Oppo A59 5G ವರ್ಷನ್ ಬಿಡುಗಡೆ! ಇದರ ಬೆಲೆ ಎಷ್ಟು?

ಆಧುನಿಕ ಜಗತ್ತಿಗೆ ಅನುಗುಣವಾಗಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತದೆ. ಅದರಲ್ಲೂ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಹೊಸ ಹೊಸ ಫೀಚರ್ಸ್ ಗಳೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಲೆ ಇರುತ್ತಾರೆ.

ಇದೀಗ ಒಪ್ಪೊ ತಮ್ಮ ಗ್ರಾಹಕರಿಗಾಗಿ ಬಜೆಟ್ ಹಾಗೂ ಮಧ್ಯಮ ಬೆಲೆಗೆ ಸಾಕಷ್ಟು ಹೊಸ ಹೊಸ ಫೀಚರ್ಸ್ ಗಳನ್ನು ಹೊಂದಿರುವ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಯಾವುದದು ಮೊಬೈಲ್? ಏನಿದರ ಹೊಸ ಫೀಚರ್ಸ್? ಎಂಬುದನ್ನು ಇಲ್ಲಿ ನೋಡೋಣ!

ಒಪ್ಪೋ A58 5G ಯ ಮುಂದಿನ ವರ್ಷನ್:

ಒಪ್ಪೋ ಕಂಪನಿಯ ಸ್ಮಾರ್ಟ್ ಫೋನ್ ಈಗಾಗಲೇ ಬಹಳಷ್ಟು ಎತ್ತರದ ಸ್ಥಾನವನ್ನು ಗಿಟ್ಟಸಿಕೊಂಡಿದೆ. ಈ ವಾರದ ಆರಂಭದಲ್ಲೇ ಚೀನಿ ತಯಾರಕರು ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರ್ಮ್ ಎಕ್ಸ್ ನಲ್ಲಿ ಒಪ್ಪೋ A59 5G ಸ್ಮಾರ್ಟ್ಫೋನ್ ಬಿಡುಗಡೆಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಈ ಮೊಬೈಲ್ ಗಾಗಿ ಈಗಾಗಲೇ ಸಾಕಷ್ಟು ಗ್ರಾಹಕರು ಕಾಯುತ್ತಿದ್ದರು. ಕೈಗೆಟುಕುವ 5G ಹ್ಯಾಂಡ್ಸೆಟ್ ಮಾತ್ರವಲ್ಲದೇ, ಬಜೆಟ್ ಬೆಲೆಯ ಈ ಮೊಬೈಲ್ನಲ್ಲಿ ಉತ್ತಮ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ ಆಯ್ಕೆಗಳನ್ನು ನೀಡಲಾಗಿದೆ.

ಭಾರತದಲ್ಲಿ ಒಪ್ಪೋ A59 5G ಬೆಲೆ:

• ಒಪ್ಪೋ A59 5G ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ.
• ಇದರ 4GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 14,999 ರೂ. ಇದೆ.
• 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್ ಕೂಡ ಲಭ್ಯ.
• ಡಿಸೆಂಬರ್ 25 ರಿಂದ ಒಪ್ಪೋ ಸ್ಟೋರ್, ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಇತರ ರಿಟೇಲ್ ಔಟ್ಲೆಟ್ಗಳ ಮೂಲಕ ಮಾರಾಟವಾಗಲಿದೆ.
• ಈ ಫೋನ್ ಸಿಲ್ಕ್ ಗೋಲ್ಡ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಎಂಬ ಎರಡು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಒಪ್ಪೋ A59 5G ಫೀಚರ್ಸ್:

• ಒಪ್ಪೋ A59 5G ಕಂಪನಿಯ Color OS 13.1 ಮೂಲಕ ಆಂಡ್ರಾಯ್ಡ್ 13 ಅನ್ನು ಆಧರಿಸಿದೆ.
• 90Hz ಡಿಸ್ಪ್ಲೇ, 750 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಮತ್ತು 96 ಪ್ರತಿಶತ NTSC ಹೈ ಕಲರ್ ಗ್ಯಾಮಟ್ನೊಂದಿಗೆ ಹೊಂದಿದೆ.
• ಮೀಡಿಯಾಟೆಕ್ ಡೈಮೆನ್ಸಿಟಿ 6020 ಚಿಪ್ಸೆಟ್ನಿಂದ ಚಾಲಿತವಾಗಿದೆ.
• Mali-G57 MC2 GPU ಜೊತೆಗೆ 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಒಪ್ಪೋ A59 5G ಮೊಬೈಲ್ ನ ಕ್ಯಾಮೆರಾ ಹೇಗಿದೆ?

• ಒಪ್ಪೋ A59 5G ಹಿಂಭಾಗದಲ್ಲಿ ಡ್ಯುಯಲ್ ಸಂವೇದಕವನ್ನು ಹೊಂದಿದೆ.
• 13-ಮೆಗಾಪಿಕ್ಸೆಲ್ ಮುಖ್ಯ ಶೂಟರ್ f.2.2 ದ್ಯುತಿರಂಧ್ರ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಜೊತೆಗೆ af/2.4 ಅಪರ್ಚರ್ನಿಂದ ಕೂಡಿದೆ.
• ಮುಂಭಾಗದ ಕ್ಯಾಮೆರಾ 8-ಮೆಗಾಪಿಕ್ಸೆಲ್ ಸಂವೇದಕವಾಗಿದ್ದು f/2.0 ದ್ಯುತಿರಂಧ್ರವನ್ನು ಹೊಂದಿದೆ.
• ಈ ಫೋನ್ 5,000mAh ಬ್ಯಾಟರಿಯನ್ನು 33W SUPERVOOC ಫ್ಲ್ಯಾಷ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ.
• 30 ನಿಮಿಷಗಳಲ್ಲಿ 52 ಪ್ರತಿಶತದಷ್ಟು ಚಾರ್ಜ್ ಮಾಡಬಹುದಾಗಿದೆ.
• ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ನೊಂದಿಗೆ ಬರುತ್ತದೆ.

You might also like
Leave A Reply

Your email address will not be published.