ಬೆಂಗಳೂರು – ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

ಪ್ರಯಾಣಿಕರ ಪರದಾಟ ತಪ್ಪಿಸಲು BMRCL ಕಡಿಮೆ ಸಮಯದಲ್ಲಿ ಹೆಚ್ಚು ರೈಲುಗಳನ್ನು ಸಂಚರಿಸಲು ನಿರ್ಧಾರಿಸುವ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ರೈಲುಗಳು ಹೆಚ್ಚಾಗುತ್ತವೆ? ಎಷ್ಟು ಸಮಯ ನಿಗದಿ ಪಡಿಸಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!

ಈ ತಿಂಗಳಲ್ಲೇ ಐದಾರು ಬಾರಿ ತಾಂತ್ರಿಕ ದೋಷದಿಂದ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿತ್ತು ನಮ್ಮ ಮೆಟ್ರೋ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಮೆಟ್ರೋ ಕುರಿತು ಬೇಸರವು ಮೂಡಿತ್ತು. ಸಾಮಾನ್ಯವಾಗಿ 10, 7, 6, 5 ನಿಮಿಷಗಳಿಗೊಮ್ಮೆ ಮೆಟ್ರೋ ಸಂಚಾರದಲ್ಲಿತ್ತು. ಆದರೆ ಇದೀಗ ಪೀಕ್ ಅವರ್ ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ತಪ್ಪಿಸಲು BMRCL ಕಡಿಮೆ ಸಮಯದಲ್ಲಿ ಹೆಚ್ಚು ರೈಲುಗಳನ್ನು ಸಂಚರಿಸಲು ನಿರ್ಧಾರ ಮಾಡಿದೆ.

Sweet news for metro commuters

ಮೆಜೆಸ್ಟಿಕ್ ನಿಂದ ಗರಡುಚಾರ್ ಪಾಳ್ಯ ಸ್ಟೇಷನ್ ಗಳ ನಡುವೆ ಪೀಕ್ ಅವರ್ ನಲ್ಲಿ ಹೆಚ್ಚು ರೈಲು ಓಡಾಟ ನಡೆಸಲು ಚಿಂತನೆ ನಡೆಸಿದೆ. ಈ ಮಾರ್ಗಗಳಲ್ಲಿ ಬೆಳಗ್ಗೆ 8.45 ರಿಂದ ಬೆಳಗ್ಗೆ 10.20 ರವೆಗೆ ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ ಮಾಡುವುದಾಗಿ ತಿಳಿಸಿದೆ.

ಟ್ರಿನಿಟಿ, ಇಂದಿರಾನಗರ, ಕೆ ಆರ್ ಪುರಂ, ಬೆನ್ನಿಗನಹಳ್ಳಿ ಪ್ರಯಾಣಿಕರ ಅವಶ್ಯಕತೆಗಳನ್ನ ಪೂರೈಸಲು ಬಿಎಂಆರ್ಸಿಎಲ್ ಪ್ಲ್ಯಾನ್ ಮಾಡಿದ್ದು, ಇದೇ ಸೋಮವಾರದಿಂದ ಬೆಳಗ್ಗಿನ ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ಆರಂಭವಾಗಲಿದೆ.

ಜೊತೆಗೆ ರೈಲು, ಇಂಟರ್ಸಿಟಿ ಬಸ್ಗಳಲ್ಲಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಕೂಡ ಆರಂಭವಾಗುತ್ತಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು ಹೊರಡಲಿದೆ.

ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ, 5.00 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು BMRCL ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

 

You might also like
Leave A Reply

Your email address will not be published.