ಮಹಾಕಾಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಂಕಿ – 14 ಅರ್ಚಕರಿಗೆ ಗಾಯ

ಇಂದು ಹೋಳಿ! ಹೋಳಿಯ ಸಂಭ್ರಮ ದೇಶದೆಲ್ಲೆಡೆ ಮನೆಮಾಡಿದೆ. ಈ ಸಂಭ್ರಮವನ್ನು ದೇಶದಾದ್ಯಂತ ‌ದೇವಸ್ಥಾನಗಳಲ್ಲಿ ಆಚರಿಸುವ ಮೂಲಕ ಖುಷಿ ದುಪ್ಪಟ್ಟಾಗಿ ಮಾರ್ಪಾಡುತ್ತದೆ. ಇಂತಹುದೇ ಒಂದು ಸಂಭ್ರಮ ಆಚರಿಸಬೇಕಾದ ಘಳಿಗೆ ಅವಾಂತರದಲ್ಲಿ ಕೊನೆಯಾದ ಬಗ್ಗೆ ಇಂದು ವರದಿಯಾಗಿದೆ.

ಉಜ್ಜೈನಿಯ ‌ಮಹಕಾಲೇಶ್ವರ ದೇವಸ್ಥಾನದ ಗರ್ಭಗೃಹದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 14 ಜನ ಅರ್ಚಕರು ಗಾಯಗೊಂಡಿದ್ದಾಗಿ ವರದಿಯಾಗಿದೆ‌. ಗಾಯಗೊಂಡ ಅರ್ಚಕರ ಪೈಕಿ ಕೆಲವರು ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಉಳಿದವರು ಇಂದೋರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮುಂಜಾನೆಯ ಭಸ್ಮಾರತಿಯ ಸಂಧರ್ಭದಲ್ಲಿ ಕರ್ಪೂರವುಳ್ಳ ಆರತಿಯ, ಪೂಜೆಯ ತಟ್ಟೆಯಮೇಲೆ ಹೋಳಿ ಆಡಲು ಬಳಸುವ ಗುಲಾಬಿ ಬಣ್ಣ ಚೆಲ್ಲಿದ ಪರಿಣಾಮ ಕರ್ಪೂರ ಚೆಲ್ಲಿ ಬೆಂಕಿ ದುಪ್ಪಟ್ಟಾಗಿ ನೆಲದ ತುಂಬಾ ಹಬ್ಬಿದೆ‌.

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಅವರಿಂದ ಘಟನೆಯ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಹೇಳಿದ್ದಾರೆ.‌‌ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಬೆಳಿಗ್ಗೆಯಿಂದ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಹಾಗೂ ಎಲ್ಲಾ ಗಾಯಾಳುಗಳು ಶೀಘ್ರವಾಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಬಾಬಾ ಮಹಾಕಾಲೇಶ್ವರನನ್ನು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

You might also like
Leave A Reply

Your email address will not be published.