I.N.D.I ಒಕ್ಕೂಟ – ನಾನೊಂದು ತೀರ ನೀನೊಂದು ತೀರ

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಡಿ ಅಲಯನ್ಸ್ ನಲ್ಲಿ‌ ನಾನಾ ತರದ ಬಿರುಕುಗಳು ಜಾಸ್ತಿ ಆಗುತ್ತಲಿವೆ ಹೊರತು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ನಿರೀಕ್ಷಿಸಿದಂತೆ ಇಂಡಿ ಅಲಯನ್ಸ್ ಎನ್ನುವುದು ಕೇವಲ ಖಾಲಿ ಹಾಳೆಯಲಿ ಇದೆಯೇ ಹೊರತು ನಿಜವಾಗಿ ಅದರ ಉಪಸ್ಥಿತಿ ಕಾಣಿಸುತ್ತಿಲ್ಲ. ಯಾವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆಗೆ ಕೈಗೂಡಿಸಲು ಮನಸು ಮಾಡಿದಂತೆ ಕಾಣುತ್ತಿಲ್ಲ.

ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ಅಧಿರಂಜನ್ ಚೌಧರಿ‌ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು, ಎಲ್ಲವೂ ಮಮತಾ ಹೇಳಿದಂತೆ ನಡೆಯುವುದಿಲ್ಲ, ಅವಕಾಶವಾದಿ ಆಕೆ.‌ 2011ರಲ್ಲಿ ಕಾಂಗ್ರೆಸ್‌ನಿಂದಾಗಿಯೇ ಅವರು ಅಧಿಕಾರಕ್ಕೆ ಬಂದದ್ದು ಎಂದು ಹೇಳಿದ್ದರು.

ಅಧಿರಂಜನ್ ಚೌಧರಿಯವರ ಈ ಹೇಳಿಕೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಇಲ್ಲ ಎಂದು ಮಮತಾ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರವೇಶಿಸುವ ಹೊತ್ತಲ್ಲೇ ಇಂತಹ ಬೆಳವಣಿಗೆಯಾಗಿದ್ದು ಕಾಂಗ್ರೆಸ್ ವಲಯಕ್ಕೆ ಮುಜುಗರಕ್ಕೀಡುಮಾಡಿದಂತಾಗಿದೆ.

ಕಳೆದ ಬಾರಿ ಪಂಚ ರಾಜ್ಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಸಾಗಿದ ರಾಜ್ಯಗಳಲ್ಲಿ‌ ಮೂರರಲ್ಲಿ ಬಿಜೆಪಿ ನಿರಾಯಾಸವಾಗಿ ಗೆದ್ದಿತ್ತು, ಈ ಬಾರಿ ಕೂಡಾ ಅಸ್ಸಾಂ‌ನಲ್ಲಿ ಭಾರೀ ಹೈಡ್ರಾಮಾದ ನಂತರ ಈಗ ಪಶ್ಚಿಮ ಬಂಗಾಳದಲ್ಲಿ ಎದ್ದ ಸುನಾಮಿಯನ್ನು ಇಂಡಿ ಅಲಯನ್ಸ್ ಹೇಗೆ ಎದುರಿಸುತ್ತದೆ ಎಂದು ಕಾದು ನೋಡಬೇಕು.

You might also like
Leave A Reply

Your email address will not be published.