2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ – ಚುನಾವಣಾ ಸಾಂಗ್ ರಿಲೀಸ್!

ಇಂದು ನವದೆಹಲಿಯಲ್ಲಿ ಬಿಜೆಪಿ ಪಕ್ಷದ ಕೇಂದ್ರ ಕಛೇರಿಯಲ್ಲಿ ನಮೋ ನವ ಮತದಾತ ಸಮಾರಂಭದಲ್ಲಿ ಮಾತನಾಡಿದ ಜೆ.ಪಿ.ನಡ್ಡಾರವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಕ್ಷಮ ಭಾರತ, ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ಸಾಧಿಸುವ ಹಾದಿಯಲ್ಲಿ ನಮಗೆಲ್ಲರಿಗೂ ಗುರಿಯನ್ನು ಹಾಕಿಕೊಟ್ಟಿದ್ದಾರೆ ಎಂದರು.‌

ಇನ್ನು ‌ನೆರೆದಿದ್ದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ರಾಷ್ಟ್ರೀಯ ಚುನಾವಣಾ ದಿನ’ದ ಶುಭಾಶಯ ಕೋರಿ, ಯುವಜನತೆಯ ನಡುವೆ ಇರುವುದರಿಂದ ಉತ್ಸಾಹ ಹುಮ್ಮಸ್ಸು ಸಿಗುತ್ತದೆ ಹಾಗೆ, ಪ್ರತಿಯೋರ್ವರ ಜೀವನವು 18 ರಿಂದ 25 ವರ್ಷದ ಒಳಗೆ ಹಲವು ಏರಿಳಿತಗಳನ್ನು ನೋಡುತ್ತದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಭಿವೃದ್ಧಿಯ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕು. ಈ ವಯಸ್ಸು ಏನನ್ನಾದರೂ ಸಾಧಿಸುವ ಅಥವಾ ಆರಂಭಿಸುವ ಬಗ್ಗೆ ಹಲವು ಕುತೂಹಲಗಳನ್ನು ಹೊಂದಿರುತ್ತದೆ ಈ ಬಾರಿ ಪ್ರಜಾ ಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುವ ಮೂಲಕ ಆರಂಭವಾಗಲಿ ಎಂದರು.

ಇಂದು ಭಾರತದ ಹಿರಿಮೆ ಜಗತ್ತಿನಾದ್ಯಂತ ಪಸರಿಸಿದೆ ಹಾಗೂ ಭಾರತೀಯರ ಸಾಧನೆಯು ವಿಶ್ವದ ವೇದಿಕೆಯಲ್ಲಿ
ಮಹೋನ್ನತವಾಗಿದೆ ವಿಶ್ವದ ನಾಯಕರ ಜೊತೆ ನಾನು ಭೇಟಿಯಾದಾಗ, ಕೇವಲ ಅದು ನನ್ನ ಮತ್ತು ಅವರ ಭೇಟಿಯಾಗಿರುವುದಿಲ್ಲ ಬದಲಿಗೆ 140 ಕೋಟಿ ಭಾರತೀಯರು ಮತ್ತು ಅವರದ್ದಾಗಿರುತ್ತದೆ. ಇವತ್ತು ಭಾರತವು ಹಿಂದೆಂದಿಗಿಂತಲೂ ಪ್ರಬಲವಾಗಿ ಹೊರಹೊಮ್ಮಿದೆ ಇದೆಲ್ಲವೂ ಸಂಪೂರ್ಣ ಬಹುಮತದ ಸರ್ಕಾರದಿಂದ ಸಾಧ್ಯವಾಗಿದೆ.‌

ಕಳೆದ 2014 ರ ಹಿಂದಿನ ಯುವಜನತೆಯು ನಾವು ಇಂದು ಮಾತನಾಡುತ್ತಿರುವ ಸಾಧ್ಯತೆ ಮತ್ತು ಭರವಸೆಗಳ ಆಸೆಯನ್ನು ಕೈಚೆಲ್ಲಿ ಕೂತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಾನು ಕೆಂಪುಕೋಟೆಯಿಂದ ನಿಂತು ಮಾಡಿದ ಭಾಷಣದಲ್ಲಿ ಹೇಳಿದ್ದೆ ‘ಇದೇ ಸಮಯ ಮತ್ತು ಸರಿಯಾದ ಸಮಯ’ ಎಂಬುದಾಗಿ. ಭಾರತದ ಪ್ರಗತಿಯನ್ನು ನೀವು ನೋಡಿ, ಕೇಳಿ ತಿಳಿದುಕೊಂಡಿದ್ದೀರಿ.

ಭಾರತದ ಪ್ರಗತಿಗೆ, ಇದರ Infrastructure ವಲಯದಲ್ಲಿ ಆದ ಬದಲಾವಣೆಯು ಬಹುದೊಡ್ಡ ಕೊಡುಗೆ ನೀಡಿದೆ. ಪ್ರಾದೇಶಿಕ ಸಂಪರ್ಕದಿಂದ ಸಂವಹನದವರೆಗೆ, ಮೊಬೈಲ್ ಟವರ್‌ಗಳಿಂದ ಆಪ್ಟಿಕಲ್ ಪೈಬರ್ ನೆಟ್ವರ್ಕ್ ವರೆಗೆ, ಸೆಮಿ ಕಂಡಕ್ಟರ್ ‌ಗಳ ಮಿಷನ್ ನಿಂದ, ಹೈಡ್ರೋಜನ್ ವರೆಗೆ, ವಿಮಾನಯಾನ ಕ್ಷೇತ್ರದಿಂದ ಪ್ರವಾಸೋದ್ಯಮ ಕ್ಷೇತ್ರದವರೆಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬದಲಾವಣೆ ನಿಮಗಾಗಿ, ಈ ದೇಶದ ಯುವಜನತೆಗಾಗಿ ಎಂದು ಹೇಳಿದರು‌.

ಇನ್ನು ಇದೇ ಸಂಧರ್ಭದಲ್ಲಿ 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಧಿಕೃತ ಚುನಾವಣಾ ಗೀತೆಯನ್ನು ಸರ್ಕಾರದ ಸಾಧನೆಗಳನ್ನು ಸಾರುವ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದೆ.

You might also like
Leave A Reply

Your email address will not be published.