ಬೆಂಗಳೂರಿನಲ್ಲಿ ನೀರಿನ ಸಮಸ್ಯೆ : ಮಳೆನೀರು ಕೊಯ್ಲಿಗಾಗಿ ಟೆಂಡರ್‌ ಆಹ್ವಾನಿಸಿದ ನಮ್ಮ ಮೆಟ್ರೋ

ಕೊಯ್ಲಿಗಾಗಿ 65 ಲಕ್ಷ ರೂ. ಮೊತ್ತದಲ್ಲಿ ಟೆಂಡರ್‌ ಆಹ್ವಾನಿಸಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಸದ್ಯ ನಮ್ಮ ಮೆಟ್ರೋ 74 ಕಿ.ಮೀ. ಸಂಚಾರ ನಡೆಸುತ್ತಿದ್ದು, 65 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ ಕೆಲ ನಿಲ್ದಾಣಗಳಲ್ಲಿ ಮಾತ್ರ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ನಮ್ಮ ಮೆಟ್ರೋ ಸಂಚರಿಸುತ್ತಿರುವ ನೇರಳೆ ಮತ್ತು ಹಸಿರು ಮಾರ್ಗದ ವಯಾಡಕ್ಟ್ ಕೆಳಗೆ ಹಾಗೂ ನಿಲ್ದಾಣಗಳಲ್ಲಿ ಮಳೆ ನೀರು ಕೊಯ್ಲು ಅನುಷ್ಠಾನಕ್ಕೆ 65 ಲಕ್ಷ ರೂ. ಮೊತ್ತದಲ್ಲಿ ನಿಗಮ ಟೆಂಡರ್‌ ಅಹ್ವಾನಿಸಿದೆ.

ಪ್ರತಿಯೊಂದು ನಿಲ್ದಾಣವನ್ನು ಕನಿಷ್ಠ ಒಂದು ಎಕರೆಗೂ ಹೆಚ್ಚು ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ನಿಲ್ದಾಣಗಳ ಹೊರತಾಗಿ, ವಯಾಡಕ್ಟ್ ಗಳು ಮಳೆ ನೀರನ್ನು ಸಂಗ್ರಹಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ. ಮೆಟ್ರೋ ಮಾರ್ಗಗಳ ಮೂಲಕ ನಗರದಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಮಳೆ ನೀರು ಕೊಯ್ಲು ಪ್ರಮುಖವಾಗಿದೆ ಎನ್ನುತ್ತಾರೆ ತಜ್ಞರು.

Water problem in Bengaluru: Our Metro invites tenders for rainwater harvesting

2012ರಲ್ಲಿ ಮೊದಲ ಬಾರಿ ಆರಂಭವಾದ ನೀರು ಕೊಯ್ಲು ಪದ್ಧತಿ:

2012ರಲ್ಲಿ ಬಿಎಂಆರ್‌ಸಿಎಲ್‌ ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆ ನಡುವಿನ ರೀಚ್‌-1ನಲ್ಲಿ ನೀರು ಕೊಯ್ಲು ಪದ್ಧತಿಯನ್ನು ಮೊದಲ ಬಾರಿ ಪ್ರಾರಂಭಿಸಿತು. ಇಲ್ಲಿ ಮೆಟ್ರೋ ಮಾರ್ಗದ ಮೇಲೆ ಬೀಳುವ ನೀರು ಕಾಂಕ್ರೀಟ್‌ ಪಿಲ್ಲರ್‌ನೊಳಗೆ ಅಳವಡಿಸಿರುವ 200 ಮಿ.ಮೀ. ಸುತ್ತಳತೆಯ ಕೊಳವೆಯ ಮೂಲಕ ನಿಲ್ದಾಣದಲ್ಲಿ ನಿರ್ಮಿಸಿರುವ 3 ಸಾವಿರ ಲೀಟರ್‌ ಸಾಮರ್ಥ್ಯದ ನೀರು ಸಂಗ್ರಹದ ಟ್ಯಾಂಕ್‌’ಗೆ ಹೋಗುತ್ತದೆ. ಟ್ಯಾಂಕ್‌ ತುಂಬಿದ ಬಳಿಕ ಹೆಚ್ಚುವರಿ ನೀರು 5 ಮೀಟರ್‌ ಉದ್ದ ಹಾಗೂ 3 ಮೀಟರ್‌ ಸುತ್ತಳತೆಯ ಇಂಗು ಗುಂಡಿ ಸೇರುತ್ತದೆ.

ಎಷ್ಟು ನೀರು ಸಂಗ್ರಹ ಸಾಧ್ಯ?

ಬಿಎಂಆರ್‌’ಸಿಎಲ್‌, 35-ಕಿಮೀ ಉದ್ದ ಮತ್ತು 10-ಮೀಟರ್‌ ಅಗಲದ ವಯಾಡಕ್ಟ್ ಮೇಲೆ 30 ಮಿ.ಮೀ. ಮಳೆಯಾದರೆ 9,450 ಕಿಲೋ ಲೀಟರ್‌ ನೀರನ್ನು ಕೊಯ್ಲು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ, ಮೂರು ಪಿಲ್ಲರ್‌’ಗಳ ನಡುವಿನ ಅಂತರದಲ್ಲಿ 30 ಮಿ.ಮೀ. ಮಳೆಯಾದರೆ 15 ಕಿಲೋ ಲೀಟರ್‌ ನೀರನ್ನು ಸಂಗ್ರಹಿಸಬಹುದು. 35 ಕಿಮೀ ಉದ್ದ ಮತ್ತು 10 ಮೀಟರ್‌ ಅಗಲದ ವಯಾಡಕ್ಟ್ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾದರೆ (ವಾರ್ಷಿಕ ಮಳೆಯ ಪ್ರಮಾಣ 970 ಮಿ.ಮೀ.) 3.05 ಲಕ್ಷ ಲೀಟರ್‌ ಮಳೆ ನೀರು ಸಂಗ್ರಹಿಸಬಹುದು ಎಂದು ಬಯೋಮ್‌ ಎನ್ವಿರಾನ್ಮೆಂಟಲ್‌ ಟ್ರಸ್ಟ್‌ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.

You might also like
Leave A Reply

Your email address will not be published.