ಇದು ರಾಮಾನುಭವ – ಶಿಲ್ಪಿ ಅರುಣ್ ಯೋಗಿರಾಜ್ ಮನದಾಳದ ಮಾತು

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನೆಲೆಯೂರಿರುವ ಮಂದಸ್ಮಿತನಾದ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದಂತೂ ಪಕ್ಕಾ! ಅಷ್ಟಕ್ಕೂ ಈ ಕಣ್ಣುಗಳ ಕೆತ್ತನೆಗೆ ಅರುಣ್ ಅವರು ವಹಿಸಿಕೊಂಡ ಜವಾಬ್ದಾರಿಗಳೇನು?

Ramalala

ಅರುಣ್ ಅವರು ರಾಮಲಲ್ಲಾನ ಮೂರ್ತಿಯನ್ನು ಗರ್ಭಗುಡಿ ಒಳಗಡೆ ಕೆತ್ತನೆ ಮಾಡಿದರೂ ರಾಮನ ಕಣ್ಣಗಳನ್ನು ಮಾತ್ರ ಗರ್ಭಗುಡಿಯ ಹೊರಗಡೆ ಕೆತ್ತಿದ್ದರಂತೆ. ಕಣ್ಣುಗಳಿಗಾಗಿಯೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರಂತೆ.

ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಮುಚ್ಚಿದ್ದರು. ನಂತರ ಅವರು ಜೇನುತುಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುವುದಾಗಿ ಅರುಣ್ ಯೋಗಿರಾಜು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿದ್ದು, ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಎಂದು ವಿಚಾರಿಸಬೇಕೆನಿಸಿದರು ನನ್ನ ಪಕ್ಕದಲ್ಲಿ ಅವರು ಇರಲಿಲ್ಲ. ನನ್ನ ತಂದೆ ಮಾತ್ರ ಅಲ್ಲ, ಆ ಸ್ಥಳದಲ್ಲಿ ನನ್ನ ಹೊರತಾಗಿ ಯಾರು ಕೂಡ ಇರಲಿಲ್ಲ. ಒಂದು ರೀತಿಯ ಭಯವೋ, ದುಗುಡವೋ ನನ್ನನ್ನು ಆವರಿಸಿಕೊಂಡಿತ್ತು. ಭಯ ತಡೆದುಕೊಳ್ಳಲಾಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹಂಚಿಕೊಂಡಿರುವುದಾಗಿ ಮಾಧ್ಯಮದವರ ಮುಂದೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

arun yogiraj

You might also like
Leave A Reply

Your email address will not be published.