ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಗೆ ಹೆಚ್ಚು ದಿನ ಉಳಿಗಾಲವಿಲ್ಲ – ಅನಂತ್ ಕುಮಾರ್ ಹೆಗಡೆ

ಹಿಜಾಬಿನ ಹಿಂದೆ ತಿರುಗುವ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚುದಿನ ಉಳಿಗಾಲವಿಲ್ಲ. ರಾಜಕೀಯವಾಗಿ ಬದುಕಬೇಕೆಂದರೆ ಇವರು ಮುಸ್ಲಿಂರ ಹಿಜಾಬನ್ನು ಹಿಡಿದುಕೊಂಡೇ ಓಟು ತೆಗೆದುಕೊಳ್ಳಬೇಕು. ಅಲ್ಪ ಸಂಖ್ಯಾತರ ಓಟುಗಳಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಿದ್ದು ಕಾಂಗ್ರೆಸ್ ಇಲ್ಲಿಯವರೆಗೂ ಬಹುಸಂಖ್ಯಾತರ ರಾಜಕಾರಣ ಮಾಡದೇ ತಮ್ಮ ಮನಸ್ಸೋ ಇಚ್ಛೆಯಂತೆ ರಾಜಕೀಯ ಬಂಡಿಯನ್ನು ಎಳೆಯುತ್ತ ಬಂದಿದ್ದಾರೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಮ್ಮದ್ ನ ಸರ್ಕಾರ. ಕರ್ನಾಟಕವನ್ನು ನಾನಾ ಆಯಾಮಗಳಲ್ಲಿ ತೊಂದರೆಗೀಡು ಮಾಡಿಕೊಂಡು ಬಂದ ವ್ಯಕ್ತಿಯನ್ನೇ ಕೇಂದ್ರವಾಗಿಸಿರಿಕೊಂಡು ರಾಜಕೀಯ ಮಾಡಲೊರಟ್ಟಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಶಾಸ್ತಿ ಕಲಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇಂತಹ ದುರಂಹಕಾರಿ ಸರ್ಕಾರ ರಾಜ್ಯದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಅದಾಗ್ಯೂ ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರಗಳಿಗೆ ಉಳಿಗಾಲವಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಮುನ್ನಲೆಗೆ ಬರಬೇಕೆಂದರೆ ಹಿಜಾಬನ್ನು ಹಿಡಿದುಕೊಂಡೆ ಓಟು ಪಡೆಯಬೇಕೆ ವಿನಃ ಬಹುಸಂಖ್ಯಾತರನ್ನ ಹಿಂಬಾಲಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರಿಗೆ ನಿಜಕ್ಕೂ ದಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಈ ಮೂಲಕ ಸವಾಲೊಡ್ಡಿದ್ದಾರೆ.

hijab in Karnataka

ಈ ವೇಳೆ ‘ಯಾರು ಬೇಕಾದರೂ, ಏನು ಬೇಕಾದರೂ ಡ್ರೇಸ್ ಹಾಕಿಕೊಂಡು ಹೋಗಬಹುದು’ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಉತ್ತರಿಸಿದ ಅವರು, ಇವರ ಹೇಳಿಕೆಯು ಮುಂದಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಯನ್ನು ಸೃಷ್ಟಿಮಾಡಲಿದೆ. ಶಾಲಾ ಸಮವಸ್ತ್ರ ಎಂದರೆ ಮಕ್ಕಳಲ್ಲಿ ಯಾವುದೇ ಭೇದ-ಭಾವವನ್ನು ಸೃಷ್ಟಿಮಾಡದೇ ಎಲ್ಲರಲ್ಲೂ ಐಕ್ಯತೆಯ ಭಾವವನ್ನು ಮೂಡಿಸುವ ಸಮವಸ್ತ್ರವನ್ನು ಅಲ್ಲಗಳೆದಿರುವುದು ಎಷ್ಟರ ಮಟ್ಟಿಗೆ ಸರಿ? ಮುಂದಿನ ದಿನಗಳಲ್ಲಿ ಹಿಂದು ಯುವಕರು ಕೇಸರಿ ಶಾಲು ಹಾಕಿದರೆ, ಮುಸ್ಲಿಂರು ಹಿಜಾಬ್ ಧರಿಸುತ್ತಾರೆ ಎಂದು ತಿಳಿಸಿದರು.

You might also like
Leave A Reply

Your email address will not be published.