ಯುವಕರಿಗೂ ತಪ್ಪದ ʼಲವ್‌ ಜಿಹಾದ್‌ʼ ಷಡ್ಯಂತ್ರ – ಭಯೋತ್ಪಾದನೆಯ ಸುಳಿಯಲ್ಲಿ ಸಿಕ್ಕ ಅಶೋಕ್‌ ಬಂಧನ

ಇತ್ತೀಚೆಗೆ ಗುಜರಾತ್‌ನ ಸೂರತ್‌ನಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕ ಹಾಗೂ ಮೌಲ್ವಿ ಸೊಹೈಲ್ ಅಬೂಬಕರ್ ತಿಮೋಲ್ ಅವರ ವಿಚಾರಣೆಯ ನಂತರ ಭಾರತದಲ್ಲಿ ವಾಸಿಸುತ್ತಿದ್ದ ಮತ್ತು ಪಾಕಿಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದ ಇನ್ನೂ ಅನೇಕ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇದೀಗ, ಬಡಗಿಯಾಗಿ ಕೆಲಸ ಮಾಡುತ್ತಿದ್ದ ಅಬುಬಕರ್ ಎಂಬ ಭಯೋತ್ಪಾದಕನನ್ನು ರಾಜಸ್ಥಾನದ ಬಿಕಾನೇರ್‌ನಲ್ಲಿ ಸೂರತ್ ಕ್ರೈಂ ಬ್ರಾಂಚ್ ಬಂಧಿಸಿದೆ. ಅಧಿಕಾರಿಗಳು ಅಬೂಬಕರ್‌ನನ್ನು ಮೇ 23 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಅಲ್ಲಿ ಹಲವಾರು ಆಘಾತಕಾರಿ ವಿಷಯಗಳು ಬೆಳಕಿಗೆ ಬರಲು ಕಾರಣವಾಯಿತು. ಇದೀಗ ನ್ಯಾಯಾಲಯ ಆತನಿಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿದೆ.

ಗಮನಾರ್ಹವೆಂದರೆ, ಈತ ಅಶೋಕ ಎಂಬ ಹೆಸರಿನ ಹಿಂದೂ ಆಗಿದ್ದರು ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನಿ ಹುಡುಗಿಯನ್ನು ಭೇಟಿಯಾಗಿ ನಂತರ ಇಸ್ಲಾಂಗೆ ಮತಾಂತರಗೊಂಡರು, ಮದುವೆಯ ನೆಪದಲ್ಲಿ ಆ ಹುಡುಗಿ ಧರ್ಮವನ್ನು ಬದಲಾಯಿಸಲು ಅವನನ್ನು ಪುಸಲಾಯಿಸಿದರು. ನಂತರ, ಅಶೋಕ್ / ಅಬೂಬಕರ್ ಮೌಲ್ವಿ ಸೊಹೈಲ್ ಅವರೊಂದಿಗೆ ಸಂಪರ್ಕಕ್ಕೆ ಬಂದು ಪಾಕಿಸ್ತಾನಿ ಹ್ಯಾಂಡ್ಲರ್‌ನ ಆಜ್ಞೆಯ ಮೇರೆಗೆ ಹಿಂದೂ ನಾಯಕರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಹಾಗೂ ಹಿಂದೂ ನಾಯಕರ ಮೇಲೆ ದಾಳಿ ನಡೆಸಲು ಯೋಜಿಸುವುದರ ಜೊತೆಗೆ ಇತರ ಹಿಂದೂ ಯುವಕರನ್ನು ಪಾಕಿಸ್ತಾನಿ ಹುಡುಗಿಯರನ್ನು ಮದುವೆಯಾಗಲು ಆಮಿಷವೊಡ್ಡುತ್ತಿದ್ದರು ಮತ್ತು ಹನಿ-ಟ್ರ್ಯಾಪ್ ಮಾಡುತ್ತಿದ್ದುದಾಗಿ ಬಹಿರಂಗವಾಗಿದೆ. ಅಂತಿಮವಾಗಿ ಹಿಂದೂ ಯುವಕರನ್ನು ಮತಾಂತರಿಸಿ, ಹಿಂದೂ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಕೊಳ್ಳುವಂತೆ ಮಾಡುತ್ತಿದ್ದರು.

