ನಿರ್ವಹಣೆ ಪಾವಿತ್ರ್ಯತೆ ಕಳೆದು ಕೊಳ್ಳುತ್ತಿದೆ ಈ ದೇವಾಲಯ – ದೇವಾಲಯದ ಹಣ ಮಾತ್ರ ಸರ್ಕಾರಕ್ಕೆ

ಭಾರತದ ವಾಸ್ತುಶಿಲ್ಪದ ಬಗ್ಗೆ ಹೇಳಬೇಕೆಂದರೆ, ಇಂದಿಗೂ ವಿಜ್ಞಾನ ಜಗತ್ತಿಗೆ ಚಾಲೆಂಜ್ ಆಗಿ ತೋರಬಲ್ಲ ಹಲವು ನಿಗೂಢತೆಗಳನ್ನು ಉಳಿಸಿಕೊಂಡಿರುವ ಅಪರೂಪದ ಕಲೆ. ಇಂತಹ ಕಲೆಗಳು ನಮಗೆ ಬಹುತೇಕವಾಗಿ ಕಾಣುವುದೇ ನಮ್ಮ ಪ್ರಾಚೀನ ದೇವಸ್ಥಾನಗಳಲ್ಲಿ. ಆದರೆ, ವಿಪರ್ಯಾಸವೆಂದರೆ ವಿದೇಶಿ ಆಕ್ರಮಣಗಳಿಗೆ ಬಹುತೇಕ ಗುರಿಯಾಗಿದ್ದು ಕೂಡ ನಮ್ಮ ದೇವಾಲಯಗಳೇ. ಇಂತಹ ದೇವಸ್ಥಾನಗಳು ನಿರ್ದಿಷ್ಟ ಜಾಗದಲ್ಲಿ ಇದ್ದವು ಅನ್ನುವ ಬಲವಾದ ನಂಬಿಕೆಯಲ್ಲೇ ಇಂದಿಗೂ ಅದೆಷ್ಟೋ ಕಡೆಗಳಲ್ಲಿ ತಾರ್ಕಿಕ ಅಂತ್ಯಕ್ಕೆ ಕಾದು ಕುಳಿತಿದ್ದೇವೆ!!

ಯಾವುದೇ ದೇವಸ್ಥಾನ ಅಥವಾ ಪೂಜಾಮಂದಿರಗಳ ವೈಶಿಷ್ಟ್ಯತೆಯ ಅನಾವರಣಕ್ಕೆ ಅಲ್ಲಿಯ ಸ್ಥಳೀಯ ನಿವಾಸಿಗಳೂ ಅಷ್ಟೇ ಕೊಡುಗೆ ಕೊಟ್ಟವರು. ಅಯೋಧ್ಯೆಯನ್ನೇ ತೆಗೆದುಕೊಂಡಿರೆಂದರೆ ದೇವಾಲಯದ ಮೇಲಾದ ದಾಳಿಯನ್ನು ಕೊನೆ ಕ್ಷಣದವರೆಗೂ ಅಲ್ಲಿಯ ಸ್ಥಳೀಯರು ಸಾಮಾನ್ಯ ಆಯುಧಗಳ ಮೂಲಕ ಎದುರಿಸಿದ್ದರು ಅನ್ನುವ ಉಲ್ಲೇಖವಿದೆ.

ಸಾರಾಯರಸಿ ಹಳ್ಳಿಯ ಜನರಂತೂ ಮೊನ್ನೆ ರಾಮಮಂದಿರ ಉದ್ಘಾಟನೆಯವರೆಗೂ ಹಲವು ಪ್ರತಿಜ್ಞೆಗಳನ್ನು ಕೈಗೊಂಡಿದ್ದರು. ರಾಮನಿಗೆ ದೇಶ ವಿದೇಶಗಳ ಭಕ್ತ ಸಾಗರವಿದ್ದರೂ ಸ್ಥಳೀಯರ ಮಹತ್ವ ಏನು ಎಂಬುದನ್ನು ಇದು ತೋರಿಸುತ್ತದೆ. ಇಂತಹ ಐತಿಹಾಸಿಕ ದೇವಸ್ಥಾನವನ್ನು ಪರಿಚಯಿಸುತ್ತಾ ಇದರ ಉಳಿವಿಗಾಗಿ ಹಲವು ವರ್ಷಗಳಿಂದ ಪಡುತ್ತಿರುವ ಕಷ್ಟವನ್ನು ವಿವರಿಸುತ್ತಿದ್ದರೆ ನಿಜಕ್ಕೂ ಮುಜುರಾಯಿ ಇಲಾಖೆಯ ಮೇಲೆ ಅಸಹ್ಯ ಮೂಡದೇ ಇರದು.

