ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ಕೃತ್ಯ – ದಾಳಿಯ ಹೊಣೆ ಹೊತ್ತದ್ದು ಇದೇ ಸಂಘಟನೆ!

ರಷ್ಯಾದ ಮಾಸ್ಕೋದಲ್ಲಿ ನಡೆದ ಕನ್ಸರ್ಟ್ ಹಾಲ್‌‌ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಜನ‌ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾಗಿ ವರದಿಯಾದ ಬೆನ್ನಲ್ಲೇ ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ.

ಐಸಿಸ್‌ನ ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಇಲ್ಲವಾದರೂ ಟೆಲಿಗ್ರಾಂ ‌ನಲ್ಲಿ ಐಸಿಸ್ ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ಪ್ರಕಟಿಸಿದ ಕಿರುಹೇಳಿಕೆಯಲ್ಲಿ ದಾಳಿಯ ಹೊಣೆ ಹೊತ್ತಿದ್ದು ತಿಳಿದು ಬಂದಿದೆ.

ರಷ್ಯಾದ ಮಾಸ್ಕೋದ ಮೇಲೆ ದಾಳಿ ನಡೆಸಲು ಅಫ್ಘಾನಿಸ್ತಾನ ಮೂಲದ ಐಸಿಸ್-ಕೆ ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ – ಖೊರಾಸನ್ ಸಂಚು ನಡೆಸುತ್ತಿರುವುದಾಗಿ ಅಮೇರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ ಆದ CIA ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದಾಗಿ ಅಮೇರಿಕಾದ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಐಸಿಸ್-ಕೆ ಕಳೆದ ಎರಡು ವರ್ಷಗಳಿಂದ ರಷ್ಯಾದಲ್ಲಿ ಸ್ಥಿರವಾಗಿದೆ ಹಾಗೂ ತಮ್ಮ ಪ್ರೊಪಗಾಂಡ ವಿಡೀಯೋಗಳಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಟೀಕಿಸುತ್ತಲೇ ಇದ್ದಾರೆ‌‌. ಅಷ್ಟೇ ಅಲ್ಲದೇ, ಅಫ್ಘಾನಿಸ್ತಾನ, ಚೆಚೆನ್ಯಾ ಮತ್ತು ಸಿರಿತಾದಲ್ಲಿ ರಷ್ಯಾದ ಮಧ್ಯಸ್ಥಿಕೆ ಯನ್ನು ಐಸಿಸ್ ವಿರೋಧಿಸುತ್ತಲೇ ಬಂದಿತ್ತು ಎಂದು ನ್ಯೂಯಾರ್ಕ್ ಮೂಲದ ಕಂಪೆನಿಯೊಂದರ ಕೌಂಟರ್ ಟೆರರಿಸಂ ಅನಾಲಿಸ್ಟ್ ಕಾಲಿನ್ ಪೊ ಕ್ಲಾರ್ಕ್ ಹೇಳಿದ್ದಾರೆ.

ಈ ದಾಳಿಯ ಬಗ್ಗೆ ಮಾರ್ಚ್ ಏಳನೇ ತಾರೀಖಿನಂದೇ ಮಾಸ್ಕೋಗೇ ಅಮೆರಿಕಾವು ಎಚ್ಚರಿಕೆ‌ ನೀಡಿತ್ತು. ಆದರೆ ಎಷ್ಟು ಮಾಹಿತಿ ಅದಲು ಬದಲಾಗಿತ್ತು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಮೊದಲು ಇರಾನ್‌ ಮೇಲೆ ಭಯೋತ್ಪಾದಕ ದಾಳಿಯೊಂದರಲ್ಲಿ 103 ಜನರು ಹತರಾಗಿದ್ದು 211 ಮಂದಿ ಗಾಯಗೊಂಡಿದ್ದರು. ಆ ದಾಳಿಯ ಹೊಣೆಯನ್ನು ಕೂಡಾ ಐಸಿಸ್-ಕೆ ಹೊತ್ತುಕೊಂಡಿತ್ತು.

ಮಾಸ್ಕೋದ ಪ್ರಾದೇಶಿಕ ಗವರ್ನರ್ ಮಾಧ್ಯಮಗಳಿಗೆ ಮಾತನಾಡಿ, ಈ ದಾಳಿಯು ಕಳೆದ ಎರಡು ದಶಕದಲ್ಲಿ ರಷ್ಯಾದ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಎಂದು ಹೇಳಿದ್ದಾರೆ.‌ ಇನ್ನು, ಘಟನಾ ಸ್ಥಳದಲ್ಲಿ 70 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಚಿಕಿತ್ಸೆ ‌ನೀಡಲಾಗುತ್ತಿದೆ.‌ ಐದು ಮಕ್ಕಳು ಸೇರಿದಂತೆ 115 ಜನರನ್ನು ಆಸ್ಪತ್ರೆಗೆ ಸೇರಿಸಿಲಾಗಿದ್ದು, ಅದರಲ್ಲಿ 60 ಜನರ ಸ್ಥಿತಿ ಗಂಭೀರವಾಗಿದೆ. ಈವರೆಗೆ 100 ಜನರನ್ನು ಕಟ್ಟಡದಿಂದ ಅಗ್ನಿಶಾಮಕ ದಳದವರು ಸ್ಥಳಾಂತರ ಮಾಡಿದ್ದಾರೆ ಎಂದು ವರದಿಯಾಗಿದೆ.

You might also like
Leave A Reply

Your email address will not be published.