ಹೆಚ್ಚುವರಿ ಭದ್ರತಾ ಠೇವಣಿ (ASD) ಎಂದರೇನು?

ಬೆಸ್ಕಾಂ ಗ್ರಾಹಕರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡುವಾಗ ಭದ್ರತಾ ಠೇವಣಿ ಪಡೆಯಲಾಗುತ್ತದೆ. ಪ್ರತಿ ವರ್ಷ ವಿದ್ಯುತ್ ಬಳಕೆ ಪ್ರಮಾಣದ ಆಧಾರದ ಮೇಲೆ ಭದ್ರತಾ ಠೇವಣಿಯನ್ನು ಹೆಚ್ಚಿಸಿ ಹೆಚ್ಚುವರಿ ಭದ್ರತಾ ಠೇವಣಿ (ASD) ಸಂಗ್ರಹಿಸಲಾಗುತ್ತದೆ.

ಉದಾ: ಪ್ರತಿ ವರ್ಷದ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಶುಲ್ಕವನ್ನು ಪಡೆದು, ಎರಡು ತಿಂಗಳ ಸರಾಸರಿ ಶುಲ್ಕದಷ್ಟು ಭದ್ರತಾ ಠೇವಣಿ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ಠೇವಣಿ ಇರುವ ಮೊತ್ತ ಎರಡು ತಿಂಗಳ ಸರಾಸರಿ ಶುಲ್ಕಕ್ಕಿಂತ ಎಷ್ಟು ಕಡಿಮೆ ಇರುತ್ತದೆಯೋ ಅಷ್ಟು ಮೊತ್ತವನ್ನು (ASD) ಪಾವತಿ ಮಾಡುವಂತೆ ನೋಟಿಸ್ ನೀಡಲಾಗುತ್ತದೆ. ಪ್ರತಿ ವರ್ಷ ಮಾರ್ಚ್-ಏಪ್ರಿಲ್ ನಲ್ಲಿ ASD ಲೆಕ್ಕಾಚಾರ ಮಾಡಿ ನೋಟಿಸ್ ಜಾರಿ ಮಾಡಲಾಗುತ್ತದೆ.

ಇದರಿಂದ ಗ್ರಾಹಕರಿಗೂ ಅನುಕೂಲ

ASD ಎಂಬುದು ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್, ಬಾಡಿಗೆದಾರರು ಮನೆ ಮಾಲೀಕರಿಗೆ ನೀಡುವ ಮುಂಗಡ ಹಣವಿದ್ದಂತೆ. ಗ್ರಾಹಕರು ಸೂಕ್ತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಸದೆ ಇದ್ದಾಗ ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗಲಿದ್ದು, ಗ್ರಾಹಕರು ವಿದ್ಯುತ್ ಬಳಕೆ ಮಾಡಿದ 30 ದಿನಗಳವರೆಗೆ ಪಾವತಿಗೆ ಸಮಯ ನೀಡಲಾಗುತ್ತದೆ. ಠೇವಣಿ ಮೊತ್ತ ಇದ್ದಾಗ 45 ದಿನ ಸಮಯ ಇರುತ್ತದೆ. ಹೀಗಾಗಿ ಸಕಾಲಕ್ಕೆ ಶುಲ್ಕ ಪಾವತಿಸದಿದ್ದರೂ 45 ದಿನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವುದಿಲ್ಲ.

ಪ್ರತಿ ವರ್ಷ ASD ಹೊರೆಯಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಉಳಿತಾಯದ ಟಿಪ್ಸ್ ಪಾಲಿಸಬಹುದು. ಪೀಕ್ ಅವರ್ ನಲ್ಲಿ ವಿದ್ಯುತ್ ಬಳಕೆ ಆದಷ್ಟು ಕಡಿಮೆ ಮಾಡುವ ಮೂಲಕ ವಿದ್ಯುತ್ ಶುಲ್ಕವನ್ನು ನಿಯಂತ್ರಿಸಬಹುದಾಗಿದೆ.

ನೀವು ಪಾವತಿಸುವ ASD ಹಣಕ್ಕೆ ಬಡ್ಡಿ ಹಣವು ಸಿಗುತ್ತದೆ!

ಹೌದು! ನೀವು ವಿದ್ಯುತ್ ಸಂಪರ್ಕ ಪಡೆಯುವಾಗ ಪಾವತಿಸಿದ ಭದ್ರತಾ ಠೇವಣಿಗೆ, ಪ್ರತಿ ವರ್ಷದ ಜೂನ್-ಜುಲೈ ತಿಂಗಳಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಹಾಗೂ ಈ ಹಣವನ್ನು ನಿಮ್ಮ ವಿದ್ಯುತ್ ಬಿಲ್ ನಲ್ಲಿ ಸರಿಹೊಂದಿಸಲಾಗುತ್ತದೆ. ಈ ನಿಟ್ಟಿನಲ್ಲಿ, ನಿಮ್ಮ ASD ಬಾಕಿಯಿದ್ದಲ್ಲಿ ಇಂದೇ ಪಾವತಿಸುವ ಮೂಲಕ ಮತ್ತಷ್ಟು ಪ್ರಯೋಜನ ಪಡೆದುಕೊಳ್ಳಬಹುದು.

ಹೆಚ್ಚುವರಿ ಭದ್ರತಾ ಠೇವಣಿಯನ್ನು ವಿವಿಧ ವಿಧಾನಗಳ ಮೂಲಕ ಪಾವತಿಸಿ:

1. ಬೆಸ್ಕಾಂನ ಅಧಿಕೃತ ವೆಬ್ಸೈಟ್
2. ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್
3. ಬೆಸ್ಕಾಂನ ಉಪವಿಭಾಗಗಳು
4. ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳು

ಗ್ರಾಮೀಣ (Non-RAPDRP) ಪ್ರದೇಶಗಳಲ್ಲಿ ASD ಅನ್ನು ಆನ್ಲೈನ್ ಮೂಲಕ ಪಾವತಿಸುವುದು ಹೇಗೆ?

1. ಬೆಸ್ಕಾಂನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
2. ಆನ್ಲೈನ್ ಸೇವೆಗಳಲ್ಲಿ Online bill payment ವಿಧಾನವನ್ನು ಆಯ್ಕೆ ಮಾಡಿದ ನಂತರ Non-RAPDRP ಅನ್ನು ಆಯ್ಕೆ ಮಾಡಿ.
3. ನಿಮ್ಮ ಗ್ರಾಹಕ ಸಂಖ್ಯೆಯನ್ನು ನಮೂದಿಸಿ, ASD (ಹೆಚ್ಚುವರಿ ಭದ್ರತಾ ಠೇವಣಿ) ಯನ್ನು ಆಯ್ಕೆಮಾಡಿ.
4. ಬಿಲ್ ನ ಮೊತ್ತವನ್ನು ತಿಳಿಯಿರಿ ಹಾಗೂ ನಿಮ್ಮ ಪಾವತಿ ವಿಧಾನವನ್ನು ಆಯ್ಕೆ ಮಾಡಿ.
5. ಆನ್ಲೈನ್ ಪೋರ್ಟಲ್ ಮುಖಾಂತರ ನಿಮ್ಮ ವಿದ್ಯುತ್ ಬಿಲ್ ಅನ್ನು ಸುರಕ್ಷಿತವಾಗಿ ಪಾವತಿಸಿ.

You might also like
Leave A Reply

Your email address will not be published.