ಬಾಲರಾಮನ ನೋಡಲು ಬಂದ ಹನುಮ!!

ಅಯೋಧ್ಯೆಯಲ್ಲಿ ರಾಮ‌ ಮಂದಿರ ನಿರ್ಮಿಸುವುದು ಹಿಂದೂ ಸಮುದಾಯದ ಬಹುದೊಡ್ಡ ಕನಸಾಗಿದ್ದು ಯಾವುದೇ ಅಡ್ಡ ದಾರಿ ಹಿಡಿಯದೇ, ಸತತ ಕಾನೂನು ಹೋರಾಟಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.‌ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರಿಗೂ ರಾಮಭಕ್ತರು ಮನಸ್ಸು ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ಶ್ರೀ ರಾಮನ ಭಕ್ತಿಗೆ ಎಲ್ಲೆ ಏನು ಎಂಬಂತೆ ರಾಮ‌ ಮಂದಿರದಲ್ಲಿ ನಡೆದ ಅಪರೂಪದ ಘಟನೆಯ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಹಂಚಿಕೊಂಡಿದೆ. ‘ಮಂಗಳವಾರ ಸಂಜೆ ಸರಿ ಸುಮಾರು 5.30 ರ ಹೊತ್ತಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿ ಪ್ರವೇಶಿಸಿ ‘ಉತ್ಸವ ಮೂರ್ತಿ’ ಬಳಿ ತಲುಪಿತು. ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಯು ಅಲ್ಲಿಂದ ಆಗತಾನೆ ಹೊರನಡೆದಿದ್ದರು ಹಾಗೂ ಕೋತಿಯನ್ನು ನೋಡಿದ ತಕ್ಷಣ ವಿಗ್ರಹಕ್ಕೆ ಹಾನಿಯುಂಟು ಮಾಡಬಹುದು ಎಂದು ಕೋತಿಯೆಡೆಗೆ ಓಡಿದರು. ಆದರೆ ಅದು ಯಾರಿಗೂ ತೊಂದರೆ ಕೊಡದೆ ಉತ್ತರದ ದ್ವಾರದ ಕಡೆ ಹೋಗಿ, ತನ್ನಷ್ಟಕ್ಕೆ ತೆರಳಿದೆ. ಬಾಲ ರಾಮನ ದರ್ಶನಕ್ಕೆ ಹನುಮನೇ ಬಂದಿರಬಹುದು ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು’ ಎಂದು ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.‌

ಇನ್ನು ಈ ಹಿಂದೆ ತಾತ್ಕಾಲಿಕ ದೇಗುಲದಲ್ಲಿ‌ ಇರಿಸಲಾಗಿದ್ದ ಶ್ರೀ ರಾಮನ ಪುಟ್ಟ ಮೂರ್ತಿಯನ್ನೇ ಈಗ ಉತ್ಸವ ಮೂರ್ತಿಯಾಗಿ ಕರೆಯಲಾಗುತ್ತಿದೆ.‌ ಇದನ್ನು ಕೂಡಾ ಗರ್ಭಗುಡಿಯ ಒಳಗೇ ಇರಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ.

You might also like
Leave A Reply

Your email address will not be published.