RCB vs PBKS : ಆರ್‌ʼಸಿಬಿ ಪ್ಲೇಯಿಂಗ್‌ 11, ಇಂಫ್ಯಾಕ್ಟ್‌ ಆಟಗಾರರ ಪಟ್ಟಿ ಇಲ್ಲಿದೆ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 6ನೇ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಎದುರು ಪ್ರವಾಸಿ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಕಾದಾಟ ನಡೆಸಲಿದ್ದು, ಈ ಬಾರಿ ಆರ್.ಸಿ.ಬಿ ಗೆಲ್ಲುತ್ತ ಎಂಬುದನ್ನು ಕಾದು ನೋಡಬೇಕಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್.ಸಿ.ಬಿ ತಂಡ 6 ವಿಕೆಟ್ ಗಳ ಹೀನಾಯ ಸೋಲುಂಡಿತು. ಅತ್ತ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು ಜಿದ್ದಾಜಿದ್ದಿನ ಪಂದ್ಯದಲ್ಲಿ 4 ವಿಕೆಟ್ಗಳ ಜಯ ದಕ್ಕಿಸಿಕೊಂಡು ಶುಭಾರಂಭ ಮಾಡಿದೆ. ರೋಚಕ ರನ್ ಚೇಸ್ನಲ್ಲಿ ಪಂಜಾಬ್ ತಂಡ ಇನ್ನು 4 ಎಸೆತಗಳು ಬಾಕಿ ಇರುವಾಗ ಗೆಲುವಿನ ನಗಾರಿ ಬಾರಿಸಿತ್ತು.

ಟೂರ್ನಿಯಲ್ಲಿ ಶುಭಾರಂಭ ಮಾಡಲು ವಿಫಲವಾಗಿರುವ ಆರ್ಸಿಬಿ ತಂಡ ಮೊದಲ ಜಯದ ಸವಿ ಕಂಡಿರುವ ಪಂಜಾಬ್ ಕಿಂಗ್ಸ್ ತಂಡದ ಕಠಿಣ ಸವಾಲು ಎದುರಿಸಲಿದೆ. ಐಪಿಎಲ್ 2024 ಟೂರ್ನಿಯಲ್ಲಿ ಆರ್ಸಿಬಿ ತಂಡ ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ತಂದುಕೊಳ್ಳುವುದೇ? ಅದರ ವಿವರವನ್ನು ಈ ಕೆಳಗೆ ನೀಡಲಾಗಿದೆ.

RCB vs PBKS : Here is the list of RCB Playing 11, Impact players

RCB ತಂಡದ ಸಂಭಾವ್ಯ ಪ್ಲೇಯಿಂಗ್ 11

01. ವಿರಾಟ್ ಕೊಹ್ಲಿ (ಬ್ಯಾಟರ್)
02. ಫಾಫ್ ಡು’ಪ್ಲೆಸಿಸ್ (ನಾಯಕ)
03. ರಜತ್ ಪಾಟಿದಾರ್ (ಬ್ಯಾಟರ್)
04. ಕ್ಯಾಮೆರಾನ್ ಗ್ರೀನ್ (ಆಲ್ರೌಂಡರ್)
05. ಗ್ಲೆನ್ ಮ್ಯಾಕ್ಸ್ವೆಲ್ (ಆಲ್ರೌಂಡರ್)
06. ಅನುಜ್ ರಾವತ್ (ವಿಕೆಟ್ಕೀಪರ್)
07. ಮಯಾಂಕ್ ದಾಗರ್ (ಆಲ್ರೌಂಡರ್)
08. ಕರಣ್ ಶರ್ಮಾ (ಲೆಗ್ ಸ್ಪಿನ್ನರ್)
09. ಆಕಾಶ್ ದೀಪ್ (ಫಾಸ್ಟ್ ಬೌಲರ್)
10. ಲಾಕಿ ಫರ್ಗ್ಯೂಸನ್ (ಫಾಸ್ಟ್ ಬೌಲರ್)
11. ಮೊಹಮ್ಮದ್ ಸಿರಾಜ್ (ಫಾಸ್ಟ್ ಬೌಲರ್)

ಇಂಪ್ಯಾಕ್ಟ್ ಪ್ಲೇಯರ್:

ಆರ್.ಸಿ.ಬಿ ತನ್ನ ಬಳಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ದಿನೇಶ್ ಕಾರ್ತಿಕ್ (ಬ್ಯಾಟರ್), ಯಶ್ ದಯಾಳ್ (ಬೌಲರ್), ಮಹಿಪಾಲ್ ಲೊಮ್ರೊರ್ (ಬ್ಯಾರರ್) ಅಥವಾ ವೈಶಾಖ್ ವಿಜಯ್ ಕುಮಾರ್ (ಬೌಲರ್) ಅವರನ್ನು ಬಳಕೆ ಮಾಡಿಕೊಳ್ಳಲಿದೆ.

You might also like
Leave A Reply

Your email address will not be published.