ಗ್ಯಾನವ್ಯಾಪಿಯಲ್ಲಿ ಮಂದಿರವೇ ಇತ್ತು – ಇಲ್ಲಿದೆ ಪ್ರಬಲ ಪುರಾವೆ

ಗ್ಯಾನವ್ಯಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ತ್ವ ಇಲಾಖೆಯು ನಡೆಸಿದ ಸರ್ವೆಯ ವರದಿಯನ್ನು ಸಾರ್ವಜನಿಕಗೊಳಿಸುವಂತೆ ವಾರಣಾಸಿ ಜಿಲ್ಲಾ ನ್ಯಾಯಲಯವು ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಆ ವರದಿ ಬಹಿರಂಗ ಗೊಂಡಿದ್ದು, ವರದಿಯ ಪ್ರಕಾರ ಗ್ಯಾನವ್ಯಾಪಿ ಮಸೀದಿ ಇದ್ದ ಜಾಗದಲ್ಲಿ ಮೊದಲು ಭವ್ಯ ಮಂದಿರ ಇತ್ತು ಎಂಬುದನ್ನು ಹೇಳುತ್ತಿದೆ.

ಈ ಸರ್ವೇ ವರದಿಯು ಹಿಂದೂಗಳ ಪರ ವಕೀಲರಾದ ಶ್ರೀ ವಿಷ್ಣು ಶಂಕರ್ ಜೈನ್ ಅವರು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸರ್ವೆಯ ವರದಿಯ ಬಗೆಗಿನ ಮಾಹಿತಿಯನ್ನು ಮಾಧ್ಯಮಗಳಿಗೆ‌ ನೀಡುವಾಗ ಸಾರ್ವಜನಿಕ ಗೊಳಿಸಿದ್ದಾರೆ.

ವರದಿಯಲ್ಲಿರುವಂತೆ ಓದಿದ ಜೈನ್ ಅವರು, ಮಸೀದಿಯ ಕಟ್ಟಡಕ್ಕೆ ಮೊದಲೇ ಅಸ್ತಿತ್ವದಲ್ಲಿದ್ದ ಮಂದಿರದ ಭಾಗಗಳನ್ನು ಸ್ವಲ್ಪ ಮಾರ್ಪಾಡಿನೊಂದಿಗೆ ಬಳಕೆಮಾಡಲಾಗಿದೆ. ಅಂದರೆ ಮೊದಲೇ ಅಸ್ತಿತ್ವದಲ್ಲಿದ್ದ ದೇವಾಲಯದ ಕಂಬಗಳನ್ನು ಮಸೀದಿಯ ರಚನೆಗೆ ಬಳಸಿಕೊಳ್ಳಲಾಗಿದೆ‌. ಕಂಬಗಳ ಮತ್ತು ಅಲ್ಲಿ ಬಳಸಿರುವ ಕಲ್ಲುಗಳ ಮೇಲಿನ ಕೆತ್ತನೆ ಮೂಲತಃ ಹಿಂದೂ ದೇವಾಲಯದ ಭಾಗಗಳಾಗಿವೆ. ಮಸೀದಿ‌ ನಿರ್ಮಾಣ ಮಾಡಲು ಅದನ್ನು ಕೆಡವಲಾಗಿತ್ತು ಎಂದು ಉಲ್ಲೇಖವಾಗಿರುವ ವರದಿಯನ್ನು ವಿಷ್ಣು ಶಂಕರ್ ಜೈನ್ ಅವರು ಓದಿದರು.‌

ಅಯೋಧ್ಯೆಯ ಸತತ ಕಾನೂನು ಹೋರಾಟದ ಬಳಿಕ ಈಗ ಕಾಶಿ ವಿಶ್ವನಾಥ ಮಂದಿರದತ್ತ ಹಿಂದೂಗಳು‌ ಮುಖಮಾಡಿದ್ದು ನ್ಯಾಯಾಲಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

You might also like
Leave A Reply

Your email address will not be published.