ನಿಗಮ-ಮಂಡಳಿ ಜಟಾಪಟಿಗೆ ಮುಕ್ತಿ – 36 ಶಾಸಕರಿಗೆ ಬಂಪರ್ – ಇಲ್ಲಿದೆ ಆಯ್ಕೆ ಪಟ್ಟಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅನ್ಯಮನಸ್ಕತೆಯಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಅಂತಿಮ ಮುದ್ರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಮೇಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಸ್ಥಾನ ನೀಡಬೇಕೆನ್ನುವುದು ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿರುವ ಶ್ರೀ ಡಿ.ಕೆ ಶಿವಕುಮಾರ್ ಅವರ ಒತ್ತಾಸೆಯಾಗಿತ್ತು. ಆದರೆ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸ್ವ-ಸರ್ಕಾರದ ಮೇಲೆಯೇ ಮುಗಿಬೀಳುತ್ತಿರುವ ಶಾಸಕರನ್ನು ತಣ್ಣಗಾಗಿಸಬೇಕೆನ್ನುವುದು ಸಿದ್ದರಾಮಯ್ಯನವರ ಆಸೆಯಾಗಿತ್ತು.

ಮಾಹಿತಿಗಳ ಪ್ರಕಾರ ಮೊದಲ 2 ವರ್ಷ ಪಕ್ಷದ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ. ಅನಂತರ, ಕಾರ್ಯಕರ್ತರಿಗೆ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಶಾಸಕರನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿತ್ತು. ಇದೀಗ ಸಿಎಂ ಸಿದ್ದರಾಮ್ಯಯ ಕಾಂಗ್ರೆಸ್ ಪಕ್ಷದ 36 ಜನ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮೊದಲ ಹಂತದಲ್ಲಿ 36 ಶಾಸಕರಿಗೆ ನಿಗಮ ಮಂಡಳಿಗಳ ಜವಾಬ್ದಾರಿ ನೀಡಲಾಗಿದ್ದು, ಶೀಘ್ರವೇ ಎರಡನೇ ಪಟ್ಟಿಯೂ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆಯಷ್ಟೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಮೊದಲ ಪಟ್ಟಿಗೆ ಅನುಮತಿ ನೀಡಿದ್ದರು. ಆದಾಗ್ಯೂ, ಸಚಿವರು ಆಕ್ಷೇಪದಿಂದಾಗಿ ಪಟ್ಟಿ ಬಿಡುಗಡೆಯಾಗಿರಲಿಲ್ಲ.

Following is the list of presidents of various corporation-boards

ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿ ಇಂತಿದೆ :

