ರಾಮಲಲಾ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ನಂತರ ಮೋದಿ ಮಾಡಿದ ಮೊದಲ ಕೆಲಸ ಇದು

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಿಂದೆ ಲಕ್ಷಾಂತರ ಜನರ ತ್ಯಾಗ, ಬಲಿದಾನ, ನ್ಯಾಯಾಲಯದಲ್ಲಿನ ಸತತ ಹೋರಾಟ ಹಾಗೂ ಹಲವಾರು ಜನರ ಪರಿಶ್ರಮವಿದ್ದರೂ, ಮನೆಯ ಯಜಮಾನನಂತೆ ಮುಂದೆ‌ ನಿಂತು ಕಾರ್ಯಕ್ರಮಗಳನ್ನು ನಡೆಸಿ, ಚೆಂದಗಾಣಿಸಿಕೊಟ್ಟಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ ಸಾಮಾನ್ಯರು ಹೃದಯ ತುಂಬಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಹಾಗಾದರೆ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ನಂತರ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮೊದಲು ಮಾಡಿದ ಅಭಿವೃದ್ಧಿ ಕಾರ್ಯ ಯಾವುದು ?

ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಶುಭ ಘಳಿಗೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್ ಮೇಲ್ಛಾವಣಿ ಒದಗಿಸುವ ಸಲುವಾಗಿ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ.

ಜಗತ್ತಿನ ಸಮಸ್ತ ಭಕ್ತರೂ ಪ್ರತಿದಿನವೂ ಸೂರ್ಯವಂಶಿಯಾದ ಭಗವಾನ್ ಶ್ರೀ ರಾಮನಿಂದ ಬೆಳಕನ್ನು ಪಡೆಯುತ್ತಾರೆ.‌ ಇಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾನ ಕಾರ್ಯ ಕಾರ್ಯಕ್ರಮದ ಶುಭ ಅವಸರದಲ್ಲಿ ಭಾರತದ ಜನರು ತಮ್ಮ‌ಮನೆಗಳ ಛಾವಣಿಗಳ ಮೇಲೆ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಹೊಂದಿರಬೇಕೆಂಬ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ.

ಅಯೋಧ್ಯೆಯಿಂದ ನಾನು ಹಿಂದುರುಗಿದ ಬಳಿಕ ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’. ಈ ಯೋಜನೆಯು ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್ ಮೇಲ್ಛಾವಣಿಗಳನ್ನು ಅಳವಡಿಸುವ ಸಂಕಲ್ಪದೊಂದಿಗೆ ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಬಡ ಮತ್ತು ಮಧ್ಯಮವರ್ಗದ ಜನರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೇ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಆತ್ಮ ನಿರ್ಭರವನ್ನಾಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಕೇವಲ ದೇವಸ್ಥಾನ ದೇವರು ಎಂದು ಸುತ್ತುತ್ತಾರೆ ಎಂದು ಹೇಳುವ ಕೆಲವು ಪಟಾಲಂನ ಗ್ಯಾಂಗ್‌ಗಳಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಮೋದಿಯ ನಡೆ ಯಾವಾಗಲೂ ಅನುಕರಣೀಯವಾಗಿರುತ್ತದೆ.

ಇನ್ನು ಭರತ ವರ್ಷದ ಇತಿಹಾಸದಲ್ಲೇ ಜನವರಿ 22, 2024 ಅಜರಾಮರವಾಗಿ ಉಳಿಯಲಿದ್ದು ಅಯೋಧ್ಯೆಯ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಿಂದ ಕೋಟ್ಯಂತರ ರಾಮ ಭಕ್ತರು ಭಕ್ತಿಪರವಶತೆಯಲ್ಲಿ ಲೀನರಾಗಿದ್ದು ರಾಮಯುಗದ, ರಾಮ ರಾಜ್ಯದ ನವ ಶಖೆ ಆರಂಭವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

You might also like
Leave A Reply

Your email address will not be published.