ಗಣತಂತ್ರ ಪರೇಡ್ ಗೆ ರಾಜ್ಯದಿಂದ ಯೋಧನೋರ್ವ ಆಯ್ಕೆ – ಯಾರು ಆ ಯೋಧ?

ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವವನ್ನು (75th Republic Day) ಆಚರಿಸಲಾಗುತ್ತಿದ್ದು, ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನಕ್ಕೆ ನಮ್ಮ ರಾಜ್ಯದ ಬೆಳಗಾವಿ ಮೂಲದ ಯೋಧರೊಬ್ಬರು ಆಯ್ಕೆಯಾಗಿರುವುದು ಶ್ಲಾಘನೀಯ. ಯಾರು ಆ ಯೋಧ?

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಯೋಧ ಅದೃಶ್ಯ ಮಾವಿನಕಟ್ಟಿ ಎಂಬುವವರು ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ.

75th Republic Day

ಇವರು ಮದ್ರಾಸ್ ರೆಜಿಮೆಂಟ್ ಕ್ರೊಪ್ ವೆಲ್ಲಿಂಗ್ಟನ್ ಮತ್ತು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎನ್ ಸಿ ಸಿ (NCC) ತರಬೇತಿ ಪಡೆದಿದ್ದರು. ಇದೀಗ ದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಇವರು ಭಾಗಿಯಾಗಿರುವುದು ಕುಟುಂಬಸ್ಥರು ಸೇರಿದಂತೆ ರಾಜ್ಯದ ಜನತೆಗೆ ಸಂತಸ ತಂದಿದೆ.

You might also like
Leave A Reply

Your email address will not be published.