This temple is losing its sanctity in maintenance - only the money of the temple goes to the government

ಮಾಂಡವ್ಯ ಋಷಿಗಳು ತಪಸ್ಸು ಮಾಡಿ ಲಿಂಗ ಪ್ರತಿಷ್ಠಾಪಿಸಿದರು ಎನ್ನುವ ಐತಿಹ್ಯ ಇರುವ ಹಲಸೂರಿನ ಸೋಮೇಶ್ವರ ದೇವಸ್ಥಾನದ ಇತಿಹಾಸ 1300 ವರ್ಷಗಳಿಗೂ ಅಧಿಕ. ಇಲ್ಲಿರುವ ಶಾಸನಗಳು ಅದಕ್ಕೆ ಪೂರಕ ದಾಖಲೆ ಒದಗಿಸುತ್ತದೆ. ದೇವಸ್ಥಾನದ ಪೌಳಿಯನ್ನು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ನಿರ್ಮಿಸಿದರೆಂದು ದೇವಸ್ಥಾನದ ಅಭಿವೃದ್ಧಿ ಚೋಳರ ಕಾಲದಲ್ಲಿ ಆಗಿದೆಯೆಂದೂ ಅದಕ್ಕೆ ಪೂರಕವಾಗುವ ಒಂದಿಷ್ಟು ತಮಿಳು ಶಾಸನಗಳಿವೆ. ಇಂತಹ ದೇವಸ್ಥಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ನಡುವೆ ಇದೇ ಫೆಬ್ರವರಿ 16 ರಿಂದ ಕುಂಭಾಭಿಷೇಕಕ್ಕೆ ದೇವಾಲಯ ಸಜ್ಜಾಗಿದೆ. ಆದರೆ ದೇವಾಲಯ ಕುಂಭಾಭಿಷೇಕಕ್ಕೆ ಸ್ಥಳೀಯರೇ ವಿರೋಧಿಸುತ್ತಿದ್ದಾರೆ.

ಇದಕ್ಕೆ ಕಾರಣ ಏನು?

ದೇವಾಲಯ ಪೂರ್ತಿಯಾಗಿ ನವೀಕರಣಗೊಂಡಿಲ್ಲ, ಆಗಮಶಾಸ್ತ್ರದ ಪ್ರಕಾರ ದುಸ್ಥಿತಿಯಲ್ಲಿರುವ ದೇವಾಲಯದಲ್ಲಿ ಇಂತಹ ಪೂಜೆ ಮಾಡುವಂತಿಲ್ಲ. ಅರ್ಥಾತ್ ದೇವಸ್ಥಾನದ ವಿಮಾನ ಗೋಪುರದಲ್ಲಿ ಈಗಲೂ ಹಲವು ಮೂರ್ತಿಗಳು ಮುರಿದ ಸ್ಥಿತಿಯಲ್ಲಿವೆ. ಯಾಗ ಮಂಟಪ ಹೊಸ ಜಾಗದಲ್ಲಿ ಮತ್ತೆ ನಿರ್ಮಾಣವಾಗುತ್ತಿದೆ. ಗರ್ಭಗುಡಿಯ ಗೋಡೆ ಬಿರುಕು ಬಿಟ್ಟಿದ್ದು ಪ್ರಾಚೀನ ಕಲ್ಲುಗಳು ಸ್ಥಿತಿ ಬದಲಿಸಿವೆ.

ಇನ್ನು ದೇವಸ್ಥಾನದ ಸುತ್ತ ನಿರ್ಮಿಸಿದ ಗೋಡೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಇನ್ನೊಂದು ಭಾಗದ ಗೋಡೆ ಒತ್ತುವರಿಯವರ ಕಪಿಮುಷ್ಟಿಗೆ ಸಿಕ್ಕಿ ಮತ್ತೆ ಹೊಸದಾಗಿ ಕಟ್ಟಲ್ಪಟ್ಟಿದೆ. ಮೂಲ ಮಂಟಪದ ಮೇಲೆ ಮುಕ್ಕಾಲು ಇಂಚು ಸಿಮೆಂಟ್ ಟೈಲ್ಸ್ ನೆಲ ತಲೆ ಎತ್ತಿದ್ದು ಮೂಲ ಸೌಂದರ್ಯವನ್ನೇ ಕೆಡಿಸಿದೆ. ಕಲ್ಲಿನ ಮೂರ್ತಿಗಳು ಸ್ಪಷ್ಟವಾಗಿ ಕಾಣಬೇಕು ಅಂತ ನಡೆಸಿದ ಸ್ಯಾಂಡ್ ಬ್ಲಾಸ್ಟ್ ಎನ್ನುವ ಕೆಮಿಕಲ್ ಪರೀಕ್ಷೆಗೆ ಬಹುತೇಕ ಕಲ್ಲಿನ ಮೂರ್ತಿಗಳು ಸೂಕ್ಷ್ಮತೆ ಕಳೆದುಕೊಂಡಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ ದೇವಸ್ಥಾನದ ಪೌಳಿಯ ಒಳಭಾಗದಲ್ಲಿ ಗಬ್ಬು ನಾರುವ ಡ್ರೈನೇಜ್ ನೀರು ಹರಿಯುವುದಕ್ಕೆ ಒಂದು ತೆರೆದ ಸಣ್ಣ ಕಾಲುವೆ ನಿರ್ಮಿಸಿದ್ದು ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತಾಗಿದೆ.

