ಬಾಲರಾಮನ ದರ್ಶನ ಪಡೆದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಕೇಶವ ಮಹರಾಜ್

ಐಪಿಎಲ್ ಹಬ್ಬ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆನ್ನೈ ನಲ್ಲಿ ಆಡಿವೆ. ಮೊನ್ನೆ ತಾನೆ ಬೆಂಗಳೂರಿನಲ್ಲಿ ನಡೆದ RCB Unboxing ಈವೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಹೊಸ ಜೆರ್ಸಿಯನ್ನು ಫ್ರಾಂಚೈಸಿಯು ಬಿಡುಗಡೆ ಮಾಡಿತ್ತು ಹಾಗೂ ಐಪಿಎಲ್ ಆರಂಭಕ್ಕೂ ಮುನ್ನ ಎಲ್ಲಾ ತಂಡದ ನಾಯಕರು ತಮ್ಮ ಜೆರ್ಸಿಯ ಜೊತೆ ಫೋಟೋಗೆ ಪೋಸ್ ನೀಡಿದ್ದರು.

ಇದು ತನಕ ಪುರುಷರ ವಿಭಾಗದ ಐಪಿಎಲ್‌ನಲ್ಲಿ ಒಂದೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ವಿಭಾಗದ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಪುರುಷರ ತಂಡಕ್ಕೆ ಹೊಸ ಸ್ಪೂರ್ತಿಸಿಕ್ಕಂತಾಗಿ ಈ ಭಾರಿಯಾದರೂ ಪುರುಷರ ವಿಭಾಗದಲ್ಲಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ತಂಡವಿದೆ. ಇನ್ನು ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ನಾಯಕ ಕಮ್ಮಿನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದು ವಿಶ್ವಕಪ್ ಜೊತೆ ಜೊತೆಯೇ ಐಪಿಎಲ್ ಕಪ್ ಕೂಡಾ ಗೆಲ್ಲುವ ವಿಶ್ವಾಸ ದಲ್ಲಿ ಪೂರ್ತಿ ತಂಡವಿದೆ‌.

ಇನ್ನು ಲಖ್ನೌ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ ಐಪಿಎಲ್ ತಂಡ ಸೇರುವ ಮುನ್ನ ಉಜ್ಜೈನಿಯ ಮಹಾಕಾಲೇಶ್ವರ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಈಗ ಅದೇ ತಂಡದ ಸ್ಪಿನ್ನರ್ ದಕ್ಷಿಣ ಆಫ್ರಿಕಾದ ಆಟಗಾರ ಕೇಶವ ಮಹರಾಜ್ ಸಪ್ತ ಪುರಿಗಳಲ್ಲಿ ಒಂದಾದ ಅಯೋಧ್ಯೆಗೆ ಬೇಟಿ ನೀಡಿದ್ದು ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜೈ ಶ್ರೀ ರಾಮ್ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಮಹರಾಜ್ ಮಾತ್ರವಲ್ಲದೆ ಅವರ ಜೊತೆಗೆ ಎಲ್.ಎಸ್.ಜಿ. ಯ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಮತ್ತು ರವಿ ಬಿಷ್ಣೋಯ್ ಕೂಡಾ ಅಯೋಧ್ಯೆಗೆ ಭೇಟಿ ನೀಡಿದ್ದರು‌.

 

View this post on Instagram

 

A post shared by Keshav Maharaj (@keshavmaharaj16)

ಆಟಗಾರರು ಅಯೋಧ್ಯೆಗೆ ಭೇಟಿ ನೀಡಿದ ವೀಡಿಯೋವನ್ನು LSG ತಂಡವು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಕೇಶವ ಮಹರಾಜ್, ನೀವು ಮಂದಿರಕ್ಕೆ ‌ಕಾಲಿಟ್ಟಾಗ ಆಗುವ ವಿಶೇಷ ಅನುಭವವನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ, ಇಲ್ಲಿರುವ ಶಕ್ತಿ ನಿಮ್ಮನ್ನು ಸೆಳೆಯುತ್ತದೆ ಎಂದರೆ, LSG ಮುಖ್ಯ ತರಬೇತುದಾರ ಜಾಂಟಿ ರೋಡ್ಸ್, ಈ ಅನುಭವ ಭಾವನಾತ್ಮಕವಾಗಿತ್ತು, ಇದನ್ನು ನಾನು ದೀರ್ಘಕಾಲದ ತನಕ ನೆನಪಿಸಿಕೊಳ್ಳುತ್ತೇನೆ, ಜೈ ಶ್ರೀ ರಾಮ್‌ ಎಂದು ಹೇಳಿದ್ದಾರೆ.‌

ಇತ್ತೀಚಿಗೆ ಟೀಮ್‌ ಇಂಡಿಯಾದ ಸೌತ್ ಆಫ್ರಿಕಾದ ಪ್ರವಾಸದ ವೇಳೆ ಕೇಶವ ಮಹಾರಾಜ ಕ್ರೀಡಾಂಗಣಕ್ಕೆ ಬಂದಾಗ ರಾಮ್ ಸಿಯಾ ರಾಮ್ ಹಾಡನ್ನು ಪ್ಲೇ ಮಾಡುವುದನ್ನು ನೋಡಿ ಕೆ.ಎಲ್.ರಾಹುಲ್ ಕೇಶವ ಮಹರಾಜರ ಬಳಿ‌ನಡೆಸಿದ ಸಂವಾದ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೊಹ್ಲಿ ರಾಮ್ ಸಿಯಾ ರಾಮ್ ಹಾಡಿಗೆ ಬಾಣದ ಹಾಗೆ ಮಾಡಿ ತೋರಿಸಿದ ಆಕ್ಷನ್ ರಾಮನಿಗೆ ಹೋಲಿಸಿ ಈ ಕ್ಲಿಪ್‌ಗಳು ವೈರಲ್ ಆಗಿದ್ದವು.

ಒಟ್ಟಿನಲ್ಲಿ ಎಲ್ಲಾ ತಂಡಗಳ ಮೇಲೆ ದೇವರ ಅನುಗ್ರಹವಿರಲಿ. ಅರ್ಹರೇ ಗೆಲ್ಲಲಿ ಹಾಗೂ ಅತೀ ರೋಚಕ ಸೀಸನ್ ಇದಾಗಿರಲಿ ಎಂಬುದು ನಮ್ಮ ಹಾರೈಕೆ.

You might also like
Leave A Reply

Your email address will not be published.