ಮುಸಲ್ಮಾನ ಮಹಿಳೆಯರು ಹಿಜಾಬ್ ಧರಿಸುವುದು ಆಯ್ಕೆಯಲ್ಲ, ಅನಿವಾರ್ಯ ಮತ್ತು ಅಗತ್ಯ – ಮೌಲಾನಾ ಬದ್ರುದ್ದಿನ್ ಅಜ್ಮಲ್

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಹೋಗುವ ವಿಚಾರವಾಗಿ ಭುಗಿಲೆದ್ದ ಕಿಡಿ ದೇಶದಾದ್ಯಂತ ಹಬ್ಬಿತ್ತು. ಅದಕ್ಕೆ ತುಪ್ಪ ಸುರಿಯುವ ಹಾಗೆ ಕೆಲವು ಎಡಪಂಥೀಯರು ಸಮರ್ಥನೆಯನ್ನೂ ಕೂಡ ಮಾಡಿಕೊಂಡಿದ್ದರು. ಆ ಬಿಸಿ ಪೂರ್ತಿಯಾಗಿ ಆರುವ ಮುನ್ನವೇ ಈಗ ಹಿಜಾಬ್ ಗೆ ಸಂಭಂಧಿಸಿದ ಇನ್ನೊಂದು ವಿಚಾರ ಬೆಳಕಿಗೆ ಬಂದಿದೆ.

All India United Democratic Front (AIUDF) ನ ಅಧ್ಯಕ್ಷ ಮೌಲಾನಾ ಬದ್ರುದ್ದಿನ್ ಅಜ್ಮಲ್ ಅನ್ಯಧರ್ಮಿಯರನ್ನು ಕೆರಳಿಸುವ ಹೇಳಿಕೆಗಳಿಂದಲೇ ಪ್ರಸಿದ್ಧಿಯಾಗಿದ್ದು ಜಾಸ್ತಿ. ಈಗ ಅಂತಹುದೇ ಸಾಲಿನಲ್ಲಿ ‘ಮುಸ್ಲಿಂ ಮಹಿಳೆಯರು ಐಎಎಸ್, ಐಪಿಎಸ್ ಅಥವಾ ಡಾಕ್ಟರ್ ಇನ್ಯಾವುದೇ ವಿಭಾಗವಾಗಿದ್ದರೂ ಅವರ ಕೆಲಸದ ವೇಳೆ ಹಿಜಾಬ್ ಧರಿಸಬೇಕು’ ಎಂದು ಅಸ್ಸಾಂನಲ್ಲಿ ನಡೆದ ರ್ಯಾಲಿಯ ವೇಳೆ ಹೇಳಿದ್ದಾರೆ.ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ತಮ್ಮ ಇಸ್ಲಾಂ ಗುರುತಿಗಾಗಿ ಧರಿಸಬೇಕು, ಒಂದು ವೇಳೆ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸುವುದು ಗೊತ್ತಿಲ್ಲ ಎಂದಾದರೆ ಅವರು ಹೇಗೆ ನಿಜವಾದ ಮುಸಲ್ಮಾನರಾಗುತ್ತಾರೆ? ಕೂದಲು ರಾಕ್ಷಸರ ದಾರವಿದ್ದಂತೆ (Devils thread ) ಮೇಕಪ್ ಕೂಡಾ ಮಾಡಿಕೊಳ್ಳಬಾರದು.

ಕೆಲವು ಕಡೆಗಳಲ್ಲಿ ಮುಸಲ್ಮಾನ ಯುವತಿಯರು ಹಿಜಾಬ್ ಧರಿಸಿ ಹೋಗುವುದನ್ನು ನೋಡಿದ್ದೇನೆ ಯಾರು ಧರಿಸುವುದಿಲ್ಲವೋ ಅವರು ತಲೆಯನ್ನು ಮುಚ್ಚುವ ಹಾಗೆ ಹಿಜಾಬ್ ಧರಿಸಿ ಕಣ್ಣು ದಾರಿಯನ್ನು ನೋಡುವಂತೆ ನಡೆಯಬೇಕು‌. ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ ಧರಿಸಿ ಹೋಗುವುದು ಆಯ್ಕೆಯಲ್ಲ, ಅನಿವಾರ್ಯ ಮತ್ತು ಅಗತ್ಯ ಎಂದಿದ್ದಾರೆ.ಈ ತರಹದ ಹೇಳಿಕೆ ಈತ ನೀಡಿದ್ದು ಇದೇ ಮೊದಲೇನಲ್ಲ, ಕಳೆದ ಅಕ್ಟೋಬರ್‌‌ನಲ್ಲಿ ಯಾರಿಗೆ ಎರಡು ಜನ ಹೆಂಡತಿಯರನ್ನು ಹೊಂದುವ ಶಕ್ತಿ ಇದೆಯೋ ಅವರು ಇನ್ನೊಂದು ಮದುವೆಯ ಬಗ್ಗೆ ಯೋಚಿಸಬೇಕು, ನನಗೀಗ ವಯಸ್ಸಾಗಿದೆ ಇಬ್ಬರು ಹೆಂಡತಿಯನ್ನು ಹೊಂದುವ ಶಕ್ತಿ ಇಲ್ಲ. ಹಿಮಂತ ಬಿಸ್ವ ಸರ್ಮ ಯಾವಾಗಲೂ ಅಧಿಕಾರದಲ್ಲಿ ಇರುವುದಿಲ್ಲ ನಾವು ಅಧಿಕಾರಕ್ಕೆ ಬಂದ ಬಳಿಕ ಎರಡು ಹೆಂಡತಿಯರನ್ನು ಹೊಂದುವ ಅಧಿಕಾರವನ್ನು ಮತ್ತೆ ತರುತ್ತೇವೆ ಎಂದು ಹೇಳಿದ್ದನ್ನು ಸ್ಮರಿಸಬಹುದು‌.

 

 

You might also like
Leave A Reply

Your email address will not be published.