Hindu Youth Victims of `Love Jihad' Conspiracy

ಪೊಲೀಸ್ ತನಿಖೆಯಲ್ಲಿ ಅಬು ಬಕರ್ ಅವರ ಮೊಬೈಲ್‌ನಿಂದ 40 ಕ್ಕೂ ಹೆಚ್ಚು ಪಾಕಿಸ್ತಾನಿ ಸಂಖ್ಯೆಗಳು ಪತ್ತೆಯಾಗಿವೆ, ಮತ್ತು ಪಾಕಿಸ್ತಾನಿ ಹ್ಯಾಂಡ್ಲರ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದಾಗಿ ವರದಿಯಾಗಿದೆ. ನೇಪಾಳದಿಂದ ಬಂಧಿತರಾಗಿರುವ ಇತರ ಆರೋಪಿಗಳಿಗೆ ದ್ವಿಪೌರತ್ವವಿದೆ. ಈ ಪ್ರಕರಣದಲ್ಲಿ ಬಿಹಾರದ ಮುಜಾಫರ್‌ಪುರದ ಮೊಹಮ್ಮದ್ ಅಲಿ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಆತನ ವಿಚಾರಣೆ ವೇಳೆ ಹಲವು ವಿಸ್ಮಯಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಆತನನ್ನು ಭಾರತ ಮತ್ತು ನೇಪಾಳದ ಉಭಯ ಪ್ರಜೆ ಎಂದು ಬಹಿರಂಗಪಡಿಸಲಾಯಿತು. ಇದೇ ವಿಚಾರವಾಗಿ ಆತನನ್ನು ಪ್ರಶ್ನಿಸಲಾಗಿದ್ದು, ಪೊಲೀಸರು ವಿಚಾರಣೆಗಾಗಿ ನೆರೆಯ ದೇಶ ನೇಪಾಳಕ್ಕೂ ತೆರಳಿದ್ದರು.

ಮೌಲ್ವಿ ಸೊಹೈಲ್ ಮತ್ತು ಅವರ ಅನುಯಾಯಿಗಳು ಅಯೋಧ್ಯೆಗೆ ರಾಮಮಂದಿರಕ್ಕೆ ಭೇಟಿ ನೀಡಲು ಹೋದ ಸುನೀಲ್ ರಜಪೂತ್, ಉಪದೇಶ್ ರಾಣಾ, ಇಶಾನ್ ಶರ್ಮಾ, ಕುಲದೀಪ್ ಸೋನಿ, ನೂಪುರ್ ಶರ್ಮಾ ಮತ್ತು ಶಬ್ನಮ್ ಶೇಖ್ ಅವರಂತಹ ಹಿಂದೂ ನಾಯಕರಿಗೆ ಬೆದರಿಕೆ ಹಾಕಲು ಪಾಕಿಸ್ತಾನಿ ಸಂಖ್ಯೆಗಳನ್ನು ಬಳಸುತ್ತಿದ್ದರು. ಈ ವಿಚಾರದಲ್ಲಿ ಭಯೋತ್ಪಾದನೆಯ ಫಂಡಿಂಗ್ ಆ್ಯಂಗಲ್‌ನಲ್ಲಿಯೂ ನೋಡುತ್ತಿದ್ದೇವೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

ಗುಜರಾತ್ ಪೊಲೀಸರು ಮೇ 4 ರಂದು ಸೂರತ್‌ನಿಂದ 27 ವರ್ಷದ ಮೌಲ್ವಿ ಸೊಹೈಲ್ ಅಬು ಬಕರ್ ತಿಮೋಲ್ ಅವರನ್ನು ಬಂಧಿಸಿದ್ದಾರೆ . ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ, ಹೈದರಾಬಾದ್‌ನ ಗೋಶಾಮಹಲ್‌ನ ಪಕ್ಷದ ಶಾಸಕ ಟಿ ರಾಜಾ ಸಿಂಗ್, ಸುದರ್ಶನ್ ನ್ಯೂಸ್ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಮತ್ತು ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಾಮಾಜಿಕ ಮಾಧ್ಯಮ ಕಾರ್ಯಕರ್ತ ಅಪ್ದೇಶ್ ರಾಣಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪ ಮೌಲ್ವಿಯ ಮೇಲಿದೆ. ಮೌಲ್ವಿಗಳು ಅವರನ್ನು ‘ಗುಸ್ತಖ್’ (ತನ್ನ ಧರ್ಮ ದೂಷಣೆ ಮಾಡುವವರು) ಎಂದು ಪರಿಗಣಿಸಿದ್ದಾರೆ. ತನ್ನ ಕೆಟ್ಟ ಈ ತರದ ಯೋಜನೆಗಳನ್ನು ಕಾರ್ಯಗತಗೊಳಿಸಲು ಪಾಕಿಸ್ತಾನ ಮತ್ತು ನೇಪಾಳದಲ್ಲಿ ವಾಸಿಸುವ ಮೇಲ್ವಿಚಾರಕರೊಂದಿಗೆ ಸಂಪರ್ಕವನ್ನು ಹೊಂದಿದ್ದಾಗಿ ವರದಿಯಾಗಿದೆ. ಭದ್ರತಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮೌಲ್ವಿ ವಿದೇಶಿ ಸಿಮ್ ಕಾರ್ಡ್ ಅನ್ನು ಸಹ ಬಳಸುತ್ತಿದ್ದುದಾಗಿ ವರದಿಯಾಗಿದೆ. ಇದೀಗ ಆತನ ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.

You might also like
Leave A Reply

Your email address will not be published.