This temple is losing its sanctity in maintenance - only the money of the temple goes to the government

ಎಂದಿಗೂ ಬತ್ತದ ಕಲ್ಯಾಣಿ ಇಲ್ಲಿಯವರೆಗೆ ಯಾವುದೇ ಬರಗಾಲದಲ್ಲೂ ಬತ್ತಿ ಹೋಗಿಲ್ಲ, ಆದರೆ ಅದರ ಸ್ವಚ್ಚತೆ ಬಗ್ಗೆ, ನಿರ್ವಹಣೆ ಬಗ್ಗೆ ಎಲ್ಲೂ ಮಾತಿಲ್ಲ, ಸುದ್ದಿಯಿಲ್ಲ ಎಂಬುದೇ ಬೇಸರದ ಸಂಗತಿ.

ಇದೆಲ್ಲದರೆಡೆಯಲ್ಲಿ ಈ ಪ್ರಾಚೀನ ವಿಗ್ರಹಗಳಿಗೆ ಪೇಂಟ್ ಕೊಡುವ ಮೂಲಕ ಆಧುನಿಕತೆಯ ಸ್ಪರ್ಶವನ್ನು ಕೊಡಲಾಗಿದೆ. ಅನೇಕರ ಬಳಿ ಡೊನೇಶನ್ ಕೇಳಿ ನಿರ್ಮಿಸಿದ ಬೆಳ್ಳಿ ರಥದಲ್ಲೂ ಅಕ್ರಮ ನಡೆದಿದೆ. ಇಷ್ಟೆಲ್ಲಾ ಮಾಡಿ ನಿರ್ಮಿಸಿದ ಬೆಳ್ಳಿರಥ ಎಳೆಯುವುದಕ್ಕೂ ಜಾಗ ಕೂಡ ಸರಿ ಇಲ್ಲ. ಅದೂ ಮೂಲೆಗುಂಪಾಗಿದೆ. ಇಂತಹ ಸಾಲು ಸಾಲು ಎಡವಟ್ಟುಗಳ ನಡುವೆ ಈಗ ಕುಂಭಾಭಿಷೇಕ. ಈ ಕುಂಭಾಭಿಷೇಕ ನಮ್ಮ ಒಳಿತಿಗಿಂತ ಕೆಡುಕಿಗೇ ಕಾರಣವಾಗಬಹುದು ಅನ್ನುವ ಭಯದಲ್ಲಿ ಸದ್ಯ ಸ್ಥಳೀಯರು ವಿರೋಧಿಸುತ್ತಿದ್ದಾರೆ.

ವಿರೋಧ ಮಾಡಿ ಪ್ರಯೋಜನವೇನು?

ದೇವಾಲಯ ಸರ್ಕಾರದ ಆಸ್ತಿ. ಅಲ್ಲಿ ಏನೇ ಆಗಬೇಕಾದರೂ ಇಲಾಖೆ, ಪರ್ಮಿಷನ್ ಅಂತ ನೂರಾರು ಜನ ಅಧಿಕಾರಿಗಳ ಬಳಿ ಹೋಗ್ಬೇಕು. ಕೊನೇ ಪಕ್ಷ ದೇವಸ್ಥಾನಕ್ಕೂ ಬರದ ಒಂದಿಷ್ಟು ಅಧಿಕಾರಿಗಳಿರುವಾಗ ಇವೆಲ್ಲಾ ಸೊರಗಿ ಹೋಗದೆ ಇನ್ನೇನು ಉಳಿದಾವು?

ಟ್ರಿಪ್ ಹೆಸರಲ್ಲಿ ಶಿಲ್ಪಕಲೆ ತೋರಿಸಲು ವಿದ್ಯಾರ್ಥಿಗಳನ್ನು ಶಾಲೆಯಿಂದ 300 ಕಿ.ಮೀ ಹೊರಗೆ ಕರೆದುಕೊಂಡು ಹೋಗಿ ಎಂಜಾಯ್ ಮಾಡಿ ಬರುವವರು ನಾವಲ್ಲವೇ. ನಮ್ಮಲ್ಲೇ ಇರುವ ಈ ಶ್ರೀಮಂತಿಕೆ ನೋಡಲು ವಿದೇಶದಿಂದ ಪ್ರತಿದಿನ ಹತ್ತಾರು ಜನ ಬರುತ್ತಾರೆ ಅನ್ನೋದೆ ಸಮಾಧಾನ. ಹೀಗೆ ಆದರೆ ಮತ್ತೊಂದು ಮಥುರಾ, ಕಾಶಿ ಹಲಸೂರು ಸೋಮೇಶ್ವರ ಆದರೆ ಅಚ್ಚರಿಯಿಲ್ಲ!

You might also like
Leave A Reply

Your email address will not be published.