ಜಾಗತಿಕ ಹಿನ್ನಡೆಯ ನಡುವೆಯೂ ಭಾರತ ಬೆಳವಣಿಗೆ ಸಾಧಿಸಲಿದೆ – ಫಿಚ್ ರೇಟಿಂಗ್ಸ್

2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.6.5ರಷ್ಟು ಹೆಚ್ಚಾಗಲಿದ್ದು, ಭಾರತದ ಪ್ರಬಲ ಆರ್ಥಿಕ ವೃದ್ಧಿಯು ಇಲ್ಲಿನ ಕಾರ್ಪೊರೇಟ್ ಸಂಸ್ಥೆಗಳಿಗೆ ವರದಾನ ಆಗವುದಲ್ಲದೇ ಈ ಸಂಸ್ಥೆಗಳ ಬೇಡಿಕೆಯು ಹೆಚ್ಚಲಿದೆ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

‘ಇಂಡಿಯಾ ಕಾರ್ಪೊರೇಟ್ಸ್: ಸೆಕ್ಟರ್ ಟ್ರೆಂಡ್ಸ್ 2024’ ಎಂಬ ತನ್ನ ಹೊಸ ಸಂಶೋಧನಾ ವರದಿಯಲ್ಲಿ ಭಾರತದ ಕಾರ್ಪೊರೇಟ್ ಸಂಸ್ಥೆಗಳ ಬೆಳವಣಿಗೆ ಕುರಿತು ಅಧ್ಯಯನ ನಡೆಸಿದ ಈ ಸಂಸ್ಥೆಯು ಜಾಗತಿಕ ಹಿನ್ನಡೆಯಲ್ಲೂ ಭಾರತ ಬೆಳವಣಿಗೆ ಸಾಧಿಸುತ್ತಿದೆ ಎಂದು ತಿಳಿಸಿದೆ.

ಆಗಾಗಲೇ 2023ರ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಉತ್ತಮ ಬೆಳವಣಿಗೆ ಸಾಧಿಸಿದ್ದಲ್ಲದೇ, ಪ್ರವಾಸೋದ್ಯಮದಲ್ಲೂ ತನ್ನ ಛಾಪೂ ಮೂಡಿಸಿದೆ. ಇದು 2024ರಲ್ಲೂ ಮುಂದುವರಿಯಲಿದ್ದು, ಸಿಮೆಂಟ್, ಎಲೆಕ್ಟ್ರಿಸಿಟಿ, ಪೆಟ್ರೋಲಿಯಂ ಉತ್ಪನ್ನ ಇತ್ಯಾದಿ ವಲಯಗಳು ಬೇಡಿಕೆ ಹೆಚ್ಚಿಸಿಕೊಳ್ಳಲಿವೆ. ಹಾಗೂ ಉತ್ತಮಗೊಳ್ಳುತ್ತಿರುವ ಇನ್ಫ್ರಾಸ್ಟ್ರಕ್ಚರ್ನಿಂದಾಗಿ ಉಕ್ಕಿಗೆ ಬೇಡಿಕೆ ಕೂಡ ಹೆಚ್ಚುತ್ತದೆ. ಹೆಚ್ಚುತ್ತಿರುವ ವಾಹನಗಳ ಮಾರಾಟ ಪ್ರಮಾಣವು ವಾಹನ ತಯಾರಕ ಸಂಸ್ಥೆಗಳ ಆದಾಯಕ್ಕೆ ಪುಷ್ಟಿ ಕೊಡಲಿದೆ ಎಂದು ಹೇಳಿದೆ.

ಈ ನಿಟ್ಟಿನಲ್ಲಿ ಒಳ ಹೂರಣ ವೆಚ್ಚದಲ್ಲಿ (input cost) ಇಳಿಕೆ ಹಾಗೂ ಬೇಡಿಕೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ ಕಾರ್ಪೊರೇಟ್ ಸಂಸ್ಥೆಗಳ ಲಾಭದ ಅಂತರ ಅಥವಾ ಮಾರ್ಜಿನ್ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಿಸಿದೆ.

ಯೂರೋಪ್ ಮತ್ತು ಅಮೆರಿಕದಲ್ಲಿ ಆರ್ಥಿಕತೆ ತುಸು ಮಂದಗೊಂಡಿರುವುದರಿಂದ ಐಟಿ ಸರ್ವಿಸ್ನಲ್ಲಿ ತೀಕ್ಷ್ಣ ಪ್ರಗತಿ ನಿರೀಕ್ಷಿಸಲು ಆಗುವುದಿಲ್ಲ. ಇನ್ನೂ ಪ್ರಮುಖ ವಿದೇಶೀ ಮಾರುಕಟ್ಟೆಗಳಲ್ಲಿ ಪ್ರಗತಿಯ ವೇಗ ಮಂದಗೊಂಡಿದ್ದರೂ ಆ ನ್ಯೂನತೆಯನ್ನು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಜೀರ್ಣಿಸಿಕೊಳ್ಳಬಹುದು ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

You might also like
Leave A Reply

Your email address will not be published.