ಆರ್.ಸಿ.ಬಿ ಮತ್ತು ಸಿ.ಎಸ್.ಕೆ ನಡುವೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯ – ಕಿಂಗ್ ಕೊಹ್ಲಿ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದೇಕೆ?

ಐಪಿಎಲ್‌’ ನಲ್ಲಿ ಎಲ್ಲಾ ತಂಡಗಳು ಒಂದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಾದಿ ಮಾತ್ರ ವಿಭಿನ್ನ. ಹಾಗೆ ನೋಡಿದ್ರೆ ಈ ತಂಡದಲ್ಲಿ ಪ್ರತಿಭಾವಂತ ಆಟಗಾರರಿಗೇನು ಕೊರತೆ ಇಲ್ಲ. ಪ್ರತಿ ಬಾರಿಯೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ತಂಡಗಳ ಪೈಕಿ ಆರ್.ಸಿ.ಬಿ ಮುಂಚೂಣಿಯಲ್ಲಿರುತ್ತದೆ.

ಚೆನ್ನೈನ ಚಿಪಾಕ್​ ಮೈದಾನದಲ್ಲಿ ನಡೆದ ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (CSK vs RCB) ತಂಡ ಸೆಣಸಾಡಿದವು.

ಹೇಗಿತ್ತು ಐ.ಪಿ.ಎಲ್. ನ ಮೊದಲ ಪಂದ್ಯ?

ಮೊದಲ ಪಂದ್ಯದಲ್ಲಿಯೇ ಟಾಸ್ ಗೆದ್ದ ಆರ್​.ಸಿ.ಬಿ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಅಂತಿಮವಾಗಿ ಫಾಫ್​ ಪಡೆ 20 ಓವರ್​ ಗೆ 6 ವಿಕೆಟ್​ ನಷ್ಟಕ್ಕೆ 173 ರನ್​ ಗಳಿಸುವ ಮೂಲಕ ಚೆನ್ನೈ ತಂಡಕ್ಕೆ 174 ರನ್​ ಗಳ ಬಿಗ್​ ಟಾರ್ಗೆಟ್​​ ನೀಡಿತು.

ಈ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ನಿಗದಿತ 18.4 ಓವರ್​ಗೆ 4 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸುವ ಮೂಲಕ ಚೆನ್ನೈ 6 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿತು.

ರಚಿನ್ ಔಟ್ ಗೆ ವಿರಾಟ್’ನ ಭರ್ಜರಿ ರಿಯಾಕ್ಷನ್

ಚೆನ್ನೈ ತಂಡದ ಆರಂಭಿಕ ದಾಂಡಿಗ ರಚಿನ್ ರವೀಂದ್ರ ಕ್ಯಾಚ್ ಕೊಟ್ಟು ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.RCB vs CSK - Cricket Fans erupted against King Kohli for his reaction

 

ಹೌದು! ಗಾಯಕ್ವಾಡ್ 15 ಎಸೆತಗಳಲ್ಲಿ 15 ರನ್ ಗಳಿಸಿದ ನಂತರ ರನ್ ವೇಗವನ್ನು ಮುಂದುವರಿಸಿದ ರಚಿನ್ ಕೇವಲ 15 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಕರಣ್ ಶರ್ಮಾ ಬೌಲಿಂಗ್​ನಲ್ಲಿ ರಚಿನ್ ಸ್ಲಾಗ್ ಸ್ವೀಪ್ ಸರಿಯಾಗಿ ಕನೆಕ್ಟ್ ಆಗದೆ ರಜತ್ ಪಾಟಿದಾರ್‌’ಗೆ ಕ್ಯಾಚ್ ನೀಡಿ ಔಟಾದರು. ಇದೇ ವೇಳೆ ರೊಚ್ಚಿಗೆದ್ದ ಕೊಹ್ಲಿ ರಚಿನ್ ಗೆ ಬೆರಳು ತೋರಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ರವೀಂದ್ರ ಫ್ಯಾನ್ಸ್ ಗೆ ಬೇಸರ ತಂದ ವಿರಾಟ್ ರಿಯಾಕ್ಷನ್

ವಿರಾಟ್ ಕೊಹ್ಲಿ ಅವರು ರಚಿನ್‌’ಗೆ ಎಕ್ಸ್-ರೇಟೆಡ್ ಸೆಂಡ್-ಆಫ್‌’ನಲ್ಲಿ ತಮ್ಮ ಬೆರಳಿನಿಂದ ಸನ್ನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕೊಹ್ಲಿಯ ನಡೆಯಿಂದ ರಚಿನ್ ಹಾಗೂ ಚೆನ್ನೈ ತಂಡದ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೆ, ಇತ್ತ ಹಲವರು ವಿರಾಟ್ ಬೆಂಬಲಕ್ಕೂ ಕೂಡ ನಿಂತಿದ್ದಾರೆ.

You might also like
Leave A Reply

Your email address will not be published.