ನಿಜವಾಯ್ತು ಕೋಡಿಮಠದ ಸ್ವಾಮೀಜಿಯ ಭವಿಷ್ಯ – ಅಷ್ಟಕ್ಕೂ ಸ್ವಾಮೀಜಿ ಹೇಳಿದ್ದೇನು ನೋಡಿ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ನಿನ್ನೆ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ತಮ್ಮ ಕೊನೆಯುಸಿರೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಜಗತ್ತಿನ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಇದರೊಂದಿಗೆ ಕೋಡಿಮಠ ಸ್ವಾಮೀಜಿಯ ಭಯಾನಕ ಭವಿಷ್ಯ ಕೂಡ ನಿಜವಾಗುತ್ತಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರ ಮನಸಲ್ಲೂ ಸೃಷ್ಟಿಯಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ? ಎಂಬುದನ್ನು ನೋಡೋಣ ಬನ್ನಿ.

ಹೌದು, ಈ ವರ್ಷದ ಆರಂಭದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ವರ್ಷದ ಭವಿಷ್ಯವನ್ನು ನುಡಿದಿದ್ದರು. ಆ ವೇಳೆ ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣ ಕಾಣುತ್ತಿದೆ ಹಾಗೂ ಜಗತ್ತಿನ ದೊಡ್ಡ ಸಂತರ ಕೊಲೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದಲ್ಲದೇ ಕಳೆದ ವರ್ಷಕ್ಕಿಂತ ಹೆಚ್ಚು ಸಂಕಷ್ಟ ಈ ವರ್ಷ ಜಗತ್ತಿಗೆ ಎದುರಾಗಲಿದೆ ಎಂದು ಹೇಳಿದ್ದರು.

ಕೇವಲ 6 ತಿಂಗಳಲ್ಲಿ ನಿಜವಾದ ಕೊಡಿಮಠದ ಭವಿಷ್ಯ!

ಗದಗದಲ್ಲಿ ಜನವರಿ 26ರಂದು ನುಡಿದ ಭವಿಷ್ಯ ಆರು ತಿಂಗಳೊಳಗೆ ನಿಜವಾಗಿದೆ. ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲಿ ಪ್ರಧಾನಿ ಹುದ್ದೆ ಇಲ್ಲದ ಕಾರಣ ಅಧ್ಯಕ್ಷರೇ ರಾಷ್ಟ್ರ ಆಡಳಿತದ ಮುಖ್ಯಸ್ಥರಾಗಿದ್ದು, ಅವರ ಸಾವಾಗಿದೆ. ಅದಲ್ಲದೇ ಕೆಲ ದಿನಗಳ ಹಿಂದಷ್ಟೇ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್‌ ಫಿಕೋ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದ, ತೀವ್ರ ಗಾಯಗೊಂಡಿದ್ದ ರಾಬರ್ಟ್‌ ಫಿಕೋ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಜೊತೆಗೆ ದೊಡ್ಡ ಅವಘಡಗಳು ಸಂಭವಿಸಲಿವೆ ಎಂದು ಕೂಡ ಕೋಡಿಮಠದ ಸ್ವಾಮೀಜಿ ಹೇಳಿದ್ದರು. ಅದರಂತೆ ಇಸ್ರೇಲ್‌ ಹಾಗೂ ಇರಾನ್‌ ನಡುವೆ ಯುದ್ಧ ನಡೆದಿದ್ದು, ಅಮೆರಿಕಕ್ಕೆ ಎಚ್ಚರಿಕೆ ನೀಡಿ ರಷ್ಯಾ ಕೂಡ ಪರಮಾಣು ಪರೀಕ್ಷೆಗೆ ಮುಂದಾಗಿರುವುದು ಇದೇ ವರ್ಷ ಮೂರನೇ ಮಹಾಯುದ್ಧ ನಡೆಯಲಿದೆಯಾ ಎಂಬ ಅನುಮಾಗಳು ಸೃಷ್ಟಿಯಾಗಿವೆ.

ಇದರೊಂದಿಗೆ ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ವರುಣನ ಅವಾಂತರದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಅದಕ್ಕೂ ಮುನ್ನ ತೀವ್ರ ಬಿಸಿಲು ರಾಜ್ಯವನ್ನು ಕಾಡಿತ್ತು ಎಂಬುದನ್ನು ಕೂಡ ಇಲ್ಲಿ ಸ್ಮರಿಸಬಹುದು.

The prediction of Swamiji of Kodimath is true - after all, see what Swamiji said

ಕೋಡಿಮಠ ಶ್ರೀ ಭವಿಷ್ಯ ಏನಾಗಿತ್ತು?

ಗದಗದಲ್ಲಿ ಜನವರಿ 26ರಂದು ಭವಿಷ್ಯ ನುಡಿದಿದ್ದ ಕೋಡಿಮಠದ ಸ್ವಾಮೀಜಿ, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. 2024 ಜಗತ್ತಿಗೆ ಕಂಟಕವಾಗಲಿದೆ, ಜಗತ್ತಲ್ಲಿ ದೊಡ್ಡ ಅವಘಡಗಳು ಸಂಭವಿಸುತ್ತವೆ. ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರಿಗೆ ಸಮಸ್ಯೆಯಾಗಲಿದೆ. ಪ್ರಕೃತಿ ಮುನಿದು ಭೂಕಂಪ, ಜಲಕಂಟಕ ಎದುರಾಗುತ್ತದೆ ಎಂದಿದ್ದರು.

ಅದರ ಜೊತೆ ಈ ವರ್ಷ ಜಗತ್ತಿನ ದೊಡ್ಡ ಸಂತರೊಬ್ಬರ ಕೊಲೆ ಆಗುತ್ತೆ, ಜತೆಗೆ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದ್ದರು.

ಅದಲ್ಲದೇ ಜಗತ್ತಿಗೆ ಮತ್ತೊಮ್ಮೆ ದೊಡ್ಡ ರೋಗ ಹರಡುವ ಸಾಧ್ಯತೆ ಇದೆ, ದೊಡ್ಡ ಸುನಾಮಿ ಕೂಡ ಬರಬಹುದು ಎಂದು ಹೇಳಿದ್ದರು.

You might also like
Leave A Reply

Your email address will not be published.