ಪ್ರಧಾನಿ ಮೋದಿಯವರ ಮುಕುಟಕ್ಕೆ ಭೂತಾನ್’ನ ಅತ್ಯುನ್ನತ ಗೌರವ – ಏನೀ ಪುರಸ್ಕಾರದ ವಿಶೇಷ?

ಜಗಮೆಚ್ಚಿದ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಸಿದ್ಧಿಗೆ ಕೊರತೆಯೇ ಇಲ್ಲ. ಕೇವಲ ದೇಶದಲ್ಲಷ್ಟೇ ಅಲ್ಲದೇ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೋದಿಯವರಿಗೆ ನೆರೆಯ ಭೂತಾನ್ ತನ್ನ ಅತ್ಯುನ್ನತ ಗೌರವವನ್ನು ಸಲ್ಲಿಸಿದೆ. ಏನದು ಪುರಸ್ಕಾರ? ಇಲ್ಲಿದೆ ನೋಡಿ ವಿವರ.

ಇದೇ ಶುಕ್ರವಾರ ಮತ್ತು ಶನಿವಾರ‍ದಂದು ಎರಡು ದಿನಗಳ‌ ಕಾಲ ಭೂತಾನ್ ಪ್ರವಾಸದಲ್ಲಿರುವ ಸನ್ಮಾನ್ಯ ಪ್ರಧಾನಿ‌ ಮೋದಿಯವರಿಗೆ ಅದ್ದೂರಿ ಸ್ವಾಗತ ಕೋರಿರುವ ಭೂತಾನ್, ಇತ್ತೀಚೆಗಷ್ಟೇ ತನ್ನ ನೂತನ ಸರ್ಕಾರವನ್ನು ರಚಿಸಿಕೊಂಡಿತ್ತು. ಹೊಸ ಸರ್ಕಾರ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಹಿಮಾಲಯದ ರಾಷ್ಟ್ರಕ್ಕೆ ಭೇಟಿ ನೀಡಿರುವ ಮೋದಿಯವರಿಗೆ ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಫೊ’ ನ್ನು ನೀಡಿ ಗೌರವಿಸಲಾಗಿದೆ.


ಈ ಗೌರವ ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥ ಎನ್ನುವ ಕೀರ್ತಿಗೆ ಪಾತ್ರರಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿಯನ್ನು 2021 ರ ಡಿಸೆಂಬರ್ 17 ರಂದು‌ ಭೂತಾನ್ ನ ‘114 ನೇ ರಾಷ್ಟ್ರೀಯ ದಿನಾಚರಣೆ’ ಸಂದರ್ಭದಲ್ಲಿ ಪ್ರಧಾನಿಗಳಾದ ಲೊಟೆ ಶೇರಿಂಗ್ ಘೋಷಿಸಿದ್ದರು.
ಆ ಪ್ರಶಸ್ತಿಯನ್ನು ಇದೀಗ ಪ್ರಧಾನಿ‌ ಮೋದಿಯವರ ಭೇಟಿಯ ಮೊದಲ ದಿನವೇ ಪ್ರದಾನ‌ ಮಾಡಲಾಗಿದೆ.‌

“ಭೂತಾನ್ ನ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಫೊ’ ಅನ್ನು ಸ್ವೀಕರಿಸಲು ಹರ್ಷಪಡುತ್ತೇನೆ. ಈ ಪ್ರಶಸ್ತಿಯನ್ನು ನನ್ನ ದೇಶದ 140 ಕೋಟಿ ಜನತೆಗೆ ಸಮರ್ಪಿಸುತ್ತಿದ್ದೇನೆ‌‌” ಎಂದು‌ ಪ್ರಧಾನಿ‌ ಮೋದಿಯವರು ಎಕ್ಸ್ ಖಾತೆ ಮೂಲಕ ಸಂತಸ ಹಂಚಿಕೊಂಡರೆ, ಇತ್ತ ಭೂತಾನ್ ಪ್ರಧಾನಿಯವರು “ನನ್ನ‌ ದೇಶದ ಅತ್ಯುನ್ನತ ಗೌರವ ಡ್ರಕ್ ಗ್ಯಾಲ್ಫೊ ಪುರಸ್ಕಾರಕ್ಕೆ ಪ್ರಧಾನಿ ಮೋದಿಯವರ ಹೆಸರನ್ನು ಘೋಷಿಸಲು ಸಂತಸಪಡುತ್ತೇನೆ” ಎಂದು ತನ್ನ ಎಕ್ಸ್ ಖಾತೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಈವರೆಗೆ ಅಮೆರಿಕಾ, ರಷ್ಯಾ, ಯುಎಇ ರಾಷ್ಟ್ರಗಳ ಅತ್ಯುನ್ನತ ಪ್ರಶಸ್ತಿಗಳನ್ನು ಕೂಡ ಪಡೆದಿರುವ ಪ್ರಧಾನಿ ಮೋದಿಯವರ ಕೀರ್ತಿಯ ಕಿರೀಟಕ್ಕೆ, ಭೂತಾನ್ ದೇಶದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯು ಹಿರಿಮೆ-ಗರಿಮೆಯನ್ನು ಹೆಚ್ಚಿಸಿದೆ.

You might also like
Leave A Reply

Your email address will not be published.