1. ಹಂಪನ ಗೌಡ ಬಾದರ್ಲಿ – (ಸಿಂಧನೂರು)- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ)
2. ಎನ್.ಎ.ಹ್ಯಾರಿಸ್ – (ಶಾಂತಿನಗರ) – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
3. ಪಿ.ಎಂ.ನರೇಂದ್ರ ಸ್ವಾಮಿ (ಮಳವಳ್ಳಿ) – ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
4. ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ) – ಕರ್ನಾಟಕ ಗೃಹ ಮಂಡಳಿ
5. ಕಂಪ್ಲಿ ಗಣೇಶ್ (ಕಂಪ್ಲಿ) – ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
6. ಪುಟ್ಟರಂಗಶೆಟ್ಟಿ – (ಚಾಮರಾಜನಗರ) ಮೈಸೂರು ಸೇಲ್ಸ್ ಅಂಡ್ ಇಂಟರ್ ನ್ಯಾಷನಲ್ (ಎಂಎಸ್‌ಐಎಲ್)
7. ಎಸ್.ಎನ್.ನಾರಾಯಣಸ್ವಾಮಿ – (ಬಂಗಾರ ಪೇಟೆ)- ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸಂಸ್ಥೆ
8. ರೂಪಕಲಾ – (ಕೆಜಿಎಫ್ ) – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ
9. ರಮೇಶ್ ಬಂಡಿಸಿದ್ದೇಗೌಡ – (ಶ್ರೀರಂಗ ಪಟ್ಟಣ) – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)
10. ಜಿ.ಟಿ.ಪಾಟೀಲ್ – (ಬೀಳಗಿ) – ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮ
11 ಎಸ್.ಎನ್.ಸುಬ್ಬಾರೆಡ್ಡಿ- (ಬಾಗೆಪಲ್ಲಿ) – ಬೀಜ ಅಭಿವೃದ್ಧಿ ನಿಗಮ
12. ವಿನಯ್ ಕುಲಕರ್ಣಿ- (ಧಾರವಾಡ) – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ
13. ಕಾಶಪ್ಪ ವಿಜಯನಾಂದ ಶಿವಶಂಕರಪ್ಪ – ಹುನುಗುಂದ – ಕರ್ನಾಟಕ ಕ್ರೀಡಾ ಪ್ರಾಧಿಕಾರ
14. ಬೇಳೂರು ಗೋಪಾಲಕೃಷ್ಣ -(ಸಾಗರ)- ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
15. ಬಸವರಾಜ್ ನೀಲಪ್ಪ ಶಿವಣ್ಣನವರ್ -(ಬ್ಯಾಡಗಿ)- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
16. ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ ಧಾರವಾಡ ಪೂರ್ವ) – ಕೊಳಗೇರಿ ಅಭಿವೃದ್ಧಿ ಮಂಡಳಿ
17. ಟಿ.ರಘುಮೂರ್ತಿ (ಚಳ್ಳಕೆರೆ) – ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
18. ಬಿ.ಶಿವಣ್ಣ (ಆನೇಕಲ್) – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
19. ರಾಜಾ ವೆಂಕಟಪ್ಪ ನಾಯಕ್ – ಶೋರಾಪುರ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ 20. ಬಸನಗೌಡ ದದ್ದಲ್ (ರಾಯಚೂರು ಗ್ರಾಮೀಣ) – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
21. ಎ.ಬಿ.ರಾಜೇಗೌಡ (ಶೃಂಗೇರಿ) – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
22. ಬಿ.ಕೆ.ಸಂಗಮೇಶ- (ಭದ್ರಾವತಿ)- ಲ್ಯಾಂಡ್ ಆರ್ಮಿ
23. ಜಿ.ಗೋವಿಂದಪ್ಪ- (ಹೊಸದುರ್ಗ)- ಕರ್ನಾಟಕ ಆಹಾರ ಅಭಿವೃದ್ಧಿ ನಿಗಮ
24. ಅನಿಲ್ ಚಿಕ್ಕಮಾದು – ಹೆಗ್ಗಡ ದೇವನಕೋಟೆ – ಜಂಗಲ್ ಲಾಡ್ಜಸ್
25. ಟಿಡಿ ರಾಜೇಗೌಡ – ಶೃಂಗೇರಿ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ನಿಯಮಿತ
26. ಅಪ್ಪಾಜಿ ಸಿಎಸ್ ನಾಡಗೌಡ – ಮುದ್ದೇಬಿಹಾಳ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
27. ಹೆಚ್‌ಸಿ ಬಾಲಕೃಷ್ಣ – ಮಾಗಡಿ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮ
28. ಕನೀಜ್ ಫಾತಿಮಾ (ಕಲಬುರಗಿ ಉತ್ತರ) – ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿನಿಗಮ
29. ಕೌಜಲಗಿ ಮಹಾಂತೇಶ ಶಿವಾನಂದ – ಬೈಲಹೊಂಗಲ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
30. ಭರಮಗೌಡ ಅಲಗೌಡ ಕಾಗೆ – ಕಾಗವಾಡ – ಹುಬ್ಬಳ್ಳಿ ಸಾರಿಗೆ ನಿಗಮ (ವಾಯುವ್ಯ ಸಾರಿಗೆ)
31. ಎಸ್‌ಆರ್ ಶ್ರೀನಿವಾಸ – ಗುಬ್ಬಿ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
32. ಶರತ್‌ ಕುಮಾರ್‌ ಬಚ್ಚೇಗೌಡ – (ಹೊಸಕೋಟೆ) – ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
33. ಯಮುನಪ್ಪ ವೈ ಮೇಟಿ – ಬಾಗಲಕೋಟೆ – ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರ
34. ಸತೀಶ್‌ ಕೃಷ್ಣ ಸೈಲ್‌ – (ಕಾರವಾರ) – ಕರ್ನಾಟಕ ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ & ಏಜೆನ್ಸೀಸ್‌
35. ಶ್ರೀನಿವಾಸ ಮಾನೆ – ಹಾನಗಲ್ – ಮಾನ್ಯ ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು
36. ಜೆ.ಎನ್.ಗಣೇಶ್‌ – (ಕಂಪ್ಲಿ) – ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ

You might also like
Leave A Reply

Your email address will not be published.